ETV Bharat / bharat

ಕಾಮುಕ ಕಾನ್ಸ್​​ಟೇಬಲ್​​​​: ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿಬಿದ್ದ! - ಹೈದರಾಬಾದ್​ ಪೊಲೀಸ್ ಕಾನ್ಸ್​ಟೇಬಲ್​​ ಕೇಸ್​

ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಲು ಹೋಗಿ ಕಾಮುಕ ಪೊಲೀಸ್ ಪೇದೆಯೋರ್ವ ಸಿಕ್ಕಿಬಿದ್ದಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ
author img

By

Published : Dec 2, 2021, 8:21 PM IST

ರಂಗಾರೆಡ್ಡಿ​​(ತೆಲಂಗಾಣ): ಮನೆಯಲ್ಲಿ ಯಾರು ಇಲ್ಲದ ವೇಳೆ ಅಪ್ರಾಪ್ತೆಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಕಾಮುಕ ಕಾನ್ಸ್​​ಟೇಬಲ್​ ಒಬ್ಬ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆತನ ವಿರುದ್ಧ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತೆಲಂಗಾಣದ ರಂಗಾರೆಡ್ಡಿಯಲ್ಲಿ ಈ ಘಟನೆ ನಡೆದಿದೆ.

ಹೈದರಾಬಾದ್​​​ನ ಕುಕಟಪಲ್ಲಿಯ ಪೊಲೀಸ್​ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 35 ವರ್ಷದ ಶೇಖರ್​​​ ರಂಗಾರೆಡ್ಡಿ ಜಿಲ್ಲೆಯ ಶಂಕರಪಲ್ಲಿ ನಿವಾಸಿಯಾಗಿದ್ದಾನೆ. ಕಾನ್ಸ್​​ಟೇಬಲ್​ ಮನೆಯೊಂದರಲ್ಲಿ ಬೇರೆ ಕುಟುಂಬ ಕಳೆದ ಕೆಲ ವರ್ಷಗಳಿಂದ ಬಾಡಿಗೆಗೆ ವಾಸವಾಗಿತ್ತು. ಬುಧವಾರ ರಾತ್ರಿ ಮನೆಯಲ್ಲಿ ವಾಸವಾಗಿದ್ದ ಎಲ್ಲರೂ ಹೊರಗಡೆ ಹೋಗಿದ್ದರು. ಈ ವೇಳೆ, ಬಾಲಕಿ ಒಬ್ಬಳೇ ಉಳಿದುಕೊಂಡಿದ್ದಳು. ಈ ಸಂದರ್ಭದಲ್ಲಿ ಆಕೆಯ ಮೇಲೆ ದುಷ್ಕೃತ್ಯವೆಸಗಲು ಶೇಖರ್ ಮುಂದಾಗಿದ್ದಾನೆ.

ಇದನ್ನೂ ಓದಿರಿ: ರಾಜ್ಯಸಭೆಯಲ್ಲಿ 'ಅಣೆಕಟ್ಟು ಸುರಕ್ಷತಾ ಬಿಲ್'​.. ಆಯ್ಕೆ ಸಮಿತಿಗೆ ಕಳುಹಿಸಲು ವಿಪಕ್ಷಗಳ ಪಟ್ಟು

ಪೊಲೀಸ್ ಕಾನ್ಸ್​​ಟೇಬಲ್​ ಅತ್ಯಾಚಾರವೆಸಗಲು ಮುಂದಾಗುತ್ತಿದ್ದಂತೆ ಬಾಲಕಿ ಜೋರಾಗಿ ಕಿರುಚಿದ್ದಾಳೆ. ತಕ್ಷಣವೇ ಸ್ಥಳಕ್ಕಾಗಮಿಸಿರುವ ಸ್ಥಳೀಯರು ಆತನನ್ನ ರೆಡ್​ಹ್ಯಾಂಡ್​ ಆಗಿ ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಇದರ ಬೆನ್ನಲ್ಲೇ ಬಾಲಕಿ ಪೋಷಕರು ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಜೊತೆಗೆ ಸಂತ್ರಸ್ತ ಬಾಲಕಿಯನ್ನ ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ. ಇದರ ಮಧ್ಯೆ ಸ್ಥಳೀಯರು ಕೂಡ ಕಾನ್ಸ್​ಟೇಬಲ್​ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಅಲ್ಲಿನ ಜನರಿಗೂ ಕಿರುಕುಳ ನೀಡುತ್ತಿದ್ದನು ಎಂಬುದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.