ETV Bharat / bharat

ಪಂಚ ರಾಜ್ಯ ಚುನಾವಣೆಯಲ್ಲಿ ಹೀನಾಯ ಸೋಲು: ಕಾಂಗ್ರೆಸ್​​ ಕಾರ್ಯಕಾರಿಣಿ ಸಮಿತಿ ಸಭೆ ಆರಂಭ - ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ

ಮುಂಬರುವ ಲೋಕಸಭೆ ಚುನಾವಣೆ ವೇಳೆಗೆ ಪುನಶ್ಚೇತನಗೊಳ್ಳುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್​ಗೆ ಪಂಚ ರಾಜ್ಯ ಚುನಾವಣಾ ಫಲಿತಾಂಶವು ಆಘಾತವನ್ನು ತಂದೊಡ್ಡಿದೆ. ಅಲ್ಲದೇ, ಪಂಜಾಬ್​ನಲ್ಲಿ ಆಡಳಿತದಲ್ಲಿ ಇದ್ದೂ ಅಧಿಕಾರ ಕಳೆದುಕೊಂಡಿದೆ. ಈ ಸೋಲಿನ ಬಗ್ಗೆ ಚರ್ಚಿಸಲು ಕಾಂಗ್ರೆಸ್​ ಕಾರ್ಯಕಾರಿಣಿ ಸಮಿತಿ ಸಭೆ ನಡೆಸುತ್ತಿದೆ.

ಕಾಂಗ್ರೆಸ್​​ ಕಾರ್ಯಕಾರಣಿ ಸಮಿತಿ ಸಭೆ
ಕಾಂಗ್ರೆಸ್​​ ಕಾರ್ಯಕಾರಣಿ ಸಮಿತಿ ಸಭೆ
author img

By

Published : Mar 13, 2022, 5:47 PM IST

ನವದೆಹಲಿ: ಪಂಚ ರಾಜ್ಯ ಚುನಾವಣೆಯಲ್ಲಿ ಹೀನಾಯ ಸೋಲಿನ ಬಗ್ಗೆ ಪರಾಮರ್ಶೆ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್​​ ಕಾರ್ಯಕಾರಿಣಿ ಸಮಿತಿ ಸಭೆ ಆರಂಭವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಅಕ್ಬರ್​ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಸಭೆ ನಡೆಯುತ್ತಿದೆ.

ಮುಂಬರುವ ಲೋಕಸಭೆ ಚುನಾವಣೆ ವೇಳೆಗೆ ಪುನಶ್ಚೇತನಗೊಳ್ಳುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್​ಗೆ ಪಂಚ ರಾಜ್ಯ ಚುನಾವಣಾ ಫಲಿತಾಂಶವು ಆಘಾತವನ್ನು ತಂದೊಡ್ಡಿದೆ. ಅಲ್ಲದೇ, ಪಂಜಾಬ್​ನಲ್ಲಿ ಆಡಳಿತದಲ್ಲಿ ಇದ್ದೂ ಕಾಂಗ್ರೆಸ್​ ಅಧಿಕಾರ ಕಳೆದುಕೊಂಡಿದೆ.

ಆದ್ದರಿಂದ ಈ ಸೋಲಿನ ಬಗ್ಗೆ ಚರ್ಚಿಸಲು ಕಾಂಗ್ರೆಸ್​ ಕಾರ್ಯಕಾರಣಿ ಸಮಿತಿ ಸಭೆ ನಡೆಸುತ್ತಿದ್ದು, ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಮುಖರಾದ ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕರಾದ ಗುಲಾಂ​ ನಬಿ ಆಜಾದ್​, ದಿಗ್ವಿಜಯ್​ ಸಿಂಗ್​, ಪಿ.ಚಿದಂಬರಂ, ಹರೀಶ ರಾವತ್, ಆನಂದ ಶರ್ಮಾ, ಜೈರಾಮ್ ರಮೇಶ, ಕೆ.ಸಿ.ವೇಣುಗೋಪಾಲ ಪಾಲ್ಗೊಂಡಿದ್ದಾರೆ.

ಅಲ್ಲದೇ, ಛತ್ತೀಸಗಢ್​ ಮುಖ್ಯಮಂತ್ರಿ ಭೂಪೇಶ್ ಬಘೇಲ್, ಶಕ್ತಿಸಿನ್ಹಾ ಗೋಹಿಲ್, ದಿನೇಶ್ ಗುಂಡೂರಾವ್, ರಾಜೀವ್ ಶುಕ್ಲಾ, ಅಂಬಿಕಾ ಸೋನಿ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ ಹಾಗೂ ಇತರರು ಸಭೆಯಲ್ಲಿ ಭಾಗವಹಿಸಿದ್ದಾರೆ.

ಹೊಸ ಅಧ್ಯಕ್ಷರ ನೇಮಿಸಲು ಪಟ್ಟು?: ಈ ನಡುವೆ ಕಾಂಗ್ರೆಸ್​ನ ಭಿನ್ನಮತೀಯ ಗುಂಪಾಗಿರುವ 'ಜಿ-23'ನ ನಾಯಕರು ಪಕ್ಷದ ಅಧ್ಯಕ್ಷರನ್ನಾಗಿ ಮುಕುಲ್ ವಾಸ್ನಿಕ್ ಅವರನ್ನು ನೇಮಿಸಬೇಕೆಂದು ಸಲಹೆ ನೀಡಿದ್ದಾರೆ. ಆದರೆ, ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ ಎಂದು ವರದಿಯಾಗಿದೆ.

2000ರಲ್ಲಿ ಸೋನಿಯಾ ಗಾಂಧಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ ಮಾದರಿಯಲ್ಲಿ ಈಗ ಹೊಸಬರು ಪಕ್ಷವನ್ನು ಮುನ್ನಡೆಸುವಂತೆ ಆಗಬೇಕು. ಈ ನಿಟ್ಟಿನಲ್ಲಿ ಮುಕುಲ್ ವಾಸ್ನಿಕ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಭಿನ್ನಮತೀಯ ನಾಯಕರಾದ ಆನಂದ ಶರ್ಮಾ, ಗುಲಾಂ​ ನಬಿ ಆಜಾದ್​ ಮತ್ತು ಕಪಿಲ್​ ಸಿಬಲ್​ ಸಲಹೆ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.

ಸೋನಿಯಾ ಗಾಂಧಿ ಪಕ್ಷದ ಹಂಗಾಮಿ ಅಧ್ಯಕ್ಷರಾಗಿದ್ದರೂ, ವಾಸ್ತವಿಕವಾಗಿ ಕೆ.ಸಿ.ವೇಣುಗೋಪಾಲ, ಅಜಯ್​ ಮಕೇನ್​ ಮತ್ತು ರಣದೀಪ್​ ಸುಜ್ರೇವಾಲಾ ಪಕ್ಷವನ್ನು ನಡೆಸುತ್ತಿದ್ದಾರೆ. ಆದರೆ, ಅವರಿಗೆ ಯಾವುದೇ ಹೊಣೆಗಾರಿಕೆಯನ್ನು ನೀಡಿಲ್ಲ. ಅದೇ ರೀತಿಯಾಗಿ ರಾಹುಲ್​ ಗಾಂಧಿ ಅಧ್ಯಕ್ಷರಲ್ಲದೇ ಇದ್ದರೂ ತೆರೆಯ ಹಿಂದೆ ಪಕ್ಷವನ್ನು ನಡೆಸುತ್ತಿದ್ದಾರೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ರಾಹುಲ್​ ಮುಕ್ತವಾಗಿ ಮಾತನಾಡಲ್ಲ. ನಾವು ಪಕ್ಷದ ಹಿತೈಷಿಗಳೇ ಹೊರತು, ಶತ್ರುಗಳಲ್ಲ ಎಂದು ಭಿನ್ನಮತೀಯ ನಾಯಕರು ಹೇಳಿದ್ದಾರೆ ಎಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ: ದಾವೂದ್​​ ಇಬ್ರಾಹಿಂ ಜತೆಗೆ ಪವಾರ್​ಗೆ ನಂಟು ಹೇಳಿಕೆ: ಕೇಂದ್ರ ಸಚಿವ ರಾಣೆ ಪುತ್ರರ ವಿರುದ್ಧ ಕೇಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.