ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ ಡಿಜಿಟಲ್ ಮತ್ತು ಹಸಿರಿಗೆ ಒತ್ತು ಕೊಡಲಾಗಿದೆ. ಆದರೆ ಪ್ರಮುಖ ವಿಷಯವಾದ ಬಡತನ ಮತ್ತು ಆಹಾರ ಭದ್ರತೆಯಂತಹ ವಿಷಯಗಳನ್ನು ಉಲ್ಲೇಖಿಸಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಸಂಸದ ಕಪಿಲ್ ಸಿಬಲ್ ಅಭಿಪ್ರಾಯ ಪಟ್ಟಿದ್ದಾರೆ.
'ವಿಮಾನ ನಿಲ್ದಾಣಗಳನ್ನು ಖರೀದಿಸುವಂತಹ ಜನರಿಗೆ ಈ ಬಜೆಟ್ ನೀಡಲಾಗಿದೆ, ನೀವು ಕೇವಲ ಆಕಾಶವನ್ನೇ ನೋಡುತ್ತಿದ್ದೀರಿ, ಆದರೆ ನೀವು ನೆಲವನ್ನು ನೋಡಬೇಕು' ಎಂದು ಸಿಬಲ್ ಪ್ರತಿಪಾದಿಸಿದ್ದಾರೆ. ಸರ್ಕಾರದ ಚಿಂತನೆ, ಯೋಜನೆ ಕೇವಲ ಶ್ರೀಮಂತರಿಗಾಗಿ ಇರದೇ, ಬಡವರ ಬಗ್ಗೆಯೂ ಯೋಚಿಸಬೇಕೆಂಬ ಅರ್ಥದಲ್ಲಿ ಕಪಿಲ್ ಸಿಬಲ್ ಈ ರೀತಿಯ ಹೇಳಿಕೆ ನೀಡಿದ್ದಾರೆ. ಅಲ್ಲದೇ ಕೇವಲ ಕೈಗಾರಿಕೆಗಳು ಸಂಪತ್ತನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ಸಿಬಲ್ ಹೇಳಿದರು.
ಇದನ್ನೂ ಓದಿ: ನಾಯಿಮರಿಯೊಂದಿಗೆ ಚೀನಾ ಗಡಿ ಪಯಣ ಬೆಳೆಸಿದ ತೆಲಂಗಾಣದ ಯುವ ಸೈಕ್ಲಿಸ್ಟ್
ಸಂಪತ್ತನ್ನು ವಿಶ್ವವಿದ್ಯಾನಿಲಯಗಳಿಂದ ಸೃಷ್ಟಿಸಲಾಗುತ್ತದೆ, ಕೈಗಾರಿಕೆಗಳಿಂದಲ್ಲ. ನಾನು 2014ರಿಂದ ಅಮೃತ ಕಾಲದ ಬದಲಿಗೆ ಬರೀ ರಾಹುಕಾಲವನ್ನು ಅನುಭವಿಸಿದ್ದೇನೆ ಎಂದು ಸಿಬಲ್ ಪರೋಕ್ಷವಾಗಿ ಬಿಜೆಪಿ ಸರ್ಕಾರದ ಆಡಳಿತ ಕುರಿತು ವಾಗ್ದಾಳಿ ನಡೆಸಿದರು.