ನವದೆಹಲಿ : ನೀಟ್ ಉತ್ತರ ಪತ್ರಿಕೆಯಲ್ಲಿ ಗೊಂದಲ ಏರ್ಪಟ್ಟು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಅಭ್ಯರ್ಥಿಗಳಿಗೆ ಆರಂಭಿಕ ಜಯ ಸಿಕ್ಕದೆ. ಭಿನ್ನಾಭಿಪ್ರಾಯ ಹೊಂದಿರುವ ಅಭ್ಯರ್ಥಿಯ ಸಮ್ಮುಖದಲ್ಲಿ ಮೂಲ ಉತ್ತರ ಪತ್ರಿಕೆ ಒದಗಿಸಲು ಪರಿಗಣಿಸುವಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್ಟಿಎ) ಸುಪ್ರೀಂಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿ ಎನ್ ನಾಗೇಶ್ವರ್ ರಾವ್, ಹೇಮಂತ್ ಗುಪ್ತಾ ಮತ್ತು ಅಜಯ್ ರಾಸ್ತೋಗಿ ಅವರ ನ್ಯಾಯಪೀಠವು 19 ನೀಟ್ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದು, ಪರೀಕ್ಷಾ ಸಂಸ್ಥೆಗೆ ಈ ಸೂಚನೆ ನೀಡಿದೆ.
ಅಭ್ಯರ್ಥಿಗಳು ನೀಟ್ ಫಲಿತಾಂಶದ ಬಳಿಕ ಅವರ ಫಲಿತಾಂಶದಲ್ಲಿ ಗೊಂದಲ ಏರ್ಪಟ್ಟ ಬಗ್ಗೆ ಅರ್ಜಿಯಲ್ಲಿ ತಿಳಿಸಿದ್ದರು. ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾದ ಓಎಂಆರ್ ಶೀಟ್ನಲ್ಲಿ ದಾಖಲಾದ ಉತ್ತರಗಳು ಮತ್ತು ನಾವು ಬರೆದಿದ್ದ ಉತ್ತರಗಳು ಬೇರೆ ಬೇರೆಯಾಗಿವೆ, ಅವುಗಳು ಒಂದಕ್ಕೊಂದು ಹೊಂದಿಕೆಯಾಗುತ್ತಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
ಇದಲ್ಲದೆ ಕೆಲವರ ಉತ್ತರ ಪತ್ರಿಕೆಯಲ್ಲಿ ಅಂಕಗಳು ಬದಲಾಗಿದ್ದವು, ರೋಲ್ ನಂಬರ್, ಸಹಿಯಲ್ಲಿಯೂ ಬದಲಾವಣೆ ಕಂಡು ಬಂದಿತ್ತು ಎಂದು ಸುಪ್ರೀಂಕೋರ್ಟ್ಗೆ ದೂರಿದ್ದರು. ಅಕ್ಟೋಬರ್ 16ರಂದು ಘೋಷಣೆಯಾದ ನೀಟ್ ಫಲಿತಾಂಶವನ್ನು ರದ್ದುಗೊಳಿಸಬೇಕು ಅಂತಲೂ ಅರ್ಜಿಯಲ್ಲಿ ನಮೂದಿಸಿದ್ದರು.
ಇದನ್ನೂ ಓದಿ: ಇಪಿಎಫ್ ಕಾಯ್ದೆ ನಿಯಮಗಳು ಖಾಸಗಿ ಭದ್ರತಾ ಸಂಸ್ಥೆಗಳಿಗೂ ಅನ್ವಯಿಸುತ್ತವೆ: ಸುಪ್ರೀಂ