ETV Bharat / bharat

ಅಸ್ಸೋಂ ಗೆಲುವಿಗೆ 'ಚಹಾ' ಮೊರೆ ಹೋದ ರಾಹುಲ್​-ಪ್ರಿಯಾಂಕಾ!

ಒಟ್ಟಾಗಿ ಮತ ಚಲಾಯಿಸುವ ಚಹಾ ತೋಟ ಕಾರ್ಮಿಕರ ಸಮುದಾಯದ ರಾಜಕೀಯ ಮಹತ್ವವನ್ನು ಅರಿತುಕೊಂಡ ಕಾಂಗ್ರೆಸ್ ಕೇಂದ್ರ ನಾಯಕತ್ವವು ಈ ಗುಂಪನ್ನು ಮರಳಿ ಗೆಲ್ಲುವ ಉದ್ದೇಶಿತ ಯೋಜನೆಯನ್ನು ಪ್ರಾರಂಭಿಸಿದೆ. ಯೋಜನೆಯ ಭಾಗವಾಗಿ, ಫೆಬ್ರವರಿ 14 ರಂದು ಶಿವಸಾಗರದಲ್ಲಿ ನಡೆದ ರ್ಯಾಲಿಯಲ್ಲಿ ಪಕ್ಷದ ಮತದಾನ ಅಭಿಯಾನವನ್ನು ಪ್ರಾರಂಭಿಸಿದ ಮಾಜಿ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ, ತಮ್ಮ ಪಕ್ಷಕ್ಕೆ ಮತ ಚಲಾಯಿಸಿದರೆ ಚಹಾ ತೋಟ ಕಾರ್ಮಿಕರಿಗೆ ದಿನಕ್ಕೆ 365 ರೂ. ಕೂಲಿ ನೀಡುವುದಾಗಿ ಘೋಷಿಸಿದೆ.

Congress
ರಾಹುಲ್​-ಪ್ರಿಯಾಂಕ
author img

By

Published : Mar 21, 2021, 1:03 PM IST

Updated : Mar 21, 2021, 1:31 PM IST

ಅಸ್ಸೋಂನ ಮುಂಬರುವ ಚುನಾವಣೆಯಲ್ಲಿ ಗೆಲುವು ಸಾಧಿಸುವುದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಚಹಾ ತೋಟ ಕಾರ್ಮಿಕರ ಸಮುದಾಯವನ್ನು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದ ಜನಸಂಖ್ಯೆ ಶೇ 17 ರಷ್ಟು ಚಹಾ ತೊಟದ ಕಾರ್ಮಿಕರಿದ್ದಾರೆ. ರಾಜ್ಯದಲ್ಲಿ ಒಟ್ಟು 126 ವಿಧಾನಸಭಾ ಸ್ಥಾನಗಳಿವೆ. ಅದರಲ್ಲಿ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಪ್ರಭಾವವನ್ನು ಹೊಂದಿದೆ.

2016ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸೋಂನ ಜನತೆೆ ಬಿಜೆಪಿಯನ್ನು ಬೆಂಬಲಿಸಿದ್ದರು. "ಬಿಜೆಪಿ ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಕಾರ್ಮಿಕರಿಗೆ ಸಾಕಷ್ಟು ಭರವಸೆ ನೀಡಲಾಯಿತು. ಆದರೆ ಏನೂ ಆಗಲಿಲ್ಲ. ಐದು ವರ್ಷಗಳ ನಂತರ ಸಮುದಾಯವು ಬಿಜೆಪಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.” ಎಂದು ಮಾಜಿ ಕೇಂದ್ರ ಸಚಿವ ಮತ್ತು ದಿಬ್ರುಗಡ್ ಸಂಸದ ಪಬನ್ ಸಿಂಗ್ ಘಟೋವರ್ ಹೇಳಿದ್ದಾರೆ.

ಚಹಾ ತೋಟ ಕಾರ್ಮಿಕರೊಂದಿಗೆ ದಶಕಗಳಿಂದ ಕೆಲಸ ಮಾಡಿದ ಘಟೋವರ್, ಸಮುದಾಯವು 1952ರಿಂದ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಿದೆ. ಆದರೆ ಅವರಲ್ಲಿ ಸುಮಾರು 60 ಪ್ರತಿಶತದಷ್ಟು ಜನರು 2016 ರಲ್ಲಿ ಬಿಜೆಪಿಗೆ ಬೆಂಬಲಿಸಿದರು. ಆದರೆ ಈಗ ಮತ್ತೆ ಕಾಂಗ್ರೆಸ್​ ಕಡೆ ಮುಖ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಚಹಾ ತೋಟ ಕಾರ್ಮಿಕರ ಮೇಲೆ ಹಿಡಿತವನ್ನು ಬಲಪಡಿಸಲು ಬಿಜೆಪಿ-ಎಜಿಪಿ ಸರ್ಕಾರವು ಉಚಿತ ಅಕ್ಕಿ ಮತ್ತು ಸಕ್ಕರೆ, ಅಡುಗೆ ಅನಿಲ ಮತ್ತು ಹಣಕಾಸಿನ ಪ್ರೋತ್ಸಾಹದಂತಹ ಕಲ್ಯಾಣ ಕ್ರಮಗಳನ್ನು ಪ್ರಾರಂಭಿಸಿತು. ಆದರೆ ಈ ಕಾರ್ಯಕ್ರಮವು ವಿಫಲವಾಯಿತು ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ಒಟ್ಟಾಗಿ ಮತ ಚಲಾಯಿಸುವ ಚಹಾ ತೋಟ ಕಾರ್ಮಿಕರ ಸಮುದಾಯದ ರಾಜಕೀಯ ಮಹತ್ವವನ್ನು ಅರಿತುಕೊಂಡ ಕಾಂಗ್ರೆಸ್ ಕೇಂದ್ರ ನಾಯಕತ್ವವು ಈ ಗುಂಪನ್ನು ಮರಳಿ ಗೆಲ್ಲುವ ಉದ್ದೇಶಿತ ಯೋಜನೆಯನ್ನು ಪ್ರಾರಂಭಿಸಿದೆ. ಯೋಜನೆಯ ಭಾಗವಾಗಿ, ಫೆಬ್ರವರಿ 14 ರಂದು ಶಿವಸಾಗರದಲ್ಲಿ ನಡೆದ ರ್ಯಾಲಿಯಲ್ಲಿ ಪಕ್ಷದ ಮತದಾನ ಅಭಿಯಾನವನ್ನು ಪ್ರಾರಂಭಿಸಿದ ರಾಹುಲ್ ಗಾಂಧಿ, ತಮ್ಮ ಪಕ್ಷಕ್ಕೆ ಮತ ಚಲಾಯಿಸಿದರೆ ಚಹಾ ತೋಟ ಕಾರ್ಮಿಕರಿಗೆ ದಿನಕ್ಕೆ 365 ರೂ. ಕೂಲಿ ನೀಡುವುದಾಗಿ ಘೋಷಿಸಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಚಹಾ ತೋಟ ಕಾರ್ಮಿಕರನ್ನು ಭೇಟಿ ಮಾಡಿದರು. ಅವರ ಕುಂದುಕೊರತೆಗಳನ್ನು ಕೇಳಿದರು.

ಇಲ್ಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪ್ರಿಯಾಂಕ, ಕಾರ್ಮಿಕರ ಜೊತೆ ಚಹಾ ತೋಟದಲ್ಲಿ ಎಲೆಗಳನ್ನು ಕಿತ್ತು ಅವರೊಂದಿಗೆ ಒಡನಾಟವನ್ನು ಬೆಳೆಸಿದ್ದರು. ಇನ್ನು ರಾಹುಲ್​ ಭೇಟಿ ನೀಡಿದ್ದಾಗ, ಸಮುದಾಯದ ಸದಸ್ಯರೊಂದಿಗೆ ಊಟ ಮಾಡಿದ್ದರು. ದಿನಕ್ಕೆ 365 ರೂ.ಗಳ ವೇತನದ ಕಾಂಗ್ರೆಸ್ ಭರವಸೆಯು ಚಹಾ ತೋಟ ಕಾರ್ಮಿಕರ ಹಳೆಯ ಬೇಡಿಕೆಯಾಗಿದ್ದು, ಅದನ್ನು ಎಂದಿಗೂ ಸಮರ್ಪಕವಾಗಿ ಪರಿಹರಿಸಲಾಗಿಲ್ಲ.

ಬಿಜೆಪಿ-ಎಜಿಪಿ ಸಂಯೋಜನೆಯು ದಿನದ ವೇತನವನ್ನು 2018 ರಲ್ಲಿ 137 ರಿಂದ 167 ರೂ.ಗಳಿಗೆ ಮತ್ತು ಕಳೆದ ತಿಂಗಳು ಮತ್ತೆ 217 ರೂ.ಗಳಿಗೆ ಪರಿಷ್ಕರಿಸಿತು. ಆದರೆ ಕಾರ್ಮಿಕರು ಇನ್ನೂ ತೃಪ್ತರಾಗಿಲ್ಲ. ಕಳೆದ ತಿಂಗಳು ರಾಜ್ಯಕ್ಕೆ ಭೇಟಿ ನೀಡಿದ ಪಿಎಂ ಮೋದಿ, ಭಾರತೀಯ ಚಹಾವನ್ನು ಕೆಳಕ್ಕೆ ತಳ್ಳಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಬಜೆಟ್‌ನಲ್ಲಿ ಚಹಾ ಕ್ಷೇತ್ರಕ್ಕೆ 1,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಸೌಲಭ್ಯಗಳ ಕೊರತೆಯನ್ನು ನೀಗಿಸಲು ಮೊಬೈಲ್ ಮೆಡಿಸಿನ್ ವ್ಯಾನ್‌ಗಳಲ್ಲದೆ, ಈಶಾನ್ಯ ರಾಜ್ಯದ ಚಹಾ ತೋಟ ಕಾರ್ಮಿಕರಿಗೆ 3,000 ರೂ. ನೀಡಲಾಗುವುದು ಎಂದು ಘೋಷಿಸಿದೆ.

Last Updated : Mar 21, 2021, 1:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.