ನವದೆಹಲಿ: ಮಕರ ಸಂಕ್ರಾಂತಿ ನಂತರದ ದಿನವಾದ ಇಂದು ಮುಂಜಾನೆ ಶುಭ ಮುಹೂರ್ತವಿರುವ ಕಾರಣ, ಹೊಸ ಸಂಸತ್ತಿನ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿದೆ.
ಮುಂಜಾನೆ ಅದ್ಭುತ ಮುಹೂರ್ತವೆಂದು ಪರಿಗಣಿಸಿದ್ದರಿಂದ ಕಟ್ಟಡ ನಿರ್ಮಾಣದ ಹೊಣೆ ಹೊತ್ತಿರುವ ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್‌ಗೆ ಕೇಂದ್ರ ಲೋಕೋಪಯೋಗಿ ಇಲಾಖೆ ಸೂಚಿಸಿದೆ. ಪ್ರಧಾನಿ ಮೋದಿ ಅವರು ಡಿಸೆಂಬರ್ 10ರಂದು ಹೊಸ ಸಂಸತ್ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಇದನ್ನೂ ಓದಿ: ಟಾಟಾ ತೆಕ್ಕೆಗೆ ಹೊಸ ಸಂಸತ್ ಭವನ ನಿರ್ಮಾಣದ ಗುತ್ತಿಗೆ: ಹೇಗಿರಲಿದೆ ನ್ಯೂ ಪಾರ್ಲಿಮೆಂಟ್ ಹೌಸ್?
14 ಸದಸ್ಯರ ಪಾರಂಪರಿಕ ಸಮಿತಿಯು ಸರ್ಕಾರದ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯಡಿ ಹೊಸ ಸಂಸತ್ತು ಕಟ್ಟಡ ನಿರ್ಮಾಣಕ್ಕೆ ಈ ವಾರದ ಆರಂಭದಲ್ಲಿ ಅನುಮೋದನೆ ನೀಡಿದೆ. ಟಾಟಾ ಸಂಸ್ಥೆಯು ಯೋಜನೆಯ ನಿರ್ಮಾಣ ಕಾರ್ಯಗಳನ್ನು ಪ್ರಾರಂಭಿಸಲು ಬೇಕಾದ ಯಂತ್ರೋಪಕರಣ ಮತ್ತು ಇತರ ವಸ್ತುಗಳನ್ನು ಸಜ್ಜುಗೊಳಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಹೀಗಿರಲಿದೆ ನೂತನ ಸಂಸತ್ ಭವನ... ಡಿ.10ಕ್ಕೆ ಶಂಕುಸ್ಥಾಪನೆ
- ಹೊಸ ಸಂಸತ್ ಕಟ್ಟಡವನ್ನು ಟಾಟಾ ಪ್ರಾಜೆಕ್ಟ್ ಲಿಮಿಟೆಡ್ ನಿರ್ಮಿಸುತ್ತಿದೆ.
- ಹೊಸ ಕಟ್ಟದ ವಿನ್ಯಾಸವನ್ನು ಎಚ್ಸಿಪಿ, ಪ್ಲಾನಿಂಗ್ ಮತ್ತು ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್ ಸಿದ್ಧಪಡಿಸಿದೆ
- 2022ರ ವೇಳೆಗೆ ಕಟ್ಟಡ ಉದ್ಘಾಟನೆಯಾಗುವ ನಿರೀಕ್ಷೆ
- 64,500 ಚ ಮೀಟರ್ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ
- ₹ 971 ಕೋಟಿ ಭವನ ನಿರ್ಮಾಣಕ್ಕೆ ತಗಲುವ ವೆಚ್ಚ
- ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳು ಬರಲು ಒಂದು ದ್ವಾರ, ಲೋಕಸಭೆ ಸ್ಪೀಕರ್, ರಾಜ್ಯಸಭೆಯ ಅಧ್ಯಕ್ಷರು ಮತ್ತು ಸಂಸದರು ಬರಲು ಒಂದು ದ್ವಾರ, ಸಾಮಾನ್ಯ ದ್ವಾರ, ಸಂಸದರಿಗಾಗಿ ಮತ್ತೊಂದು ಪ್ರವೇಶ ದ್ವಾರ ಹಾಗೂ ಎರಡು ಸಾರ್ವಜನಿಕ ಪ್ರವೇಶ ದ್ವಾರಗಳು ಇರಲಿವೆ.