ಪ್ರಯಾಗರಾಜ್ (ಉತ್ತರ ಪ್ರದೇಶ): ಉಮೇಶ್ ಪಾಲ್ ಹತ್ಯೆಗೆ ಫಿಲ್ಮಿ ಶೈಲಿಯಲ್ಲಿ ಸಂಚು ರೂಪಿಸಲಾಗಿತ್ತು. ಉಮೇಶ್ ಪಾಲ್ ಹತ್ಯೆಗೂ ಮುನ್ನ ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ 'ದೃಶ್ಯಂ' ಚಿತ್ರದ ಮಾದರಿಯಲ್ಲಿ ಪೊಲೀಸರನ್ನು ದಾರಿ ತಪ್ಪಿಸುವ ಯೋಜನೆ ರೂಪಿಸಲಾಗಿತ್ತು ಎಂಬ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಸಂಚುಕೋರರಿಗೆ ಉಂಟಾಗಿತ್ತು ಹೆದರಿಕೆ: ಉಮೇಶ್ ಪಾಲ್ ಕೊಲೆ ಪ್ರಕರಣದಲ್ಲಿ ಶೂಟೌಟ್ ವೇಳೆ, ಅತೀಕ್ ಅಹ್ಮದ್ ಅವರ ಮಗ ಕಾರಿನಿಂದ ಇಳಿಯಬಾರದಿತ್ತು. ಆದರೆ, ಅಸದ್ ಪಿಸ್ತೂಲ್ ತೆಗೆದುಕೊಂಡು ಕಾರಿನಿಂದ ಹೊರಬಂದು ವೇಗವಾಗಿ ಗುಂಡು ಹಾರಿಸಿ ಪ್ಲ್ಯಾನ್ ಹಾಳು ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ತನಿಖೆಯ ಸಮಯದಲ್ಲಿ, ಉಮೇಶ್ ಪಾಲ್ ಹತ್ಯೆಯನ್ನು ಯೋಜಿಸುವಾಗ, ಅತೀಕ್ ಅಹ್ಮದ್ ಅವರ ಮಗ ಅಸದ್ ಯೋಜನೆಯಲ್ಲಿ ಸೇರಿಸಲಾಗಿಲ್ಲ ಎಂದು ಪೊಲೀಸರಿಗೆ ತಿಳಿದುಬಂದಿತು. ಆದರೆ, ಇದರ ಹೊರತಾಗಿಯೂ ಘಟನೆಯ ನಂತರ, ಅಸದ್ ಹೆಸರನ್ನು ಹೇಗಾದರೂ ಪ್ರಕರಣದಲ್ಲಿ ಸೇರಿಸಬಹುದು ಎಂದು ಸಂಚುಕೋರರು ಹೆದರಿದ್ದರು.
‘ದೃಶ್ಯಂ’ ಚಿತ್ರದ ಮಾದರಿಯಲ್ಲಿ ಭಾರಿ ಸಂಚು: ಬಹುಶಃ ಇದೇ ಕಾರಣಕ್ಕಾಗಿಯೇ ಅಸದ್‌ನನ್ನು ಕೊಲೆ ಪ್ರಕರಣದಿಂದ ಪಾರು ಮಾಡಲು ‘ದೃಶ್ಯಂ’ ಚಿತ್ರದ ಮಾದರಿಯಲ್ಲಿ ಸಂಚು ರೂಪಿಸಲಾಗಿತ್ತು. ಆದ್ದರಿಂದ ಅಸಾದ್‌ನ ಮೊಬೈಲ್ ಅನ್ನು ಲಕ್ನೋಗೆ ಕಳುಹಿಸಲಾಗಿದೆ. ಆ ಮೊಬೈಲ್ ಅನ್ನು ಅವನ ಫ್ಲಾಟ್‌ನಲ್ಲಿ ಇರಿಸಲಾಗಿದೆ. ಇದರ ಮೂಲಕ ಅಸಾದ್‌ನ ಮೊಬೈಲ್ ಸ್ಥಳವು ಗೋಚರಿಸುತ್ತದೆ ಎಂಬ ಕಾರಣದಿಂದ ಕೊಲೆ ನಡೆದಾಗ ಲಕ್ನೋದಲ್ಲಿನ ಅವನ ಫ್ಲಾಟ್‌ನಲ್ಲಿದ್ದ ಎಂದು ಸಾಬೀತುಪಡಿಸಲು ಪ್ರಯತ್ನಿಸಲಾಗಿದೆ.
ಅಸದ್‌ನನ್ನು ಬಚಾವ್ ಮಾಡಲು ಮಾಸ್ಟರ್ ಪ್ಲ್ಯಾನ್: ಕೊಲೆಗೂ ಮುನ್ನ ಲಖನೌದಲ್ಲಿ ಅಸಾದ್‌ನ ಎಟಿಎಂ ಕಾರ್ಡ್‌ನಿಂದ ಉದ್ದೇಶಪೂರ್ವಕವಾಗಿ ಹಣವನ್ನು ತೆಗೆದುಕೊಳ್ಳಲಾಗಿದೆ. ಆ ದಿನ ಅಸಾದ್ ಇದ್ದದ್ದು ಕೂಡಾ ಲಕ್ನೋದಲ್ಲಿ ಎಂದು ಸಾಬೀತು ಪಡಿಸುವ ಕಾರ್ಯ ನಡೆದಿದೆ. ಇದರಿಂದ ಎಟಿಎಂನಿಂದ ಹಣವನ್ನು ತೆಗೆದುಕೊಳ್ಳುವುದು ಲಕ್ನೋದಲ್ಲಿ ಮಾತ್ರ ತೋರಿಸುತ್ತದೆ. ಇದರ ನೆರವಿನಿಂದ ಅಸದ್ ಹತ್ಯೆಯಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಬಿಂಬಿಸುವ ಯೋಜನೆ ರೂಪಿಸಲಾಗಿತ್ತು.
ಅಸಾದ್ ತಲೆಗೆ ರೂ. 2.5 ಲಕ್ಷ ಬಹುಮಾನ: ಆದರೆ, ಹತ್ಯೆಯ ವೇಳೆ ಅಸಾದ್ ಪಿಸ್ತೂಲ್ ಹಿಡಿದು ಕಾರ್ನಿಂದ ಇಳಿದು ಉಮೇಶ್ ಪಾಲ್ ಮೇಲೆ ಗುಂಡು ಹಾರಿಸಿದ್ದಾನೆ. ಇದಾದ ನಂತರ, ಆತನನ್ನು ಉಳಿಸಲು ಮಾಡಿದ ಎಲ್ಲಾ ಯೋಜನೆಗಳು ವಿಫಲವಾಗಿವೆ. ಏಕೆಂದರೆ ಕಪ್ಪು ಬಟ್ಟೆಯಲ್ಲಿ ಬಿಳಿ ಕ್ರೆಟಾ ಕಾರ್ನಿಂದ ಹೊರಬಂದ ಶೂಟರ್ ಅನ್ನು ಅಸಾದ್ ಎಂದು ಗುರುತಿಸಲಾಗಿದೆ. ಅಸಾದ್ ಅಹ್ಮದ್‌ನನ್ನು ಹಿಡಿಯಲು ಪೊಲೀಸರು ಮತ್ತು ಎಸ್‌ಟಿಎಫ್ ಬೇಟೆ ಪ್ರಾರಂಭಿಸಿದ್ದು, ಅವನ ತಲೆಗೆ ರೂ 2.5 ಲಕ್ಷ ಬಹುಮಾನ ಘೋಷಿಸಿದ್ದಾರೆ.
ಅಸಾದ್ ಹುಡುಕಾಟಕ್ಕಾಗಿ ಪೊಲೀಸರಿಂದ ಮಿಂಚಿನ ಸಂಚಾರ: ಆದರೆ, ಇದುವರೆಗೂ ಆರೋಪಿಗಳನ್ನು ಪತ್ತೆ ಹಚ್ಚಲು ತಂಡಕ್ಕೆ ಸಾಧ್ಯವಾಗಿಲ್ಲ. ಪೊಲೀಸರು ಉತ್ತರ ಪ್ರದೇಶ, ಬಿಹಾರದಲ್ಲಿ ಮಾತ್ರವಲ್ಲದೇ ಪಶ್ಚಿಮ ಬಂಗಾಳದಿಂದ ನೇಪಾಳದವರೆಗೆ ಹುಡುಕಾಟವನ್ನು ಆರಂಭಿಸಿದ್ದಾರೆ. ಪ್ರಯಾಗ್‌ರಾಜ್ ಪೊಲೀಸರ ಹೊರತಾಗಿ, ಯುಪಿ ಎಸ್‌ಟಿಎಫ್ ಮತ್ತು ಎಸ್‌ಟಿಎಫ್‌ನ ಐಜಿ ಕೂಡ ಅಸಾದ್ ಹುಡುಕಾಟದಲ್ಲಿ ತೊಡಗಿದ್ದಾರೆ. ಘಟನೆ ನಡೆದು 15 ದಿನ ಕಳೆದರೂ ಅಸಾದ್‌ನನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ.
ಇದನ್ನೂ ಓದಿ: ಅಹಮದಾಬಾದ್ 1400 ಕೋಟಿ ನಕಲಿ ಬಿಲ್ ಹಗರಣ, ಮಾಸ್ಟರ್ ಮೈಂಡ್ ಬಂಧನ