ETV Bharat / bharat

ರಾಹುಲ್ ಶೂಲೇಸ್‌ ಕಟ್ಟಿದ ಆರೋಪ: ಅಮಿತ್ ಮಾಳವಿಯಾಗೆ ಕಾಂಗ್ರೆಸ್ ನಾಯಕನ ಎಚ್ಚರಿಕೆ - ರಾಹುಲ್ ಶೂಲೇಸ್‌ ಕಟ್ಟಿದ ಆರೋಪ

ಮಾಳವಿಯಾ ಹೇಳಿಕೆಗೆ ತಿರುಗೇಟು ನೀಡಿರುವ ಜಿತೇಂದ್ರ ಸಿಂಗ್, ಮಾಳವಿಯಾ ಅವರ ಹೇಳಿಕೆ ಸಂಪೂರ್ಣ ಸುಳ್ಳು, ತಕ್ಷಣ ಅದನ್ನು ಡಿಲೀಟ್​ ಮಾಡಿ, ಇಲ್ಲವೆ ಕಾನೂನು ಕ್ರಮ ಎದುರಿಸಿ ಎಂದು ಟ್ವೀಟ್​ ಮಾಡಿದ್ದಾರೆ.

Bharath Jodo Yathre
ಭಾರತ್​ ಜೋಡೋ ಯಾತ್ರೆ
author img

By

Published : Dec 22, 2022, 9:17 AM IST

Updated : Dec 22, 2022, 4:47 PM IST

ಭಾರತ್​ ಜೋಡೋ ಯಾತ್ರೆಯಲ್ಲಿ ಶೂಲೇಸ್​ ಕಟ್ಟಿಕೊಳ್ಳುತ್ತಿರುವ ಜಿತೇಂದ್ರ ಸಿಂಗ್​

ಅಲ್ವಾರ್ (ರಾಜಸ್ಥಾನ): ಮಾಜಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅಲ್ವಾರ್ ಅವರು ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯ ಶೂಲೇಸ್‌ಗಳನ್ನು ಕಟ್ಟುತ್ತಿದ್ದಾರೆ ಎಂದು ಹೇಳುವ ವಿಡಿಯೋವನ್ನು ಶೇರ್ ಮಾಡಿದ್ದಕ್ಕಾಗಿ ಭಾರತೀಯ ಜನತಾ ಪಕ್ಷದ ಐಟಿ ಸೆಲ್ ಉಸ್ತುವಾರಿ ಅಮಿತ್ ಮಾಳವಿಯಾ ಅವರು ಕ್ಷಮೆ ಯಾಚಿಸಬೇಕು ಮತ್ತು ಆ ಟ್ವೀಟ್ ಡಿಲೀಟ್ ಮಾಡಬೇಕು. ಇಲ್ಲವೇ ಕಾನೂನು ಕ್ರಮ ಎದುರಿಸಲು ಸಜ್ಜಾಗಿ ಎಂದು ಎಚ್ಚರಿಕೆ ನೀಡಿದ್ದಾರೆ.

ಮಾಳವಿಯಾ ಹೇಳಿಕೆಗೆ ತಿರುಗೇಟು ನೀಡಿರುವ ಜಿತೇಂದ್ರ ಸಿಂಗ್, ಮಾಳವಿಯಾ ಅವರ ಹೇಳಿಕೆ ಸಂಪೂರ್ಣ ಸುಳ್ಳು ಹಾಗೂ ಮಾನಹಾನಿರ ಎಂದು ಟ್ವೀಟ್​ ಮಾಡಿದ್ದಾರೆ. ಟ್ವಿಟರ್​ನಲ್ಲಿ 'ಆಡಳಿತ ಬಿಜೆಪಿಯ ರಾಷ್ಟ್ರೀಯ ಮಾಹಿತಿ ಇಲಾಖೆಯ ಉಸ್ತುವಾರಿಯಾಗಿ ನಿಮ್ಮ ಟ್ವೀಟ್ ಸಂಪೂರ್ಣ ಸುಳ್ಳು ಮತ್ತು ಮಾನಹಾನಿಕರವಾಗಿದೆ.

  • As incharge of ruling BJP’s National Info Dept your tweet is a complete lie and defamatory.

    The fact is that after being pointed out by Rahul ji upon my request he paused briefly so that I could tie my own shoe laces.

    Delete the tweet and apologise to RG or face legal action https://t.co/HDXVii09bg

    — Jitendra Singh Alwar (@JitendraSAlwar) December 21, 2022 " class="align-text-top noRightClick twitterSection" data=" ">

ವಾಸ್ತವ ಎಂದರೆ ನನ್ನ ಮನವಿಯ ಮೇರೆಗೆ ರಾಹುಲ್ ಗಮನ ಸೆಳೆದ ನಂತರ ಅವರು ನನ್ನದೇ ಶೂಲೇಸ್‌ಗಳನ್ನು ಕಟ್ಟಿಕೊಳ್ಳಲು ಸ್ವಲ್ಪ ವಿರಾಮ ನೀಡಿದರು. ಟ್ವೀಟ್​ ಡಿಲಿಟ್​ ಮಾಡಿ ರಾಹುಲ್​ ಗಾಂಧಿ ಅವರಿಗೆ ಕ್ಷಮೆಯಾಚಿಸಿ ಅಥವಾ ಕಾನೂನು ಕ್ರಮ ಎದುರಿಸಬೇಕಾಗುತ್ತದೆ' ಎಂದು ಬರೆದಿದ್ದಾರೆ.

  • Former union minister Bhanwar Jitendra Singh goes down on his knee to tie Rahul Gandhi’s shoe lace. The arrogant entitled brat instead of helping himself is seen patting his back…

    इसी परिपाटी की बात कर रहे थे खड़गे जी? कांग्रेस में पिद्दियों की कमी नहीं है। pic.twitter.com/FtHCCwNTwu

    — Amit Malviya (@amitmalviya) December 21, 2022 " class="align-text-top noRightClick twitterSection" data=" ">

ಟ್ವಿಟ್ಟರ್‌ನಲ್ಲಿ ಅಮಿತ್ ಮಾಳವೀಯ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ, ಜಿತೇಂದ್ರ ಸಿಂಗ್ ಅವರು ಬಗ್ಗಿದಾಗ ರಾಹುಲ್ ಗಾಂಧಿ ಅವರು ಇತರ ಕಾಂಗ್ರೆಸ್ ನಾಯಕರ ಜೊತೆಗೆ ನಡೆಯುತ್ತಿರುವುದನ್ನು ಕಾಣಬಹುದು. ಇದನ್ನು ಮಾಳವಿಯಾ ಅವರು, ಜಿತೇಂದ್ರ ಸಿಂಗ್ ಅವರು ರಾಹುಲ್ ಗಾಂಧಿಯ ಶೂಲೇಸ್‌ಗಳನ್ನು ಕಟ್ಟಲು ಬಗ್ಗಿದ್ದಾರೆ. ರಾಹುಲ್ ಗಾಂಧಿ 'ಸೊಕ್ಕಿನ ದಂಗೆಕೋರ'. ತಮ್ಮ ಶೂಲೇಸ್​ಗಳನ್ನು ತಾವೇ ಕಟ್ಟಿಕೊಳ್ಳುವ ಬದಲು ಜಿತೇಂದ್ರ ಸಿಂಗ್ ಅವರ ಬೆನ್ನು ತಟ್ಟುತ್ತಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ಸರ್ಕಾರದಿಂದ ಭಾರತ್​ ಜೋಡೋ ಯಾತ್ರೆಗೆ ಅಡ್ಡಿ ಯತ್ನ: ಕರ್ನಾಟಕ ಬಿಜೆಪಿ ಯಾತ್ರೆ ಪ್ರಶ್ನಿಸಿದ ಕಾಂಗ್ರೆಸ್​

Last Updated : Dec 22, 2022, 4:47 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.