ನವದೆಹಲಿ: ಪಕ್ಷದ ನೀತಿ ನಿರ್ಧಾರಗಳ ಬಗ್ಗೆ ಹಿರಿಯ ನಾಯಕರ ಮುನಿಸು ಮುಂದುವರಿದ ನಡುವೆಯೂ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಕುರಿತು ಚರ್ಚೆ ಮತ್ತು ದಿನಾಂಕ ನಿಗದಿಗಾಗಿ ಪಕ್ಷದ ಅತ್ಯುನ್ನತ ನಿರ್ಧಾರಗಳನ್ನು ಕೈಗೊಳ್ಳುವ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ)ಸಭೆ ಇಂದು ನಡೆಯಲಿದೆ.
ಅನಾರೋಗ್ಯ ನಿಮಿತ್ತ ಚಿಕಿತ್ಸೆ ಪಡೆಯಲು ವಿದೇಶಕ್ಕೆ ತೆರಳಲಿರುವ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವರ್ಚುಯಲ್ ಮೂಲಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಕೂಡ ತಾಯಿಯ ಜೊತೆಗಿರಲಿದ್ದಾರೆ. ಅಧ್ಯಕ್ಷರ ಆಯ್ಕೆಯ ಕುರಿತು ಚರ್ಚಿಸುವುದೇ ಸಿಡಬ್ಲ್ಯೂಸಿ ಸಭೆಯ ಏಕೈಕ ಅಜೆಂಡಾ ಎನ್ನಲಾಗಿದೆ.
-
A virtual meeting of the CWC will be held on the 28th August, 2022 at 3:30 PM, to approve the exact schedule of dates for the election of the Congress President. Congress President Smt. Sonia Gandhi will preside over the CWC meeting.
— K C Venugopal (@kcvenugopalmp) August 24, 2022 " class="align-text-top noRightClick twitterSection" data="
">A virtual meeting of the CWC will be held on the 28th August, 2022 at 3:30 PM, to approve the exact schedule of dates for the election of the Congress President. Congress President Smt. Sonia Gandhi will preside over the CWC meeting.
— K C Venugopal (@kcvenugopalmp) August 24, 2022A virtual meeting of the CWC will be held on the 28th August, 2022 at 3:30 PM, to approve the exact schedule of dates for the election of the Congress President. Congress President Smt. Sonia Gandhi will preside over the CWC meeting.
— K C Venugopal (@kcvenugopalmp) August 24, 2022
"ಎಐಸಿಸಿ ಅಧ್ಯಕ್ಷರ ಚುನಾವಣೆ ದಿನಾಂಕವನ್ನು ನಿಗದಿ ಮಾಡಲು ಆಗಸ್ಟ್ 28 ರಂದು ಮಧ್ಯಾಹ್ನ 3:30 ಕ್ಕೆ ಕಾಂಗ್ರೆಸ್ ಕಾರ್ಯಕಾರಿಯ ವರ್ಚುವಲ್ ಸಭೆ ನಡೆಯಲಿದೆ. ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ಜರುಗಲಿದೆ" ಎಂದು ಎಐಸಿಸಿ ಪ್ರಭಾರಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಟ್ವೀಟ್ ಮಾಡಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ರಾಜೀನಾಮೆ ನೀಡಿ ಪಕ್ಷದ ನಿರ್ಧಾರಗಳು ಮತ್ತು ರಾಹುಲ್, ಸೋನಿಯಾ ಗಾಂಧಿ ಅವರ ಬಗ್ಗೆ ಕಟುವಾಗಿ ಟೀಕಿಸಿದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಮತ್ತೊಬ್ಬ ಹಿರಿಯ ನಾಯಕ ಆನಂದ್ ಶರ್ಮಾ ಅವರು ಶನಿವಾರ ಸಂಜೆ ದೆಹಲಿಯಲ್ಲಿ ಆಜಾದ್ ಅವರನ್ನು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದ್ದು, ಅವರೂ ಕೂಡ ಪಕ್ಷ ತೊರೆಯುವ ಬಗ್ಗೆ ಗುಸುಗುಸು ಶುರುವಾಗಿದೆ.
ಈ ಹಿಂದೆ ನಿಗದಿ ಮಾಡಿದಂತೆ ಆಗಸ್ಟ್ 21 ರಿಂದ 28 ರ ಮಧ್ಯೆ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ನಡೆಯಬೇಕಿತ್ತು. ಆದರೆ, ಕೆಲ ರಾಜ್ಯಗಳಲ್ಲಿ ಪಕ್ಷದ ಸದಸ್ಯತ್ವ ಪ್ರಕ್ರಿಯೆಯು ಪೂರ್ಣಗೊಳ್ಳದ ಕಾರಣ ತನ್ನ ಸಾಂಸ್ಥಿಕ ಚುನಾವಣೆಯನ್ನು ಪಕ್ಷ ವಿಳಂಬಗೊಳಿಸಿದೆ.
ರಾಹುಲ್ ಅಧ್ಯಕ್ಷರಾಗಲು ಒತ್ತಾಯ: ಇನ್ನು ರಾಹುಲ್ ಗಾಂಧಿ ಅವರು ಮತ್ತೆ ಪಕ್ಷದ ಅಧ್ಯಕ್ಷ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಲಾಗುತ್ತಿದೆ. ಇದಕ್ಕೆ ರಾಹುಲ್ ಸುತಾರಾಂ ಒಪ್ಪಿಗೆ ಸೂಚಿಸುತ್ತಿಲ್ಲ. ಇದರಿಂದ ಅಧ್ಯಕ್ಷರ ಆಯ್ಕೆ ಕಗ್ಗಂಟಾಗಿದೆ. ಇದೇ ವೇಳೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಪಕ್ಷದ ಅಧ್ಯಕ್ಷರಾದರೆ ಗಾಂಧಿ ಕುಟುಂಬ ಅವರನ್ನು ಬೆಂಬಲಿಸಲಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ.
2019 ರ ಸಂಸತ್ ಚುನಾವಣೆಯಲ್ಲಿ ಪಕ್ಷವು ಸೋತ ಬಳಿಕ ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.
ಇದನ್ನೂ ಓದಿ: ಬಿಲ್ಕಿಸ್ ಬಾನು ಪ್ರಕರಣ, ಅತ್ಯಾಚಾರಿಗಳ ಬಿಡುಗಡೆ ಗುಜರಾತ್ ಸರ್ಕಾರದ ನಿರ್ಲಜ್ಜ ಕ್ರಮ: ಪ್ರಕಾಶ್ ರೈ