ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ ಅವರ ಪುತ್ರ ಅನಿಲ್ ಆ್ಯಂಟನಿ ಬಿಜೆಪಿ ಸೇರಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ವಿ.ಮುರಳೀಧರನ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡರು.
ಗುಜರಾತ್ ಗಲಭೆ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರ ವಿಷಯವಾಗಿ ಕಾಂಗ್ರೆಸ್ನೊಂದಿಗೆ ಅನಿಲ್ ಆ್ಯಂಟನಿ ಭಿನ್ನಾಭಿಪ್ರಾಯ ಹೊಂದಿದ್ದರು. ಅಲ್ಲದೇ, ಪಕ್ಷದ ನಡೆಗೆ ಆಕ್ಷೇಪ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಕೇರಳ ಕಾಂಗ್ರೆಸ್ನ ಡಿಜಿಟಲ್ ಮೀಡಿಯಾ ಸಂಚಾಲಕ, ಎಐಸಿಸಿ ಸೋಶಿಯಲ್ ಮೀಡಿಯಾ ಮತ್ತು ಡಿಜಿಟಲ್ ಕಮ್ಯುನಿಕೇಷನ್ ಸೆಲ್ನ ರಾಷ್ಟ್ರೀಯ ಸಂಯೋಜಕರ ಹುದ್ದೆಗೆ ರಾಜೀನಾಮೆ ನೀಡಿದ್ದ ಅವರು ಎರಡು ತಿಂಗಳ ಹಿಂದೆ ಪಕ್ಷ ತೊರೆದಿದ್ದರು.
-
#WATCH | "Many of the Congress leaders believe that their duty is to work for a particular family but I believe that my duty is to work for the people. PM Modi has a clear vision to make India a developed country in the next 25 years…": says Anil Antony, soon after joining BJP pic.twitter.com/G3rTjP0oYG
— ANI (@ANI) April 6, 2023 " class="align-text-top noRightClick twitterSection" data="
">#WATCH | "Many of the Congress leaders believe that their duty is to work for a particular family but I believe that my duty is to work for the people. PM Modi has a clear vision to make India a developed country in the next 25 years…": says Anil Antony, soon after joining BJP pic.twitter.com/G3rTjP0oYG
— ANI (@ANI) April 6, 2023#WATCH | "Many of the Congress leaders believe that their duty is to work for a particular family but I believe that my duty is to work for the people. PM Modi has a clear vision to make India a developed country in the next 25 years…": says Anil Antony, soon after joining BJP pic.twitter.com/G3rTjP0oYG
— ANI (@ANI) April 6, 2023
ಈ ಬಗ್ಗೆ ಟ್ವೀಟ್ ಮಾಡಿದ್ದ ಅವರು, "ದೇಶದ ಸಾರ್ವಭೌಮತೆಯನ್ನು ಪ್ರಶ್ನಿಸುವ ಸಾಕ್ಷ್ಯಚಿತ್ರ ಬೆಂಬಲಿಸದೇ ಇದ್ದುದಕ್ಕಾಗಿ ಪಕ್ಷದಲ್ಲೇ ಟೀಕೆಗೆ ಗುರಿಯಾಗಿದ್ದೇನೆ. ನನಗೆ ಹಲವಾರು ನಿಂದನಾತ್ಮಕ ಕರೆಗಳು ಬಂದಿವೆ. ನಾನು ಎಲ್ಲಿಯೇ ಇದ್ದರೂ ಜೀವನ ಮುಂದುವರಿಯುತ್ತದೆ. ಕಾಂಗ್ರೆಸ್ನ ಎಲ್ಲ ಜವಾಬ್ದಾರಿಗಳಿಗೆ ನಾನು ರಾಜೀನಾಮೆ ನೀಡಿದ್ದೇನೆ" ಎಂದು ಹೇಳಿದ್ದರು. ಅಲ್ಲದೇ, ಕೆಲವು ದಿನಗಳ ಹಿಂದೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಗ್ಗೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ವಿ.ಬಿ.ಶ್ರೀನಿವಾಸ್ ಹೇಳಿಕೆಯನ್ನು ಅನಿಲ್ ಆ್ಯಂಟನಿ ಖಂಡಿಸಿದ್ದರು.
ಎಲ್ಲ ಬೆಳೆವಣಿಗೆಗಳ ನಂತರ ಇದೀಗ ಕೇಂದ್ರದ ಆಡಳಿತಾರೂಢ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಚಿವ ಪಿಯೂಷ್ ಗೋಯಲ್ ಪಕ್ಷದ ಬಾವುಟ ನೀಡಿ ಆ್ಯಂಟನಿ ಅವರನ್ನು ಬರಮಾಡಿಕೊಂಡರು. ಪಕ್ಷದ ಕೇರಳದ ನಾಯಕರಾದ ಕೇಂದ್ರ ಸಚಿವ ವಿ.ಮುರಳೀಧರನ್, ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.
-
#RamNavami greetings to all pic.twitter.com/1EAHT58scB
— Anil K Antony (@anilkantony) March 30, 2023 " class="align-text-top noRightClick twitterSection" data="
">#RamNavami greetings to all pic.twitter.com/1EAHT58scB
— Anil K Antony (@anilkantony) March 30, 2023#RamNavami greetings to all pic.twitter.com/1EAHT58scB
— Anil K Antony (@anilkantony) March 30, 2023
ಬಿಜೆಪಿ ಸೇರ್ಪಡೆ ನಂತರ ಮಾತನಾಡಿದ ಅನಿಲ್, "ಅನೇಕ ಕಾಂಗ್ರೆಸ್ ನಾಯಕರು ತಮ್ಮ ಕರ್ತವ್ಯ ನಿರ್ದಿಷ್ಟ ಕುಟುಂಬಕ್ಕಾಗಿ ಕೆಲಸ ಮಾಡುವುದೆಂದೇ ಭಾವಿಸಿದ್ದಾರೆ. ಆದರೆ ಜನರಿಗಾಗಿ ಕೆಲಸ ಮಾಡುವುದು ನನ್ನ ಕರ್ತವ್ಯ ಎಂದು ನಾನು ನಂಬುತ್ತೇನೆ. ಮುಂದಿನ 25 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಸ್ಪಷ್ಟ ದೃಷ್ಟಿಕೋನವನ್ನು ಪ್ರಧಾನಿ ಮೋದಿ ಹೊಂದಿದ್ದಾರೆ" ಎಂದು ಹೇಳಿದರು.
ಮಗನ ತಪ್ಪು ನಿರ್ಧಾರ ಎಂದ ಅಪ್ಪ: ಅನಿಲ್ ಆ್ಯಂಟನಿ ಬಿಜೆಪಿ ಸೇರಿದ ತಂದೆ ಎ.ಕೆ.ಆ್ಯಂಟನಿ ಪ್ರತಿಕ್ರಿಯಿಸಿದ್ದು, ''ಬಿಜೆಪಿ ಸೇರುವ ಅನಿಲ್ ನಿರ್ಧಾರದಿಂದ ನನಗೆ ನೋವಾಗಿದೆ. ಇದೊಂದು ತಪ್ಪು ತೀರ್ಮಾನ. ನನ್ನ ನಿಷ್ಠೆ ಯಾವಾಗಲೂ ನೆಹರು ಕುಟುಂಬದೊಂದಿಗೆ ಇರುತ್ತದೆ. ಜೊತೆಗೆ ನನ್ನ ಕೊನೆಯುಸಿರು ಇರುವವರೆಗೂ ಕಾಂಗ್ರೆಸ್ ಕಾರ್ಯಕರ್ತನಾಗಿ ಇರುತ್ತೇನೆ'' ಎಂದು ತಿಳಿಸಿದರು.
-
#WATCH | They (BJP) is destroying constitutional values of this country...... During and after independence, Nehru family treated everyone irrespective of their caste, language, region, as one: Congress leader & former Defence minister AK Antony pic.twitter.com/sNVsJBifoG
— ANI (@ANI) April 6, 2023 " class="align-text-top noRightClick twitterSection" data="
">#WATCH | They (BJP) is destroying constitutional values of this country...... During and after independence, Nehru family treated everyone irrespective of their caste, language, region, as one: Congress leader & former Defence minister AK Antony pic.twitter.com/sNVsJBifoG
— ANI (@ANI) April 6, 2023#WATCH | They (BJP) is destroying constitutional values of this country...... During and after independence, Nehru family treated everyone irrespective of their caste, language, region, as one: Congress leader & former Defence minister AK Antony pic.twitter.com/sNVsJBifoG
— ANI (@ANI) April 6, 2023
ಸಾಕ್ಷ್ಯಚಿತ್ರ ಪ್ರದರ್ಶನ ಆಕ್ಷೇಪಿಸಿದ್ದ ಆ್ಯಂಟನಿ: ವಿವಾದಿತ ಬಿಬಿಸಿ ಸಾಕ್ಷ್ಯಚಿತ್ರವನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ಇದರ ನಡುವೆಯೂ ಕೇರಳದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶಿಸಲು ಸಿದ್ಧತೆ ನಡೆಸಲಾಗಿತ್ತು. ಇದಕ್ಕೆ ಅನಿಲ್ ಆ್ಯಂಟನಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. "ಬಿಜೆಪಿಯೊಂದಿಗೆ ನಮಗೆ ದೊಡ್ಡ ಭಿನ್ನಾಭಿಪ್ರಾಯವಿದೆ. ಆದರೆ, ಭಾರತದ ಸಂಸ್ಥೆಗಳ ಮೇಲೆ ಬ್ರಿಟನ್ನ ಮಾಧ್ಯಮವೊಂದು ಅಭಿಪ್ರಾಯ ರೂಪಿಸುವುದನ್ನು ಒಪ್ಪಲಾಗದು. ಅದು ನಮ್ಮ ಸಾರ್ವಭೌಮತ್ವಕ್ಕೆ ಧಕ್ಕೆ ತಂದಂತೆ'' ಎಂದು ಹೇಳಿದ್ದರು.
ಮುಂದುವರೆದು, ''ಬಿಬಿಸಿ ಮಾಧ್ಯಮದ ಅಭಿಪ್ರಾಯ, ಸಾಕ್ಷ್ಯಚಿತ್ರದ ರೂವಾರಿ, ಬ್ರಿಟನ್ ವಿದೇಶಾಂಗ ಸಚಿವ ಜಾಕ್ ಸ್ಟ್ರಾ ಅವರ ನಿಲುವು ಬೆಂಬಲಿಸುವುದು ಅಪಾಯಕಾರಿ ಸಂಪ್ರದಾಯಕ್ಕೆ ನಾಂದಿ ಹಾಡಿದಂತೆ" ಎಂದು ಟ್ವೀಟ್ ಮಾಡಿದ್ದರು. ಅನಿಲ್ ಆ್ಯಂಟನಿ ನಡೆ ಪಕ್ಷದೊಳಗೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. "ಅನಿಲ್ ಆ್ಯಂಟನಿ ಪ್ರಧಾನಿ ಮೋದಿಯ ಚಮಚಾ" ಎಂದು ಕೆಲವರು ಕಟು ಟೀಕೆ ಮಾಡಿದ್ದರು.
ತಂದೆ ಕಾಂಗ್ರೆಸ್ ಪ್ರಭಾವಿ ನಾಯಕ: ಅನಿಲ್ ಆ್ಯಂಟನಿ ತಂದೆ ಎ.ಕೆ.ಆ್ಯಂಟನಿ ಕಾಂಗ್ರೆಸ್ನ ಪ್ರಭಾವಿ ಮತ್ತು ಕೇರಳದಲ್ಲಿ ವರ್ಚಸ್ವಿ ನಾಯಕರು. 1977ರಿಂದ ರಾಜಕಾರಣದಲ್ಲಿರುವ ಎ.ಕೆ.ಆ್ಯಂಟನಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯಸಭಾ ಸದಸ್ಯರಾಗಿಯೂ ರಾಷ್ಟ್ರ ರಾಜಕಾರಣದಲ್ಲಿ ಹೆಸರು ಹೊಂದಿದ್ದಾರೆ. ಕೇಂದ್ರದಲ್ಲಿ ಆಹಾರ ಮತ್ತು ಪೂರೈಕೆ ಹಾಗೂ ರಕ್ಷಣಾ ಖಾತೆಗಳನ್ನು ನಿರ್ವಹಿಸಿದ ಅನುಭವಿ ರಾಜಕಾರಣಿಯೂ ಹೌದು.
ಇದನ್ನೂ ಓದಿ: ಬಿಬಿಸಿ ಸಾಕ್ಷ್ಯಚಿತ್ರ ಟೀಕಿಸಿದ್ದ ಕೇಂದ್ರದ ಮಾಜಿ ಸಚಿವ ಎ.ಕೆ.ಆ್ಯಂಟನಿ ಪುತ್ರ ಕಾಂಗ್ರೆಸ್ಗೆ ರಾಜೀನಾಮೆ