ಪಶ್ಚಿಮ ಗೋದಾವರಿ: ಜಿಲ್ಲೆಗೆ ಪ್ರಧಾನಿ ಭೇಟಿಯನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡರು ಹಲವೆಡೆ ಧರಣಿ ನಡೆಸಿದರು. ಗನ್ನವರಂ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಟೇಕ್ ಆಫ್ ಆದ ಕೂಡಲೇ ಕಪ್ಪು ಬಲೂನ್ ಬಿಡುಗಡೆ ಮಾಡಿದರು. ಕಾಂಗ್ರೆಸ್ ನಾಯಕಿ ಸುಂಕರ ಪದ್ಮಶ್ರೀ ಸೇರಿದಂತೆ ಮೂವರು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಭೇಟಿ ವಿರೋಧಿಸಿ ಏಲೂರು ಜಿಲ್ಲೆಯ ಜಂಗಾರೆಡ್ಡಿಗುಡೆಂನಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು. "ಮೋದಿ ಗೋ ಬ್ಯಾಕ್" ಎಂದು ಘೋಷಣೆಗಳನ್ನು ಕೂಗಿದರು. ಭೀಮಾವರಂನಲ್ಲಿ ಕಪ್ಪು ಬಲೂನ್ ಹಿಡಿದು ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್ ಮುಖಂಡರನ್ನು ಪೊಲೀಸರು ತಡೆದರು. ಈ ನಡುವೆ ಪೊಲೀಸ್ ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯೂ ನಡೆಯಿತು.
ಬಲೂನ್ ಹಾರಿಸಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಬಂಧಿತ 4 ಕಾಂಗ್ರೆಸ್ ಕಾರ್ಯಕರ್ತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಕೃಷ್ಣಾ ಜಿಲ್ಲಾ ಡಿಎಸ್ಪಿ ವಿಜಯ್ ಪಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಅಲ್ಲೂರಿ ಸ್ಪೂರ್ತಿ ಪಡೆದು ಮುನ್ನಡೆದರೆ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಮೋದಿ
-
#WATCH | A Congress worker released black balloons moments after PM Modi's chopper took off, during his visit to Andhra Pradesh.
— ANI (@ANI) July 4, 2022 " class="align-text-top noRightClick twitterSection" data="
(Source: unverified) pic.twitter.com/ZYRlAyUcZK
">#WATCH | A Congress worker released black balloons moments after PM Modi's chopper took off, during his visit to Andhra Pradesh.
— ANI (@ANI) July 4, 2022
(Source: unverified) pic.twitter.com/ZYRlAyUcZK#WATCH | A Congress worker released black balloons moments after PM Modi's chopper took off, during his visit to Andhra Pradesh.
— ANI (@ANI) July 4, 2022
(Source: unverified) pic.twitter.com/ZYRlAyUcZK#WATCH | A Congress worker released black balloons moments after PM Modi's chopper took off, during his visit to Andhra Pradesh.
— ANI (@ANI) July 4, 2022
(Source: unverified) pic.twitter.com/ZYRlAyUcZK