ಸೂರತ್(ಗುಜರಾತ್): ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ತಮಗೆ ವಿಧಿಸಲಾದ 2 ವರ್ಷ ಶಿಕ್ಷೆ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಇಂದು ಗುಜರಾತ್ನ ಸೂರತ್ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾದ ಗಾಂಧಿ ತಮ್ಮ ವಿರುದ್ಧದ ಶಿಕ್ಷೆಯನ್ನು ಉನ್ನತ ಕೋರ್ಟ್ನಲ್ಲಿ ಸವಾಲು ಮಾಡಿದರು. ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಮೇ 3 ರಂದು ಸೂರತ್ ನ್ಯಾಯಾಲಯದಲ್ಲಿ ನಡೆಯಲಿದೆ. ಇದೇ ವೇಳೆ, ಪ್ರಕರಣದಲ್ಲಿ ಕಾಂಗ್ರೆಸ್ ನಾಯಕನಿಗೆ ನೀಡಿದ ಜಾಮೀನನ್ನು 10 ದಿನಗಳ ಕಾಲ ವಿಸ್ತರಿಸಿ, ಮುಂದಿನ ವಿಚಾರಣೆಯನ್ನು ಏಪ್ರಿಲ್ 13 ರಂದು ಮುಂದೂಡಿದೆ.
-
#WATCH | Congress leader Rahul Gandhi waves to the crowd as he leaves from District Court, Surat after filing an appeal against his conviction in the defamation case pic.twitter.com/0BmWTMAW0k
— ANI (@ANI) April 3, 2023 " class="align-text-top noRightClick twitterSection" data="
">#WATCH | Congress leader Rahul Gandhi waves to the crowd as he leaves from District Court, Surat after filing an appeal against his conviction in the defamation case pic.twitter.com/0BmWTMAW0k
— ANI (@ANI) April 3, 2023#WATCH | Congress leader Rahul Gandhi waves to the crowd as he leaves from District Court, Surat after filing an appeal against his conviction in the defamation case pic.twitter.com/0BmWTMAW0k
— ANI (@ANI) April 3, 2023
ಸೂರತ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ರಾಹುಲ್ ಗಾಂಧಿ ಅವರು ಸಹೋದರಿ ಪ್ರಿಯಾಂಕಾ ವಾದ್ರಾ ಅವರ ಜೊತೆಗೆ ವಿಮಾನದಲ್ಲಿ ಸೂರತ್ಗೆ ಆಗಮಿಸಿದರು. ರಾಹುಲ್ಗೆ ಬೆಂಬಲವಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಛತ್ತೀಸ್ಗಢ ಸಿಎಂ ಭೂಪೇಶ್ ಬಘೇಲಾ ಅವರು ಸೇರಿದಂತೆ ಗುಜರಾತನ್ ಕಾಂಗ್ರೆಸ್ ನಾಯಕರು ಜೊತೆಯಲ್ಲಿದ್ದರು.
-
Hearing in the case challenging Congress leader Rahul Gandhi's conviction in a defamation case will next be held on May 3 in Surat Court pic.twitter.com/PPQNr4moxH
— ANI (@ANI) April 3, 2023 " class="align-text-top noRightClick twitterSection" data="
">Hearing in the case challenging Congress leader Rahul Gandhi's conviction in a defamation case will next be held on May 3 in Surat Court pic.twitter.com/PPQNr4moxH
— ANI (@ANI) April 3, 2023Hearing in the case challenging Congress leader Rahul Gandhi's conviction in a defamation case will next be held on May 3 in Surat Court pic.twitter.com/PPQNr4moxH
— ANI (@ANI) April 3, 2023
ನಾಯಕರ ಜೊತೆಗೂಡಿ ಸೂರತ್ ಜಿಲ್ಲಾ ನ್ಯಾಯಾಲಯಕ್ಕೆ ಬಂದ ರಾಹುಲ್ ಗಾಂಧಿ ತಮ್ಮ ವಿರುದ್ಧ ಮಾನಹಾನಿ ಕೇಸಲ್ಲಿ ನೀಡಲಾದ ಶಿಕ್ಷೆಯನ್ನು ಪ್ರಶ್ನಿಸಿ ಎರಡು ಅರ್ಜಿಗಳನ್ನು ಸಲ್ಲಿಸಿದರು. ಅರ್ಜಿಯ ವಿಚಾರಣೆಯನ್ನು ಮೇ 3 ಕ್ಕೆ ನಡೆಸಲಾಗುವುದು ಎಂದು ಕೋರ್ಟ್ ತಿಳಿಸಿತು. ಇದೇ ವೇಳೆ, ಪ್ರಕರಣದಲ್ಲಿ ಕೋರ್ಟ್ ನೀಡಿದ್ದ ಜಾಮೀನಿನ ಅವಧಿಯನ್ನು 10 ದಿನ ವಿಸ್ತರಣೆ ಮಾಡಿತು. ಬಳಿಕ ರಾಹುಲ್ ಅವರು ಕಾಂಗ್ರೆಸ್ ನಾಯಕರು, ಬೆಂಬಲಿಗರೊಂದಿಗೆ ಕೋರ್ಟ್ ಆವರಣದಿಂದ ಹೊರಬಂದರು.
ಪ್ರಕರಣದ ಹಿನ್ನೆಲೆ ಹೀಗಿದೆ..: 2019 ರ ಲೋಕಸಭೆ ಚುನಾವಣೆಯ ವೇಳೆ ಕರ್ನಾಟಕದ ಕೋಲಾರದಲ್ಲಿ ರಾಹುಲ್ ಗಾಂಧಿ ಅವರು ಮೋದಿ ಉಪನಾಮ ವಿಚಾರವಾಗಿ ವಿವಾದಿತ ಹೇಳಿಕೆ ನೀಡಿದ್ದರು. ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಎಂಬವರು ಸೂರತ್ ಜಿಲ್ಲಾ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಚ್.ಎಚ್.ವರ್ಮಾ ಅವರಿದ್ದ ಪೀಠ ರಾಹುಲ್ ಗಾಂಧಿ ಅವರನ್ನು ದೋಷಿ ಎಂದು ಘೋಷಿಸಿದ್ದರು.
-
Defamation case | Surat Sessions Court extends Rahul Gandhi's bail till April 13, the next date of hearing in the case pic.twitter.com/Orvny11Wpl
— ANI (@ANI) April 3, 2023 " class="align-text-top noRightClick twitterSection" data="
">Defamation case | Surat Sessions Court extends Rahul Gandhi's bail till April 13, the next date of hearing in the case pic.twitter.com/Orvny11Wpl
— ANI (@ANI) April 3, 2023Defamation case | Surat Sessions Court extends Rahul Gandhi's bail till April 13, the next date of hearing in the case pic.twitter.com/Orvny11Wpl
— ANI (@ANI) April 3, 2023
ರಾಹುಲ್ ಗಾಂಧಿ ತಮ್ಮ ವಿರುದ್ಧದ ಕೇಸ್ ವಿಚಾರಣೆಗೆ ಖುದ್ದು ಹಾಜರಾಗಿದ್ದರು. ನ್ಯಾಯಮೂರ್ತಿ ಎಚ್.ಎಚ್.ವರ್ಮಾ ಪ್ರಕರಣದ ತೀರ್ಪು ಪ್ರಕಟಿಸಿದ್ದು, ರಾಹುಲ್ ಅವರು ನೀಡಿದ್ದ ಹೇಳಿಕೆಯಿಂದ ಇನ್ನೊಬ್ಬರ ಮಾನಹಾನಿಯಾಗಿದೆ. ಇದು ಕ್ರಿಮಿನಲ್ ಹೇಳಿಕೆಯಾಗಿದೆ ಎಂದಿರುವ ಕೋರ್ಟ್, 2 ವರ್ಷ ಜೈಲು ಶಿಕ್ಷೆ ನೀಡಿತ್ತು. ಆ ಬಳಿಕ ರಾಹುಲ್ ಮನವಿಯ ಮೇರೆಗೆ 30 ದಿನಗಳ ಕಾಲ ಜಾಮೀನು ಕೂಡ ಮಂಜೂರು ಮಾಡಿದೆ.
ರಾಹುಲ್ ಸಂಸದ ಸ್ಥಾನ ಅನರ್ಹ: ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾದ ಬಳಿಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಇವರು ಕೇರಳದ ವಯನಾಡ್ ಸಂಸದ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅನರ್ಹತೆಯನ್ನು ಕಾಂಗ್ರೆಸ್ ಮತ್ತು ಕೆಲವು ವಿಪಕ್ಷಗಳು ಖಂಡಿಸುತ್ತಿವೆ. ಇಂದೊಂದು ಸೇಡಿನ ರಾಜಕಾರಣವಾಗಿದ್ದು, ರಾಜಕೀಯವಾಗಿಯೇ ಎದುರಿಸಲಾಗುವುದು ಎಂದು ಹೇಳಿವೆ.
ಓದಿ: ಕ್ರಿಮಿನಲ್ ಕೇಸಲ್ಲಿ ಜೈಲು ಶಿಕ್ಷೆ: ನಾಳೆ ಸೂರತ್ ಕೋರ್ಟ್ಗೆ ರಾಹುಲ್ ಗಾಂಧಿ ಮೇಲ್ಮನವಿ ಸಾಧ್ಯತೆ