ETV Bharat / bharat

ಉತ್ತರಾಖಂಡದಲ್ಲಿ ಕಾಂಗ್ರೆಸ್ ಸೋಲು.. ನೈತಿಕ ಹೊಣೆ ಹೊತ್ತು ರಾಜ್ಯ ಉಸ್ತುವಾರಿ ರಾಜೀನಾಮೆ - ದೀಪಿಕಾ ಸಿಂಗ್ ಪಾಂಡೆ ರಾಜೀನಾಮೆ

ಉತ್ತರಾಖಂಡದಲ್ಲಿ ಕಾಂಗ್ರೆಸ್​ ಉಸ್ತುವಾರಿಯಾಗಿದ್ದ ದೀಪಿಕಾ ಸಿಂಗ್ ಪಾಂಡೆ ಸೋಲಿನ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Jharkhand MLA Dipika resigns
Jharkhand MLA Dipika resigns
author img

By

Published : Mar 14, 2022, 6:06 PM IST

ಜಮ್ಶೆಡ್‌ಪುರ(ಜಾರ್ಖಂಡ್​): ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಹೀನಾಯ ಸೋಲು ಕಂಡಿದೆ. ಉತ್ತರಾಖಂಡದಲ್ಲಿ ಪಕ್ಷದ ಸೋಲಿನ ನೈತಿಕ ಹೊಣೆ ಹೊತ್ತು ಕಾಂಗ್ರೆಸ್​ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಗೆ ದೀಪಿಕಾ ಸಿಂಗ್ ಪಾಂಡೆ ರಾಜೀನಾಮೆ ನೀಡಿದ್ದಾರೆ.

ಜಾರ್ಖಂಡ್​ನ ಮಹಗಮ ಕ್ಷೇತ್ರದ ಶಾಸಕಿಯಾಗಿರುವ ದೀಪಿಕಾ ಸಿಂಗ್​​, ಉತ್ತರಾಖಂಡ್​​ ವಿಧಾನಸಭೆ ಚುನಾವಣೆ ವೇಳೆ ಪಕ್ಷದ ಉಸ್ತುವಾರಿಯಾಗಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್​​ ಹೀನಾಯವಾಗಿ ಸೋಲು ಕಂಡಿರುವ ಬೆನ್ನಲ್ಲೇ ನೈತಿಕ ಜವಾಬ್ದಾರಿ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಜಮ್ಶೆಡ್‌ಪುರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಿದ್ದ ದೀಪಿಕಾ ಸಿಂಗ್​ ಪಾಂಡೆ, ಪಕ್ಷ ಯಾವುದೇ ಜವಾಬ್ದಾರಿ ನೀಡದ್ರೂ ನಿರ್ವಹಿಸಲು ಸಿದ್ಧನಿದ್ದೇನೆ. ದೇಶದಲ್ಲಿ ನಿರುದ್ಯೋಗ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆ ಕೂಡ ಕೋಮು ರಾಜಕೀಯ ಪ್ರಬಲವಾಗಿ ಕೆಲಸ ಮಾಡ್ತಿದ್ದು, ಹೀಗಾಗಿ ಕಾಂಗ್ರೆಸ್​ ಸೋಲು ಕಂಡಿದೆ. ನನಗೆ ಪಕ್ಷ ನೀಡಿದ್ದ ಎಲ್ಲ ಸ್ಥಾನಗಳಿಂದಲೂ ಇದೀಗ ಕೆಳಗಿಳಿಯುತ್ತಿರುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿರಿ: ನಿಮ್ಮ ಮಗನನ್ನು ನಂಬಿ ಮತ ಹಾಕಿದ್ದಕ್ಕೆ ಧನ್ಯವಾದ.. ಸಂಸದ ಸ್ಥಾನಕ್ಕೆ ಮಾನ್​ ರಾಜೀನಾಮೆ

ಉತ್ತರಾಖಂಡನ 70 ವಿಧಾನಸಭೆ ಕ್ಷೇತ್ರಗಳ ಪೈಕಿ ಭಾರತೀಯ ಜನತಾ ಪಾರ್ಟಿ 47 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೊಂದು ಅವಧಿಗೆ ಸರ್ಕಾರ ರಚನೆ ಮಾಡುತ್ತಿದ್ದು, ಕಾಂಗ್ರೆಸ್ ಕೇವಲ 19 ಕ್ಷೇತ್ರಗಳಲ್ಲಿ ಗೆದ್ದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.