ನವದೆಹಲಿ : ಚಾಂದಿನಿ ಚೌಕ್ ಕ್ಷೇತ್ರದ ಮಾಜಿ ಶಾಸಕಿ ಮತ್ತು ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಲಾಂಬಾ ಅವರು ಜಂತರ್ಮಂತರ್ನಲ್ಲಿ ಮಹಿಳಾ ಕಿಸಾನ್ ಸಂಸತ್ನಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದರು.
ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಲಾಂಬಾ, ದೆಹಲಿ ಪೊಲೀಸರು ಟ್ಯಾನ್-ಶಾ (ಅಮಿತ್ ಶಾ) ಸೂಚನೆಯಂತೆ ನನ್ನನ್ನು ಗೃಹ ಬಂಧನದಲ್ಲಿ ಇಟ್ಟಿದ್ದಾರೆ. ನಾನು ಜಂತರ್ ಮಂತರ್‌ನಲ್ಲಿ ನಡೆಯಲಿರುವ ಮಹಿಳಾ ಕಿಸಾನ್ ಸಂಸತ್ನಲ್ಲಿ ಪಾಲ್ಗೊಂಡು ರೈತರಿಗೆ ಬೆಂಬಲ ನೀಡದಂತೆ ಈ ರೀತಿ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.
-
तान-शाह के आदेश पर दिल्ली पुलिस ने मुझे मेरे ही घर में बन्दी बना रखा है , पुलिस का कहना है कि मैं जंतर मंतर महिला किसान संसद में हिस्सा लेने, किसानों की मांगों को अपना समर्थन देने नही जा सकती.क्या यह लोकतंत्र की हत्या नही है ??@RahulGandhi @INCIndia #FarmersProtest @OfficialBKU pic.twitter.com/zMq1gmxEHs
— Alka Lamba (@LambaAlka) July 26, 2021 " class="align-text-top noRightClick twitterSection" data="
">तान-शाह के आदेश पर दिल्ली पुलिस ने मुझे मेरे ही घर में बन्दी बना रखा है , पुलिस का कहना है कि मैं जंतर मंतर महिला किसान संसद में हिस्सा लेने, किसानों की मांगों को अपना समर्थन देने नही जा सकती.क्या यह लोकतंत्र की हत्या नही है ??@RahulGandhi @INCIndia #FarmersProtest @OfficialBKU pic.twitter.com/zMq1gmxEHs
— Alka Lamba (@LambaAlka) July 26, 2021तान-शाह के आदेश पर दिल्ली पुलिस ने मुझे मेरे ही घर में बन्दी बना रखा है , पुलिस का कहना है कि मैं जंतर मंतर महिला किसान संसद में हिस्सा लेने, किसानों की मांगों को अपना समर्थन देने नही जा सकती.क्या यह लोकतंत्र की हत्या नही है ??@RahulGandhi @INCIndia #FarmersProtest @OfficialBKU pic.twitter.com/zMq1gmxEHs
— Alka Lamba (@LambaAlka) July 26, 2021
ಕೇಂದ್ರದ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು ಕಳೆದ ಎಂಟು ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ವಿಶೇಷವೆಂದರೆ ಈ ಬಾರಿ ಸಂಸತ್ನಲ್ಲಿ ಮುಂಗಾರು ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ರೈತರಿಗೆ ದೆಹಲಿಯ ಜಂತರ್ಮಂತರ್ನಲ್ಲಿ ಪ್ರತಿಭಟಿಸಲು ಅವಕಾಶ ನೀಡಲಾಗಿದೆ. ಆಗಸ್ಟ್ 9ರವರೆಗೆ ರೈತರಿಗೆ ಜಂತರ್ಮಂತರ್ನಲ್ಲಿ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ.