ETV Bharat / bharat

ಟ್ರ್ಯಾಕ್ಟರ್‌ ರ‍್ಯಾಲಿಯಲ್ಲಿ ಹಿಂಸಾಚಾರಕ್ಕೆ ಷಡ್ಯಂತ್ರ.. ಹರಿಯಾಣ ಸರ್ಕಾರ ವಜಾಕ್ಕೆ ಕಾಂಗ್ರೆಸ್‌ ಒತ್ತಾಯ.. - ಸಿಂಘು ಗಡಿಯಲ್ಲಿ ಹಿಂಸಾಚಾರಕ್ಕೆ ಯತ್ನ ಆರೋಪ

ಈ ವಿಷಯದಲ್ಲಿ ಯಾರೂ ಪೊಲೀಸರನ್ನು ನಂಬಲು ಸಾಧ್ಯವಿಲ್ಲ. ಮೊದಲಿನಿಂದಲೂ ಹರಿಯಾಣ ಸರ್ಕಾರ ರಸ್ತೆಗಳನ್ನು ಅಗೆಯುವುದು, ರೈತರು ದೆಹಲಿ ಗಡಿ ತಲುಪದಂತೆ ತಡೆಯುವುದು, ನೀರಿನ ಫಿರಂಗಿಗಳನ್ನು ಬಳಸುವುದು, ರೈತರ ವಿರುದ್ಧ ಅಶ್ರುವಾಯು ಮತ್ತು ಲಾಠಿ ಪ್ರಯೋಗ ಮಾಡುವುದು ಮುಂತಾದ ಕ್ರಮಗಳನ್ನು ಕೈಗೊಳ್ಳುತ್ತಿದೆ..

congress-seeks-dismissal-of-haryana-govt-for-fair-trial-into-tractor-rally-case
ರೈತರ ಟ್ರ್ಯಾಕ್ಟರ್‌ ರ‍್ಯಾಲಿ ಕೇಸ್; ಹರಿಯಾಣ ಸರ್ಕಾರ ವಜಾ ಮಾಡಲು ಕಾಂಗ್ರೆಸ್‌ ಒತ್ತಾಯ
author img

By

Published : Jan 23, 2021, 9:47 PM IST

ನವದೆಹಲಿ : ದೆಹಲಿಯಲ್ಲಿ ರೈತರನ್ನ ಉದ್ದೇಶಿತ ಟ್ರ್ಯಾಕ್ಟರ್‌ ರ‍್ಯಾಲಿಗೆ ಅಡ್ಡಿಪಡಿಸಲು ಮತ್ತು ರೈತರ ಪ್ರತಿಭಟನಾ ಸ್ಥಳದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ಆರೋಪದ ತನಿಖೆ ಸಂಬಂಧ ಕಾಂಗ್ರೆಸ್ ಹಲವು ಪ್ರಶ್ನೆಗಳನ್ನು ಎತ್ತಿದೆ. ಈ ವಿಷಯದಲ್ಲಿ ನ್ಯಾಯಯುತ ತನಿಖೆ ನಡೆಸಲು ಹರಿಯಾಣ ಸರ್ಕಾರವನ್ನು ತಕ್ಷಣ ವಜಾಗೊಳಿಸಬೇಕು ಎಂದು ಆಗ್ರಹಿಸಿದೆ.

ಕಳೆದ ಶುಕ್ರವಾರ ರಾತ್ರಿ, ರೈತ ಮುಖಂಡರು ಸಿಂಘು ಗಡಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಅಲ್ಲಿ ಮುಖವಾಡ ಧರಿಸಿದ್ದ ವ್ಯಕ್ತಿಯನ್ನು ಪ್ರಸ್ತುತಪಡಿಸಲಾಗಿತ್ತು. ಆ ವ್ಯಕ್ತಿಯು ತಾನು, ಜನವರಿ 26ರಂದು ಯೋಜಿತ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ನಾಲ್ಕು ರೈತರನ್ನು ಕೊಲ್ಲಲು ಮತ್ತು ಹಿಂಸಾಚಾರ ಪ್ರಚೋದಿಸುವ 10 ಸದಸ್ಯರ ತಂಡದ ಭಾಗವಾಗಿದ್ದೇನೆ ಎಂದು ಹೇಳಿದ್ದನು.

ಆದರೆ, ಸೋನೆಪತ್ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸಿದ ಕೆಲವೇ ಗಂಟೆಗಳಲ್ಲಿ, ಆತ ತನ್ನ ಹೇಳಿಕೆ ಬದಲಾಯಿಸಿದ್ದಾನೆ. ರೈತರು ಸಿದ್ಧಪಡಿಸಿದ ಸ್ಕ್ರಿಪ್ಟ್‌ನ ತಾನು ಹೇಳಿದ್ದಾಗಿ ಯು-ಟರ್ನ್ ಹೊಡೆದಿದ್ದಾನೆ. ಈ ವ್ಯಕ್ತಿಯನ್ನು ಪೊಲೀಸರು ಪ್ರಶ್ನಿಸುವ ವಿಡಿಯೋ ಕೂಡ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್, ಸಿಕ್ಕಿಬಿದ್ದ ಆರೋಪಿಯು ರೈತರ ಪ್ರತಿಭಟನೆಗೆ ಅಡ್ಡಿಯುಂಟು ಮಾಡುವ ಯೋಜನೆ ಒಪ್ಪಿಕೊಂಡಿದ್ದಾನೆ.

ರೈತರ ಪ್ರತಿಭಟನೆ ಯಶಸ್ವಿಯಾಗದಂತೆ ಯಾರೋ ತಡೆಯುತ್ತಿದ್ದಾರೆ. ಭಾರತೀಯ ಪ್ರಜಾಪ್ರಭುತ್ವಕ್ಕೆ ಇದು ಕೆಟ್ಟ ಹೆಸರು ತರುವಂಥದ್ದಾಗಿದೆ. ಇಷ್ಟಾದ್ರೂ ಆ ವ್ಯಕ್ತಿಯು ತಾನು ಯಾವುದೇ ದುಷ್ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂದು ಹೇಳಿಸಿದ ವಿಡಿಯೋವನ್ನು ಪೊಲೀಸರು ಹರಿ ಬಿಟ್ಟಿದ್ದು ಮತ್ತೂ ಆಘಾತಕಾರಿಯಾಗಿದೆ ಎಂದು ಆರೋಪಿಸಿದರು.

ಆರೋಪಿ ವ್ಯಕ್ತಿಯು ಹರಿಯಾಣ ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಈ ವಿಷಯದಲ್ಲಿ ಯಾರೂ ಪೊಲೀಸರನ್ನು ನಂಬಲು ಸಾಧ್ಯವಿಲ್ಲ. ಮೊದಲಿನಿಂದಲೂ ಹರಿಯಾಣ ಸರ್ಕಾರ ರಸ್ತೆಗಳನ್ನು ಅಗೆಯುವುದು, ರೈತರು ದೆಹಲಿ ಗಡಿ ತಲುಪದಂತೆ ತಡೆಯುವುದು, ನೀರಿನ ಫಿರಂಗಿಗಳನ್ನು ಬಳಸುವುದು, ರೈತರ ವಿರುದ್ಧ ಅಶ್ರುವಾಯು ಮತ್ತು ಲಾಠಿ ಪ್ರಯೋಗ ಮಾಡುವುದು ಮುಂತಾದ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರೈತರು ಹಾಗೂ ರೈತರ ಪ್ರತಿಭಟನೆಯ ವಿರುದ್ಧ ದ್ವೇಷದ ಕ್ರಮ ಕೈಗೊಳ್ಳುತ್ತಿರುವ ಹರಿಯಾಣ ಸರ್ಕಾರವನ್ನು ವಜಾ ಮಾಡಬೇಕು. ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆಯನ್ನು ಕಳೆದುಕೊಂಡಿರುವ ಹರಿಯಾಣ ಸಿಎಂ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಗೌರವ್‌ ವಲ್ಲಭ್ ಆಗ್ರಹಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.