ETV Bharat / bharat

ದೇಶದ ಶಾಶ್ವತ ಸಮಸ್ಯೆಗಳಿಗೆ ಕಾಂಗ್ರೆಸ್‌ ಎಂದಿಗೂ ಪರಿಹಾರ ಹುಡುಕಲಿಲ್ಲ: ರಾಜ್ಯಸಭೆಯಲ್ಲಿ ಮೋದಿ - ಪ್ರಧಾನಿ ಮೋದಿ ಭಾಷಣ

ರಾಜ್ಯಸಭೆಯಲ್ಲಿಂದು ಪ್ರಧಾನಿ ಮೋದಿ ಭಾಷಣ ಮಾಡಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

modi speech at rajyasabha
ರಾಜ್ಯಸಭೆಯಲ್ಲಿ ಕಾಂಗ್ರೆಸ್​ ವಿರುದ್ಧ ಮೋದಿ ವಾಗ್ದಾಳಿ
author img

By

Published : Feb 9, 2023, 4:19 PM IST

Updated : Feb 9, 2023, 4:48 PM IST

ನವದೆಹಲಿ: ಸಂಸತ್ತಿನ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ಮಾಡಿದ್ದ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರಿಂದು ರಾಜ್ಯಸಭೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, "ಶಾಶ್ವತ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಕಾಂಗ್ರೆಸ್‌ ಎಂದಿಗೂ ಪ್ರಯತ್ನಿಸಲೇ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ದೇಶಕ್ಕೆ ಭದ್ರ ಬುನಾದಿ ಹಾಕಿದೆ ಎಂದು ಹೇಳಿದ್ದಾರೆ. ಆದರೆ, 60 ವರ್ಷಗಳಲ್ಲಿ ಕಾಂಗ್ರೆಸ್ ರಸ್ತೆ ಗುಂಡಿಗಳನ್ನಷ್ಟೇ ನಿರ್ಮಿಸಿದೆ" ಎಂದರು.

"ಕಾಂಗ್ರೆಸ್​ ಪಂಚಾಯತ್ ಮಟ್ಟದಿಂದ ಸಂಸತ್ತಿನವರೆಗೆ ಅಧಿಕಾರದಲ್ಲಿದ್ದರೂ ಶಾಶ್ವತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಯೋಚಿಸಲಿಲ್ಲ. ಕನಿಷ್ಠ ಪಕ್ಷ ಪ್ರಯತ್ನವನ್ನೂ ಮಾಡಲಿಲ್ಲ. ಅವರು​ ಗರೀಬಿ ಹಠಾವೋ ಎಂದು ಹೇಳುತ್ತಿದ್ದರು. ಆದರೆ, ಈ ನಿಟ್ಟಿನಲ್ಲಿ ನಾಲ್ಕು ದಶಕಗಳಿಂದ ಏನನ್ನೂ ಮಾಡಲಿಲ್ಲ. ನಾವು ದೇಶದ ಜನರ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಶ್ರಮಿಸುತ್ತಿದ್ದೇವೆ. ತಂತ್ರಜ್ಞಾನದ ಶಕ್ತಿಯೊಂದಿಗೆ ಕೆಲಸದ ಸಂಸ್ಕೃತಿಯನ್ನು ಪರಿವರ್ತಿಸಿದ್ದೇವೆ" ಎಂದು ಪ್ರಧಾನಿ ಹೇಳಿದರು.

ನೆಹರೂ ಹೆಸರಿನ ಬಗ್ಗೆ ಯಾಕೆ ನಾಚಿಕೆ?: "ಕೆಲವರಿಗೆ ಸರ್ಕಾರದ ಯೋಜನೆಗಳ ಹೆಸರು ಮತ್ತು ಸಂಸ್ಕೃತ ಪದಗಳ ಹೆಸರುಗಳಲ್ಲಿ ಸಮಸ್ಯೆಗಳಿದ್ದವು. 600 ಸರ್ಕಾರಿ ಯೋಜನೆಗಳು ಗಾಂಧಿ-ನೆಹರೂ ಕುಟುಂಬದ ಹೆಸರಿನಲ್ಲಿವೆ ಎಂದು ನಾನು ವರದಿಯೊಂದನ್ನು ಓದಿದ್ದೇನೆ. ಅವರ ತಲೆಮಾರಿನವರು ನೆಹರೂ ಎಂದು ತಮ್ಮ ಉಪನಾಮವಾಗಿ ಏಕೆ ಇಟ್ಟುಕೊಳ್ಳುವುದಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ. ಈ ಬಗ್ಗೆ ಭಯ ಮತ್ತು ನಾಚಿಕೆ ಯಾಕೆ?" ಎಂದು ಮೋದಿ ಲೇವಡಿ ಮಾಡಿದರು.

ಸರ್ಕಾರಗಳನ್ನು ಉರುಳಿಸಿದ ಇತಿಹಾಸ: "ಅಧಿಕಾರದಲ್ಲಿದ್ದ ಯಾವ ಪಕ್ಷ ಮತ್ತು ಜನರು ಆರ್ಟಿಕಲ್ 356 ಅನ್ನು ದುರುಪಯೋಗಪಡಿಸಿಕೊಂಡಿದ್ದರು?. 90 ಬಾರಿ ಚುನಾಯಿತ ಸರ್ಕಾರಗಳನ್ನು ಉರುಳಿಸಸಲಾಗಿತ್ತು. ಅದನ್ನು ಮಾಡಿದವರು ಯಾರು?, ಪ್ರಧಾನಿಯೊಬ್ಬರು 356ನೇ ವಿಧಿಯನ್ನು 50 ಬಾರಿ ಬಳಕೆ ಮಾಡಿದ್ದಾರೆ. ಅವರ ಹೆಸರೇ ಇಂದಿರಾ ಗಾಂಧಿ. ಕೇರಳದಲ್ಲಿ ಕಮ್ಯುನಿಸ್ಟ್ ಸರ್ಕಾರವನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಅದು ಪಂಡಿತ್ ನೆಹರೂಗೆ ಇಷ್ಟವಾಗಲಿಲ್ಲ. ಹೀಗಾಗಿ ಅದನ್ನು ಉರುಳಿಸಲಾಯಿತು" ಎಂದು ಮೋದಿ ಟೀಕಿಸಿದರು.

"ತಮಿಳುನಾಡಿನಲ್ಲಿ ಎಂಜಿಆರ್ ಮತ್ತು ಕರುಣಾನಿಧಿಯಂತಹ ದಿಗ್ಗಜರ ಸರ್ಕಾರಗಳನ್ನೂ ಕಾಂಗ್ರೆಸ್ಸಿನವರು ವಜಾಗೊಳಿಸಿದರು. ಶರದ್ ಪವಾರ್ ಅವರ ಸರ್ಕಾರವೂ ಪತನವಾಯಿತು. ಚಿಕಿತ್ಸೆಗಾಗಿ ಅಮೆರಿಕದಲ್ಲಿದ್ದಾಗ ಎನ್‌ಟಿಆರ್‌ ಅವರಿಗೂ ಏನಾಯಿತು?, ಅವರ ಸರ್ಕಾರವನ್ನೂ ಉರುಳಿಸಲು ಪ್ರಯತ್ನಿಸಿದ್ದನ್ನೂ ನಾವು ನೋಡಿದ್ದೇವೆ" ಎಂದು ಇತಿಹಾಸದ ಪುಟಗಳನ್ನು ಮೋದಿ ತಿರುವಿ ಹಾಕಿದರು.

ನಿಜವಾದ ಜಾತ್ಯತೀತತೆ ಯಾವುದು?: ಇದೇ ವೇಳೆ ಸರ್ಕಾರದ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ ಮೋದಿ, "ನಿಜವಾದ ಜಾತ್ಯತೀತತೆಯು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳು ಎಲ್ಲ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳುತ್ತದೆ" ಎಂದು ಹೇಳಿದರು. "ಸದನದಲ್ಲಿ ಉದ್ಯೋಗ ವಿಷಯದ ಬಗ್ಗೆಯೂ ಚರ್ಚಿಸಲಾಗಿದೆ. ಸಾರ್ವಜನಿಕ ಜೀವನದಲ್ಲಿ ಬಹಳ ದಿನಗಳಿಂದ ಇದ್ದೇವೆ ಎಂದು ಹೇಳಿಕೊಳ್ಳುವವರಿಗೆ ಕೆಲಸ ಮತ್ತು ಉದ್ಯೋಗಕ್ಕೂ ವ್ಯತ್ಯಾಸವಿದೆ ಎಂದು ತಿಳಿಯದೇ ಇರುವುದು ನನಗೆ ಆಶ್ಚರ್ಯವಾಗಿದೆ. ಇವುಗಳ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳದವರು ನಮಗೆ ಉಪದೇಶ ಮಾಡುತ್ತಾರೆ. ಹೊಸ ವೃತ್ತಾಂತಗಳನ್ನು ಸೃಷ್ಟಿಸಲು ಅರೆಬೆಂದ ವಿಷಯಗಳ ಬಗ್ಗೆ ಮಾತನಾಡುವ ಮೂಲಕ ಸುಳ್ಳನ್ನು ಹರಡುವ ಪ್ರಯತ್ನ ಮಾಡಲಾಗುತ್ತಿದೆ" ಎಂದು ಕಿಡಿಕಾರಿದರು.

ಆತ್ಮನಿರ್ಭರ್ ಭಾರತ್ ಪ್ರಸ್ತಾಪ: "ಕಳೆದ ಒಂಬತ್ತು ವರ್ಷಗಳಲ್ಲಿ ಆರ್ಥಿಕತೆಯ ವಿಸ್ತರಣೆಯೊಂದಿಗೆ ಹೊಸ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲಾಗಿದೆ. ದೇಶವು ಹಸಿರು ಆರ್ಥಿಕತೆಯತ್ತ ಸಾಗುತ್ತಿರುವುದರಿಂದ ಹಸಿರು ವಲಯದಲ್ಲಿ ಉದ್ಯೋಗಗಳು ಹೆಚ್ಚುತ್ತಿವೆ. ಡಿಜಿಟಲ್ ಇಂಡಿಯಾ ಹೊಸ ಎತ್ತರಕ್ಕೆ ಹೋಗುತ್ತಿದ್ದು, ಸೇವಾ ವಲಯದಲ್ಲಿ, 90 ಸಾವಿರ ನೋಂದಾಯಿತ ಸ್ಟಾರ್ಟಪ್‌ಗಳು ಉದ್ಯೋಗಕ್ಕಾಗಿ ಹೊಸ ಬಾಗಿಲುಗಳನ್ನು ತೆರೆದಿವೆ. ಆತ್ಮನಿರ್ಭರ್ ಭಾರತ್ ಯೋಜನೆಯಿಂದ 60 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಿಗಳು ಪ್ರಯೋಜನ ಪಡೆದಿದ್ದಾರೆ" ಎಂದು ಪ್ರಧಾನಿ ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್​ ಅಧ್ಯಕ್ಷರ ಟೀಕೆಗೆ ಕಲಬುರಗಿ ಅಭಿವೃದ್ಧಿ ಅಂಕಿ - ಅಂಶ ನೀಡುವ ಮೂಲಕ ತಿರುಗೇಟು ನೀಡಿದ ಮೋದಿ

Last Updated : Feb 9, 2023, 4:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.