ಚಂಡೀಗಢ(ಪಂಜಾಬ್): ಪಂಜಾಬ್ ವಿಧಾನಸಭೆಗೆ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ನಿಂದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಿದೆ. ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸೇರಿದಂತೆ 86 ಅಭ್ಯರ್ಥಿಗಳ ಹೆಸರು ಮೊದಲ ಪಟ್ಟಿಯಲ್ಲಿದೆ.
-
Congress releases list for candidates on 86 seats in upcoming Punjab polls- CM Charanjit Singh Channi to contest from Chamkaur Sahib SC, State chief Navjot Singh Sidhu to contest from Amritsar East. pic.twitter.com/FV4PSh1Win
— ANI (@ANI) January 15, 2022 " class="align-text-top noRightClick twitterSection" data="
">Congress releases list for candidates on 86 seats in upcoming Punjab polls- CM Charanjit Singh Channi to contest from Chamkaur Sahib SC, State chief Navjot Singh Sidhu to contest from Amritsar East. pic.twitter.com/FV4PSh1Win
— ANI (@ANI) January 15, 2022Congress releases list for candidates on 86 seats in upcoming Punjab polls- CM Charanjit Singh Channi to contest from Chamkaur Sahib SC, State chief Navjot Singh Sidhu to contest from Amritsar East. pic.twitter.com/FV4PSh1Win
— ANI (@ANI) January 15, 2022
ಪಟ್ಟಿಯಲ್ಲಿ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಚಮ್ಕೌರ್ ಸಾಹಿಬ್ ಎಸ್ಸಿ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದು, ನವಜೋತ್ ಸಿಂಗ್ ಸಿಧು ಅಮೃತಸರ್ದ ಪೂರ್ವ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಪಂಜಾಬ್ ವಿಧಾನಸಭೆಯ ಒಟ್ಟು 117 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಕಣದಲ್ಲಿ ಕಾಂಗ್ರೆಸ್, ಬಿಜೆಪಿ, ಆಮ್ ಆದ್ಮಿ ಪಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಪಂಜಾಬ್ ಲೋಕ್ ಕಾಂಗ್ರೆಸ್ ಕೂಡ ಇದೆ.
ಇದನ್ನೂ ಓದಿರಿ: ನಟ ಸೋನು ಸೂದ್ ಸಹೋದರಿ ಕಾಂಗ್ರೆಸ್ ಸೇರ್ಪಡೆ.. ಪಂಜಾಬ್ ಚುನಾವಣೆಗೆ ಸ್ಪರ್ಧೆ!
ಕಾಂಗ್ರೆಸ್ ಪಟ್ಟಿಯಲ್ಲಿ ಡೆಪ್ಯುಟಿ ಸಿಎಂ ಸುಖಜಿಂದರ್ ಸಿಂಗ್ ಡೇರಾ- ಬಾಬಾ ನಾನಕ್ ಕ್ಷೇತ್ರದಿಂದ ಹಾಗೂ ರಾಜ್ಯ ಸಾರಿಗೆ ಸಚಿವ ಅಮರೀಂದರ್ ವಾರಿಂಗ್- ಗಿಡ್ದರ್ಬಾಹಾ ಕ್ಷೇತ್ರದಿಂದ ಟಿಕೆಟ್ ಪಡೆದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಕಾಂಗ್ರೆಸ್ ಪಕ್ಷ ಸೇರಿರುವ ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ಗೂ ಟಿಕೆಟ್ ಖಚಿತಗೊಂಡಿದ್ದು, ಅವರು ಮೋಗಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ. ಸಹೋದರಿ ಪರವಾಗಿ ತಾವು ಮತಯಾಚನೆ ಮಾಡುವುದಾಗಿ ಈಗಾಗಲೇ ನಟ ಸೋನು ಸೂದ್ ಘೋಷಣೆ ಮಾಡಿದ್ದಾರೆ.
ಪಂಜಾಬ್ನಲ್ಲಿ ಕಾಂಗ್ರೆಸ್ಗೆ ಶಾಕ್
ಪಂಜಾಬ್ನ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಜೋಗಿಂದರ್ ಸಿಂಗ್ ಮಾನ್ ಇಂದು ಕಾಂಗ್ರೆಸ್ನಿಂದ ಹೊರಬಂದಿದ್ದಾರೆ. ಪರಿಶಿಷ್ಟ ಜಾತಿಯ ಪ್ರಬಲ ನಾಯಕರಾಗಿದ್ದ ಇವರು, ಪಕ್ಷದೊಂದಿಗೆ 50 ವರ್ಷಗಳ ಕಾಲ ಇದ್ದರು. ಆದರೆ ಇಂದು ದಿಢೀರ್ ಆಗಿ ಹೊರಬಂದಿದ್ದಾರೆ. ಪಂಜಾಬ್ನಲ್ಲಿ ಫೆಬ್ರವರಿ 14ರಂದು ಒಂದೇ ಹಂತದ ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.