ETV Bharat / bharat

ರಾಜಸ್ಥಾನ ಚುನಾವಣಾ ಕಾರ್ಯತಂತ್ರದ ಬಗ್ಗೆ ಖರ್ಗೆ - ರಾಹುಲ್​ ಸಭೆ .. ಗೆಹ್ಲೋಟ್ - ಪೈಲಟ್ ಬಿಕ್ಕಟ್ಟು ಪರಿಹಾರ: ನಾಳೆಯಿಂದಲೇ ಪ್ರಚಾರ ಶುರು

author img

By

Published : Jul 6, 2023, 9:30 PM IST

ರಾಜಸ್ಥಾನ ವಿಧಾನಸಭೆ ಚುನಾವಣಾ ಕಾರ್ಯತಂತ್ರದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಾಗಿದೆ. ನಾಳೆಯಿಂದಲೇ ಚುನಾವಣಾ ಪ್ರಚಾರ ಶುರು ಮಾಡಲು ನಿರ್ಧರಿಸಲಾಗಿದೆ.

Congress poll strategy meet on Rajasthan: Gehlot-Pilot tussle 'resolved', aggressive campaign from July 7
ರಾಜಸ್ಥಾನ ಚುನಾವಣಾ ಕಾರ್ಯತಂತ್ರದ ಬಗ್ಗೆ ಖರ್ಗೆ - ರಾಹುಲ್​ ಸಭೆ .. ಗೆಹ್ಲೋಟ್ - ಪೈಲಟ್ ಬಿಕ್ಕಟ್ಟು ಪರಿಹಾರ

ನವದೆಹಲಿ: ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿರುವ ರಾಜಸ್ಥಾನ ಕಾಂಗ್ರೆಸ್​ನಲ್ಲಿ ಎಲ್ಲ ಸಮಸ್ಯೆಗಳು ಬಗೆಹರಿದಿದ್ದು, ಮುಂಬರುವ ಚುನಾವಣೆಯಲ್ಲಿ ಪಕ್ಷದ ಗೆಲುವನ್ನು ಖಚಿತಪಡಿಸಿಕೊಳ್ಳಲು ಎಲ್ಲ ನಾಯಕರು ಒಟ್ಟಾಗಿ ಹೋರಾಡಲಿದ್ದಾರೆ ಎಂದು ಕಾಂಗ್ರೆಸ್ ಗುರುವಾರ ಹೇಳಿದೆ. 200 ಸ್ಥಾನಗಳ ರಾಜಸ್ಥಾನ ವಿಧಾನಸಭೆಗೆ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ.

ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ನಾವೆಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಿ ರಾಜಸ್ಥಾನವನ್ನು ಮತ್ತೆ ಗೆಲ್ಲಲಿದ್ದೇವೆ ಎಂದು ಪಕ್ಷದ ಸಂಘಟನಾ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ. ಇಂದು ನಡೆದ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಎಐಸಿಸಿ ಮತ್ತು ಹಿರಿಯ ರಾಜ್ಯ ನಾಯಕರೊಂದಿಗೆ ನಾಲ್ಕು ಗಂಟೆಗಳ ಕಾಲ ಪಕ್ಷದ ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚಿಸಿದ ಈ ಹೇಳಿಕೆ ಬಂದಿದೆ.

ರಾಜಸ್ಥಾನದ ಚುನಾವಣೆಗೆ ಬಗ್ಗೆ ಕಾಂಗ್ರೆಸ್​ ನಾಯಕತ್ವ ಎರಡು ವಿಷಯಗಳ ಬಗ್ಗೆ ಪ್ರಮುಖವಾಗಿ ಗಮನ ಹರಿಸಿದೆ. ಮೊದಲನೆಯದ್ದು ಪ್ರತಿ ಐದು ವರ್ಷಗಳಿಗೊಮ್ಮೆ ರಾಜ್ಯದಲ್ಲಿ ಸರ್ಕಾರವನ್ನು ಬದಲಾಯಿಸುವ ಸಂಪ್ರದಾಯವನ್ನು ಹೇಗೆ ಮುರಿಯುವುದು ಹಾಗೂ ಎರಡನೆಯದ್ದು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಡಿಸಿಎಂ ಸಚಿನ್ ಪೈಲಟ್​ ನಡುವಿನ ಸಾರ್ವಜನಿಕವಾದ ಕಿತ್ತಾಟವನ್ನು ಕೊನೆಗೊಳಿಸುವ ಕುರಿತು ಸಮಾಲೋಚಿಸಿದೆ.

ಪಕ್ಷದ ಒಳಗಿನವರ ಪ್ರಕಾರ, ಗೆಹ್ಲೋಟ್ ಸರ್ಕಾರದ ಸಮಾಜ ಕಲ್ಯಾಣ ಯೋಜನೆಗಳು ಐದು ವರ್ಷಗಳಿಗೊಮ್ಮೆ ಮತದಾರರು ಸರ್ಕಾರವನ್ನು ಬದಲಾಯಿಸುವ ಸಂಪ್ರದಾಯವನ್ನು ಮುರಿಯಲು ಕಾಂಗ್ರೆಸ್‌ಗೆ ಸಹಾಯ ಮಾಡುತ್ತವೆ. ಅಲ್ಲದೇ, ಇತ್ತೀಚೆಗೆ ಮುಖ್ಯಮಂತ್ರಿ ಮಾಡಿದ ಘೋಷಣೆಯು ಬಿಜೆಪಿ ನಾಯಕಿ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಒಳಗೊಂಡಿರುವ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಕ್ರಮಕೈಗೊಳ್ಳಲು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಖ್ಯಾತಿಯನ್ನು ಕಳೆದುಕೊಂಡಿರುವ ರಾಜಸ್ಥಾನ ಲೋಕ ಸೇವಾ ಆಯೋಗ ಪುನರುಜ್ಜೀವನಗೊಳಿಸುವಂತೆ ಒತ್ತಾಯಿಸುತ್ತಿದ್ದ ಪೈಲಟ್‌ ಅವರಿಗೆ ಸಮಾಧಾನ ತಂದಿದೆ.

ಈ ಬಗ್ಗೆ ವೇಣುಗೋಪಾಲ್ ಪ್ರತಿಕ್ರಿಯಿಸಿ, ಆರ್​ಪಿ​​ಎಸ್​ಸಿ ಸಮಸ್ಯೆಯನ್ನು ಪರಿಹರಿಸಲಾಗಿದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಪರೀಕ್ಷೆ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವವರಿಗೆ ಕಠಿಣ ಶಿಕ್ಷೆ ವಿಧಿಸಲು ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.

ಪೈಲಟ್ ಶಾಂತ: ಇಂದಿನ ಹೈಕಮಾಂಡ್​ ಸಭೆಯಲ್ಲಿ ಸಚಿನ್​ ಪೈಲಟ್ ಅವರು ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್ ನಡೆಯ ಬಗ್ಗೆ ಶಾಂತವಾಗಿದ್ದರು ಎಂದು ಪಕ್ಷದ ಒಳಗಿನವರ ತಿಳಿಸಿದ್ದಾರೆ. ಗೆಹ್ಲೋಟ್ ತಮ್ಮ ಕಾಲುಗಳಿಗೆ ಗಾಯವಾಗಿದ್ದರಿಂದ ದೆಹಲಿಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ. ಆದ ಕಾರಣ ಆನ್‌ಲೈನ್‌ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.

ಇದೇ ವೇಳೆ, ಗೆಹ್ಲೋಟ್ - ಪೈಲಟ್ ಜಗಳ ಬಗೆಹರಿದಿದೆ ಎಂದು ಪಕ್ಷದ ಒಳಗಿನವರು ಹೇಳಿಕೊಂಡರು ಸಹ ಕಳೆದ ಕೆಲ ತಿಂಗಳಲ್ಲಿ ನಡೆದ ಇಬ್ಬರ ನಡುವಿನ ಸಮಸ್ಯೆಯು ಪಕ್ಷದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂಬುವುದನ್ನು ನಾಯಕತ್ವ ಅರಿತುಕೊಂಡಿದೆ. ಅದರಂತೆ ಸಾರ್ವಜನಿಕವಾಗಿ ಕಿತ್ತಾಟ ತಪ್ಪಿಸಿ ಪಕ್ಷದ ವೇದಿಕೆಗಳಲ್ಲಿ ಮಾತ್ರ ತಮ್ಮ ಸಮಸ್ಯೆಗಳನ್ನು ವ್ಯಕ್ತಪಡಿಸುವಂತೆ ಎಐಸಿಸಿ ಎಲ್ಲ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ.

ಪಕ್ಷದಲ್ಲಿ ಕಟ್ಟುನಿಟ್ಟಿನ ಶಿಸ್ತು ಅಗತ್ಯ: ಯಾರಾದರೂ ಪಕ್ಷದ ನಿರ್ದೇಶನವನ್ನು ಉಲ್ಲಂಘಿಸುವುದು ಕಂಡು ಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪಕ್ಷದಲ್ಲಿ ಕಟ್ಟುನಿಟ್ಟಿನ ಶಿಸ್ತು ಇರಬೇಕು. ಸಾರ್ವಜನಿಕವಾಗಿ ಪರಸ್ಪರರ ವಿರುದ್ಧ ಹೇಳಿಕೆ ಮಾಡಬಾರದು. ಅದಕ್ಕಾಗಿ ಪಕ್ಷದ ವೇದಿಕೆಗಳಿವೆ. ಇಂದಿನ ಸಭೆ ನಿರ್ಣಾಯಕ ಮತ್ತು ಯಶಸ್ವಿಯಾಗಿದೆ. ಇದು ನಾಯಕರ ನಡುವೆ ಒಗ್ಗಟ್ಟನ್ನು ಕಂಡಿದೆ ಮತ್ತು ಎಲ್ಲರೂ ಕಾಂಗ್ರೆಸ್ ರಾಜಸ್ಥಾನವನ್ನು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಎಂದೂ ವೇಣುಗೋಪಾಲ್ ತಿಳಿಸಿದ್ದಾರೆ.

ಆದರೂ, ಪಕ್ಷದಲ್ಲಿ ಕೆಲವು ಸವಾಲುಗಳಿವೆ ಎಂದು ಪಕ್ಷದ ಒಳಗಿನವರು ಹೇಳಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಸಂಘಟನೆ ಮತ್ತು ರಾಜ್ಯ ಸರ್ಕಾರದ ನಡುವೆ ಹೆಚ್ಚಿನ ಸಮನ್ವಯವನ್ನು ಖಚಿತಪಡಿಸಿಕೊಳ್ಳಬೇಕು. ಮತದಾರರ ಬಳಿಗೆ ಸಮಾಜ ಕಲ್ಯಾಣ ಯೋಜನೆಗಳ ಸಂದೇಶವನ್ನು ಕೊಂಡೊಯ್ಯುವಂತೆ ರಾಹುಲ್ ಗಾಂಧಿ ರಾಜ್ಯ ನಾಯಕರನ್ನು ಸೂಚಿಸಿದ್ದಾರೆ.

ನಾಳೆಯಿಂದ ಚುನಾವಣಾ ಪ್ರಚಾರಕ್ಕೆ ಚಾಲನೆ: ಅಲ್ಲದೇ, ಶುಕ್ರವಾರದಿಂದ ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರಕ್ಕೆ ಪಕ್ಷ ಚಾಲನೆ ನೀಡಲಿದ್ದು, ಎಲ್ಲ ಸಚಿವರು ಹಾಗೂ ಹಿರಿಯ ನಾಯಕರು ಮನೆ ಮನೆಗೆ ತೆರಳಿ ವಿವಿಧ ಕಲ್ಯಾಣ ಯೋಜನೆಗಳನ್ನು ಜನರಿಗೆ ವಿವರಿಸಲಿದ್ದಾರೆ. ಪಕ್ಷದ ಸಾಂಪ್ರದಾಯಿಕ ವೋಟ್ ಬ್ಯಾಂಕ್ ಆಗಿರುವ ಬಡವರು ಮತ್ತು ಸಮಾಜದ ಕಟ್ಟಕಡೆಯ ವರ್ಗಗಳ ಅವಾಹಲು ನಿವಾರಿಸುವಂತೆಯೂ ರಾಹುಲ್ ರಾಜ್ಯ ನಾಯಕರಿಗೆ ನಿರ್ದೇಶನ ನೀಡಿದ್ದಾರೆ.

ನಮ್ಮ ಸರ್ಕಾರದ ಯೋಜನೆಗಳು ಉತ್ತಮವಾಗಿವೆ. ಆದರೆ, ಅವುಗಳ ಬಗ್ಗೆ ಮತದಾರರಿಗೆ ಸಂದೇಶವನ್ನು ತಲುಪಿಸುವ ಅಗತ್ಯವಿದೆ ಎಂದು ವೇಣುಗೋಪಾಲ್ ಹೇಳಿದ್ದಾರೆ. ಕಲ್ಯಾಣ ಯೋಜನೆಗಳ ಬಗ್ಗೆ ಪ್ರಚಾರ ಮಾಡಲು ಪ್ರಯತ್ನಗಳ ಜೊತೆಗೆ ಪ್ರಮುಖ ಪ್ರತಿಪಕ್ಷವಾದ ಬಿಜೆಪಿಗಿಂತ ಮೊದಲೇ ಪಕ್ಷವು ಸೆಪ್ಟೆಂಬರ್ ಮೊದಲ ವಾರದಲ್ಲಿ ಅಭ್ಯರ್ಥಿಗಳನ್ನು ಘೋಷಿಸಲು ನಿರ್ಧರಿಸಿದೆ.

ಸಂಭಾವ್ಯ ಅಭ್ಯರ್ಥಿಗಳನ್ನು ಗುರುತಿಸಲು ವಿವಿಧ ಸಮೀಕ್ಷೆಗಳು ನಡೆಯುತ್ತಿವೆ. ಆದರೆ, ಅಭ್ಯರ್ಥಿ ಗೆಲ್ಲುವುದು ಮುಖ್ಯ ಮಾನದಂಡವಾಗಿರುತ್ತದೆ. ಪಕ್ಷವು ನಾಳೆಯಿಂದ ರಾಜಸ್ಥಾನ ಪ್ರಚಾರವನ್ನು ಪ್ರಾರಂಭಿಸಲಿದೆ. ಉಳಿದ 90 ದಿನಗಳಲ್ಲಿ ಇದು ಮತ್ತಷ್ಟು ಪರಿಣಾಮಕಾರಿಯಾಗಿದೆ ಎಂದು ವಿವರಿಸಿದ್ದಾರೆ.

ಮತ್ತೆ ಕಾಂಗ್ರೆಸ್​ ಗೆಲ್ಲಿಸುವ ವಿಶ್ವಾಸ - ಪೈಲಟ್​: ಪಕ್ಷದ ಹೈಕಮಾಂಡ್​ ನಡೆಸಿದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿನ್​ ಪೈಲಟ್, ರಾಜಸ್ಥಾನದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವನ್ನು ಖಚಿತಪಡಿಸಿಕೊಳ್ಳಲು ಪಕ್ಷದ ಶಾಸಕರು ಮತ್ತು ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿನ ಹಿಂದಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಪೇಪರ್ ಸೋರಿಕೆ ಮತ್ತು ಲೋಕಸೇವಾ ಆಯೋಗದ ಸುಧಾರಣೆಯ ವಿಷಯಗಳನ್ನು ಪ್ರಸ್ತಾಪಿಸಿದ ಪೈಲಟ್, ಯುವಜನತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪಕ್ಷದ ನಾಯಕತ್ವ ಅರಿತು ಸೂಕ್ತ ನಿರ್ದೇಶನ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು. ಪಕ್ಷವು ರಾಜಸ್ಥಾನದಲ್ಲಿ ಭ್ರಷ್ಟಾಚಾರವನ್ನು ಚುನಾವಣಾ ವಿಷಯವನ್ನಾಗಿ ಮಾಡುತ್ತದೆ. ಹಿಂದಿನ ಬಿಜೆಪಿ ಆಡಳಿತದಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ರಾಜಸ್ಥಾನದ ಕಾಂಗ್ರೆಸ್ ಸರ್ಕಾರವು ಗಂಭೀರವಾದ ಕ್ರಮವನ್ನು ಹೊಂದಿದೆ ಎಂದು ತಿಳಿಸಿದರು.

ಅಲ್ಲದೇ, ರಾಜಸ್ಥಾನದಲ್ಲಿ ಅಧಿಕಾರದಲ್ಲಿರುವ ಸರ್ಕಾರವನ್ನು ಬದಲಾಯಿಸುವ ಮತದಾರರ ಸಂಪ್ರದಾಯವನ್ನು ಹೇಗೆ ಬದಲಾಯಿಸುವುದು ಎಂಬುದರ ಕುರಿತು ಅರ್ಥಪೂರ್ಣ ಚರ್ಚೆ ನಡೆಯಿತು. ನಾವು ಎಲ್ಲ ವಿಷಯಗಳನ್ನು ಮುಕ್ತ ಮನಸ್ಸಿನಿಂದ ಚರ್ಚಿಸಿದ್ದೇವೆ. ರಾಜಸ್ಥಾನದಲ್ಲಿ ನಾವು ಸರ್ಕಾರವನ್ನು ಪುನರಾವರ್ತಿಸಬಹುದು ಎಂದು ಎಲ್ಲರೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸಂಘಟನೆ, ಶಾಸಕರು, ಸಚಿವರು ಒಟ್ಟಾಗಿ ಕೆಲಸ ಮಾಡುತ್ತಾರೆ. ನಾವು ರಾಜಸ್ಥಾನದಲ್ಲಿ ನಮ್ಮ ಸರ್ಕಾರವನ್ನು ಪುನರಾವರ್ತಿಸಲು ಬಯಸುತ್ತೇವೆ. 2018ರಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಗೆದ್ದಿದೆ. ಇದು ಈ ಬಾರಿಯೂ ಭಾರಿ ಜನಾದೇಶದೊಂದಿಗೆ ಇದು ಪುನರಾವರ್ತನೆಯಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Maharashtra Politics: ಒಂದಾಗ್ತಾರಾ ಠಾಕ್ರೆ ಸಹೋದರರು?, ಶಿಂಧೆ ಪಾಳಯದಲ್ಲಿ ತಳಮಳಕ್ಕೆ ಕಾರಣವೇನು?.. ಮಹತ್ವದ ಸಭೆ ನಡೆಸಿದ​ ಪವಾರ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.