ETV Bharat / bharat

'ನನ್ನನ್ನು ಇಡಿ ಕಚೇರಿಯಲ್ಲಿ ಕೂರಿಸುವ ಮೂಲಕ ಪ್ರಧಾನಿ ನನ್ನ ನಡವಳಿಕೆ ಬದಲಿಸಲು ಆಗಲ್ಲ' - ವಯನಾಡುನಲ್ಲಿ ರಾಹುಲ್ ಗಾಂಧಿ

ಮೂರು ದಿನಗಳ ಕೇರಳ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

Congress leader Rahul Gandhi
Congress leader Rahul Gandhi
author img

By

Published : Jul 1, 2022, 9:49 PM IST

ವಯನಾಡು(ಕೇರಳ): ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ನನ್ನನ್ನು ಕೂಡಿಸುವ ಮೂಲಕ ನನ್ನ ನಡವಳಿಕೆಯಲ್ಲಿ ಪ್ರಧಾನಿ ಮೋದಿ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಮೂರು ದಿನಗಳ ಕೇರಳ ಪ್ರವಾಸದಲ್ಲಿರುವ ಅವರು, ಇಂದು ತಮ್ಮ ಸಂಸದೀಯ ಕ್ಷೇತ್ರ ವಯನಾಡಿಗೆ ಭೇಟಿ ನೀಡಿದರು.

ಇದನ್ನೂ ಓದಿ: ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್​ ಹೆಸರು 'ಭಾಗ್ಯನಗರ': ರಘುಬರ್​ ದಾಸ್​

ಈ ವೇಳೆ ಮಾತನಾಡಿರುವ ಅವರು, ನನ್ನನ್ನು ಐದು ದಿನಗಳ ಕಾಲ ಕೇಂದ್ರ ಏಜೆನ್ಸಿ ಕಚೇರಿಯಲ್ಲಿ ಕೂರಿಸುವ ಮೂಲಕ ನನ್ನ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಾಗಲಿಲ್ಲ. ಹಿಂಸಾಚಾರ, ಬೆದರಿಕೆಗಳಿಂದ ಜನರು ಬದಲಾಗುವುದಿಲ್ಲ. ನನ್ನ ಕಚೇರಿ ಮೇಲೆ ಧ್ವಂಸ ಮಾಡಿಸುವ ಮೂಲಕ ಹಿಂಸಾಚಾರಕ್ಕೆ ಬಿಜೆಪಿ ಪುಷ್ಠಿ ನೀಡುತ್ತಿದೆ ಎಂದರು.

ದೇಶದ ಜನರ ಪ್ರೀತಿಯಿಂದ ನನ್ನ ನಡವಳಿಕೆ ರೂಪುಗೊಂಡಿದೆ. ನನ್ನ ವಿರೋಧಿಗಳು ಅಥವಾ ಶತ್ರುಗಳಿಂದ ಅದನ್ನ ಬದಲಾವಣೆ ಮಾಡಲು ಸಾಧ್ಯವಾಗಲ್ಲ ಎಂದರು. ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದಂತೆ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ರಾಹುಲ್ ಗಾಂಧಿಗೆ ನೋಟಿಸ್ ನೀಡಿತ್ತು. ಇದರ ನಂತರ ಐದು ದಿನಗಳ ಕಾಲ ಅವರು ವಿಚಾರಣೆ ಎದುರಿಸಿದ್ದಾರೆ. ಇದೀಗ ಕೇರಳ ಪ್ರವಾಸ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.