ಸಾಗರ (ಮಧ್ಯಪ್ರದೇಶ): ರೇವಾಂಚಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಕಾಂಗ್ರೆಸ್ ಶಾಸಕರಾದ ಸಿದ್ಧಾರ್ಥ್ ಕುಶ್ವಾಹ ಮತ್ತು ಸುನೀಲ್ ಸರ್ರಾಫ್ ವಿರುದ್ಧ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿದ್ದಾರೆ. ಈ ಬಗ್ಗೆ ಮಹಿಳೆಯ ಪತಿ ರೈಲ್ವೆ ಸಚಿವಾಲಯಕ್ಕೆ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ರೈಲ್ವೇ ಪೊಲೀಸರು ಸಾಗರದಲ್ಲಿ ರೈಲು ನಿಲ್ಲಿಸಿ ಶಾಸಕರನ್ನು ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಶಾಸಕ ಸುನೀಲ್ ಸರ್ರಾಫ್ , ಆ ಮಹಿಳೆ ನಾವು ಅಸಭ್ಯವಾಗಿ ವರ್ತಿಸಿರುವ ಬಗ್ಗೆ ತನ್ನ ಮಗನ ತಲೆಯ ಮೇಲೆ ಕೈಯಿಟ್ಟು ಆಣೆ ಮಾಡಿ ಹೇಳಲಿ. ಒಂದು ವೇಳೆ ನಿಜವೇ ಆಗಿದ್ದರೆ ನಾವು ಯಾವುದೇ ಶಿಕ್ಷೆಗೂ ಬದ್ಧವಾಗಿದ್ದೇವೆ ಎಂದು ಹೇಳಿದ್ದಾರೆ. ಜೊತೆಗೆ ಮಹಿಳೆಯೂ ನಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಶಾಸಕರು ಹೇಳಿದ್ದಾರೆ.
ಏನಿದು ಪ್ರಕರಣ : ಶುಕ್ರವಾರ ರಾತ್ರಿ 1:30 ರ ಸುಮಾರಿಗೆ ಪ್ರಫುಲ್ ಶರ್ಮಾ ಎಂಬವರು ತಮ್ಮ ಪತ್ನಿ ಸತ್ನಾದಿಂದ ಭೋಪಾಲ್‌ಗೆ ರೇವಾಂಚಲ್ ಎಕ್ಸ್‌ಪ್ರೆಸ್‌ನ ಏ1 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ತನ್ನ ಪತ್ನಿಯೊಂದಿಗೆ ಅಸಭ್ಯವಾಗಿ ನಡೆದುಕೊಳ್ಳಲಾಗಿದೆ ಎಂದು ರೈಲ್ವೆ ಸಚಿವಾಲಯಕ್ಕೆ ಟ್ವೀಟ್ ಮಾಡಿದ್ದರು. ಈ ಮಾಹಿತಿ ಮೇರೆಗೆ ರೈಲ್ವೆ ಪೊಲೀಸರು ಸಾಗರ್ ರೈಲು ನಿಲ್ದಾಣದಲ್ಲಿ ರೈಲು ನಿಲ್ಲಿಸಿ ಕೋಚ್‌ಗೆ ಹೋಗಿ ಇವರ ವಿಚಾರಣೆ ನಡೆಸಿದ್ದಾರೆ.
ಮಹಿಳೆಯ ಆರೋಪ: ಮಹಿಳೆಯು ನನಗೆ ಶಾಸಕರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಶಾಸಕರು ಈ ಮಹಿಳೆ ನಮ್ಮ ಆಸನದಲ್ಲಿ ಕುಳಿತಿದ್ದರು. ಈ ಬಗ್ಗೆ ಕೇಳಿದಾಗ ನಮ್ಮನ್ನು ನಿಂದಿಸಿ ಜಗಳವಾಡಿದರು ಎಂದು ಹೇಳಿದ್ದಾರೆ. ಬಳಿಕ ಮಹಿಳೆಯೊಂದಿಗೆ ಕಾನ್ಸ್ಟೇಬಲ್ ಮತ್ತು ಎಎಸ್‌ಐ ಅನ್ನು ಭೋಪಾಲ್‌ಗೆ ಕಳುಹಿಸಿಲಾಗಿದ್ದು, ನಂತರ ಮಹಿಳೆಯ ದೂರಿನ ಮೇರೆಗೆ ಇಬ್ಬರೂ ಶಾಸಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ : 5G ಗಾಗಿ ಲಿಂಕ್ ಕ್ಲಿಕ್ ಮಾಡಿದ್ರೆ ಖಾತೆಯಲ್ಲಿನ ಅಷ್ಟೂ ಹಣ ಮಂಗಮಾಯ.. ಹುಷಾರ್!