ಅಹಮದಾಬಾದ್(ಗುಜರಾತ್): ಗುಜರಾತ್ ಚುನಾವಣಾ ಕಣ ರಂಗೇರಿರುವ ಮಧ್ಯೆಯೇ ಕಾಂಗ್ರೆಸ್ ಹಲವು ಭರವಸೆಗಳ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿದೆ. 10 ಲಕ್ಷ ಉದ್ಯೋಗ, ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ಘೋಷಿಸಿದೆ. ಇನ್ನೂ ವಿಶೇಷ ಅಂದ್ರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ಅಹಮದಾಬಾದ್ನಲ್ಲಿರುವ ವಿಶ್ವದ ಅತಿ ದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂಗೆ ಸರ್ದಾರ್ ವಲ್ಲಭಬಾಯಿ ಪಟೇಲ್ ಹೆಸರಿಡುವ ವಾಗ್ದಾನ ಮಾಡಿದೆ.
-
To help the youth of Gujarat live a life with dignity, the Congress will ensure hiring for vacant 10 lakh government seats.
— Congress (@INCIndia) November 12, 2022 " class="align-text-top noRightClick twitterSection" data="
Change begins here!
Vote for Congress ✅#कांग्रेस_का_जन_घोषणा_पत्र pic.twitter.com/L5GtFP43kp
">To help the youth of Gujarat live a life with dignity, the Congress will ensure hiring for vacant 10 lakh government seats.
— Congress (@INCIndia) November 12, 2022
Change begins here!
Vote for Congress ✅#कांग्रेस_का_जन_घोषणा_पत्र pic.twitter.com/L5GtFP43kpTo help the youth of Gujarat live a life with dignity, the Congress will ensure hiring for vacant 10 lakh government seats.
— Congress (@INCIndia) November 12, 2022
Change begins here!
Vote for Congress ✅#कांग्रेस_का_जन_घोषणा_पत्र pic.twitter.com/L5GtFP43kp
ಕಾಂಗ್ರೆಸ್ ಹಿರಿಯ ನಾಯಕ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿ, ಪಕ್ಷ ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲಿಯೇ ಚುನಾವಣಾ ಪ್ರಣಾಳಿಕೆಯನ್ನು ಅಧಿಕೃತ ದಾಖಲೆಯಾಗಿ ಕಾಂಗ್ರೆಸ್ ಸ್ವೀಕರಿಸಲಿದೆ ಎಂದು ಹೇಳಿದರು.
ಅತಿರೇಕದ ಭ್ರಷ್ಟಾಚಾರಕ್ಕೆ ಗುಜರಾತ್‌ನ ಬಿಜೆಪಿ ನೇತೃತ್ವದ ಸರ್ಕಾರವನ್ನು ಹೊಣೆ ಮಾಡಿದ ಗೆಹ್ಲೋಟ್, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಕಳೆದ 27 ವರ್ಷಗಳ ಭ್ರಷ್ಟಾಚಾರದ ಎಲ್ಲ ದೂರುಗಳ ಬಗ್ಗೆ ತನಿಖೆಗೆ ಆದೇಶಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.
ಗುಜರಾತ್‌ನಲ್ಲಿ 2 ಹಂತದ ಚುನಾವಣೆ ನಡೆಸಲಾಗುತ್ತಿದ್ದು, ಡಿಸೆಂಬರ್ 1 ಮತ್ತು 5 ರಂದು ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏನೆಲ್ಲಾ ಆಶ್ವಾಸನೆ
- ಎಲ್ಲಾ ಗುಜರಾತಿಗಳಿಗಾಗಿ ರಾಜ್ಯದಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿ
- ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇಕಡಾ 50 ರಷ್ಟು ಮೀಸಲಾತಿ ಖಚಿತತೆ
- ಪ್ರತಿಯೊಬ್ಬ ಮಹಿಳೆ, ವಿಧವೆ ಮತ್ತು ವೃದ್ಧರಿಗೆ ಮಾಸಿಕ ₹ 2,000 ಅನುದಾನ
- ಸರ್ಕಾರದಿಂದ 3 ಸಾವಿರ ಆಂಗ್ಲ ಮಾಧ್ಯಮ ಶಾಲೆಗಳ ಆರಂಭ
- ಹೆಣ್ಣುಮಕ್ಕಳಿಗೆ ಸ್ನಾತಕೋತ್ತರ ಪದವಿಯವರೆಗೆ ಉಚಿತ ಶಿಕ್ಷಣ
- 3 ಲಕ್ಷದವರೆಗಿನ ಕೃಷಿ ಸಾಲ ಮನ್ನಾ, 300 ಯೂನಿಟ್ ಉಚಿತ ವಿದ್ಯುತ್
- ಪ್ರತಿ ನಿರುದ್ಯೋಗಿ ಯುವಕರಿಗೆ 3 ಸಾವಿರ ಮಾಸಿಕ ವೇತನ
- ಗೃಹೋಪಯೋಗಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ 500 ರೂಪಾಯಿಗೆ ಇಳಿಕೆ
- ಗರಿಷ್ಠ 10 ಲಕ್ಷ ರೂಪಾಯಿವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ
- 5 ಲಕ್ಷದವರೆಗೆ ಉಚಿತ ಆರೋಗ್ಯ ತಪಾಸಣೆ, ಔಷಧಗಳ ವಿತರಣೆ
- ಮರಣ ಹೊಂದಿದಲ್ಲಿ 4 ಲಕ್ಷ ರೂಪಾಯಿ ಕೋವಿಡ್ ಪರಿಹಾರ
ಓದಿ: ವೇಗವಾಗಿ ಬೆಳೆದ ಜಗತ್ತಿನ ಜನಸಂಖ್ಯೆ: ಎಂಟು ನೂರು ಕೋಟಿಯತ್ತ ಮಾನವರ ಸಂಖ್ಯೆ!