ನವದೆಹಲಿ: ಮುಸ್ಲಿಂ ಲೀಗ್ ಜಾತ್ಯತೀತ ಸಂಘಟನೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಬಿಜೆಪಿ ವಾಗ್ದಾಳಿ ನಡೆಸಿದೆ. ಇದೇ ವೇಳೆ ಕಮಲ ಪಕ್ಷಕ್ಕೆ ಕಾಂಗ್ರೆಸ್ ತಿರುಗೇಟು ನೀಡಿದೆ. ರಾಹುಲ್ ಗಾಂಧಿ ವಾಸ್ತವವಾಗಿ ಕೇರಳದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ಗೆ ಉಲ್ಲೇಖಿಸಿದ್ದಾರೆ. ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ರಚಿಸಿದ ಮುಸ್ಲಿಂ ಲೀಗ್ ಬಗ್ಗೆ ಅಲ್ಲ. ಆದರೆ, ಇದೇ ಜಿನ್ನಾ ಮುಸ್ಲಿಂ ಲೀಗ್ ಅನ್ನು ಬಿಜೆಪಿ ಪ್ರೀತಿಸುತ್ತಿದೆ. ಏಕೆಂದರೆ, ಪಕ್ಷದ ನಾಯಕ ಶ್ಯಾಮ ಪ್ರಸಾದ್ ಮುಖರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಜಿನ್ನಾ ಮುಸ್ಲಿಂ ಲೀಗ್‌ನೊಂದಿಗೆ ಸಮ್ಮಿಶ್ರ ಸರ್ಕಾರವನ್ನು ರಚಿಸಿದ್ದರು ಎಂದು ಕೈಪಡೆ ಕುಟುಕಿದೆ.
ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ವಾಷಿಂಗ್ಟನ್ನ ನ್ಯಾಷನಲ್ ಪ್ರೆಸ್ ಕ್ಲಬ್ನಲ್ಲಿ ಮಾಧ್ಯಮ ಸಂವಾದದಲ್ಲಿ ಕೇರಳದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಮುಸ್ಲಿಂ ಲೀಗ್ ಜಾತ್ಯತೀತ ಪಕ್ಷ ಎಂದು ಹೇಳಿದ್ದರು. ಐಯುಎಂಎಲ್ ದೀರ್ಘಕಾಲದಿಂದ ಕಾಂಗ್ರೆಸ್ ಮಿತ್ರ ಪಕ್ಷವಾಗಿತ್ತು. ಕೇಂದ್ರದಲ್ಲಿ ಹಿಂದಿನ ಯುಪಿಎ ಸರ್ಕಾರದ ಭಾಗವೂ ಆಗಿತ್ತು.
-
ಕೋಮುವಾದಿ ಮುಸ್ಲಿಮ್ ಲೀಗ್ ಪಕ್ಷಗಳಿಗೆ ಜಾತ್ಯಾತೀತರು ಎಂದು ಬಣ್ಣಿಸುವುದನ್ನು ನಕಲಿ ಗಾಂಧಿ ನಿಲ್ಲಿಸಬೇಕು. ದೇಶದ ವಿಭಜನೆಗೆ ಹಾಗೂ ಲಕ್ಷಾಂತರ ಜನರ ಸಾವಿಗೆ ಕಾರಣವಾದ ಪಕ್ಷ ಜಾತ್ಯಾತೀತ ಎನ್ನುತ್ತಾರೆ ರಾಹುಲ್.
— Pralhad Joshi (@JoshiPralhad) June 2, 2023 " class="align-text-top noRightClick twitterSection" data="
">ಕೋಮುವಾದಿ ಮುಸ್ಲಿಮ್ ಲೀಗ್ ಪಕ್ಷಗಳಿಗೆ ಜಾತ್ಯಾತೀತರು ಎಂದು ಬಣ್ಣಿಸುವುದನ್ನು ನಕಲಿ ಗಾಂಧಿ ನಿಲ್ಲಿಸಬೇಕು. ದೇಶದ ವಿಭಜನೆಗೆ ಹಾಗೂ ಲಕ್ಷಾಂತರ ಜನರ ಸಾವಿಗೆ ಕಾರಣವಾದ ಪಕ್ಷ ಜಾತ್ಯಾತೀತ ಎನ್ನುತ್ತಾರೆ ರಾಹುಲ್.
— Pralhad Joshi (@JoshiPralhad) June 2, 2023ಕೋಮುವಾದಿ ಮುಸ್ಲಿಮ್ ಲೀಗ್ ಪಕ್ಷಗಳಿಗೆ ಜಾತ್ಯಾತೀತರು ಎಂದು ಬಣ್ಣಿಸುವುದನ್ನು ನಕಲಿ ಗಾಂಧಿ ನಿಲ್ಲಿಸಬೇಕು. ದೇಶದ ವಿಭಜನೆಗೆ ಹಾಗೂ ಲಕ್ಷಾಂತರ ಜನರ ಸಾವಿಗೆ ಕಾರಣವಾದ ಪಕ್ಷ ಜಾತ್ಯಾತೀತ ಎನ್ನುತ್ತಾರೆ ರಾಹುಲ್.
— Pralhad Joshi (@JoshiPralhad) June 2, 2023
ಅಡ್ವಾಣಿ ಬಳಿ ಪ್ರಶ್ನಿಸಿ - ಕಾಂಗ್ರೆಸ್: ಆದರೆ, ಮುಸ್ಲಿಂ ಲೀಗ್ ಎಂಬ ಪದವನ್ನು ಹಿಡಿದುಕೊಂಡು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಬಿಜೆಪಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿತ್ತು. ರಾಹುಲ್ ಹೆಚ್ಚು ಓದಿಲ್ಲ. ಇತಿಹಾಸದ ಬಗ್ಗೆ ಸ್ವಲ್ಪವೂ ಜ್ಞಾನವಿಲ್ಲ ಎಂದು ಆರೋಪಿಸಿತ್ತು. ಈ ಬಗ್ಗೆ ಕಾಂಗ್ರೆಸ್ ವಕ್ತಾರ ಪ್ರೊ.ಗೌರವ್ ವಲ್ಲಭ್ ಪ್ರತಿಕ್ರಿಯಿಸಿ, ಬಿಜೆಪಿಯು ಮುಸ್ಲಿಂ ಲೀಗ್‌ನೊಂದಿಗೆ ಹಳೆಯ ಸಂಬಂಧವನ್ನು ಹೊಂದಿದೆ ಮತ್ತು ಅದನ್ನು ಮರೆಯಲು ಸಾಧ್ಯವಿಲ್ಲ. ಬಿಜೆಪಿ ಸಂಸ್ಥಾಪಕ ಎಲ್ಕೆ ಅಡ್ವಾಣಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದಾಗ ಜಿನ್ನಾ ಸ್ಮಾರಕಕ್ಕೆ ತೆರಳಿ ಅವರನ್ನು ಅತಿ ದೊಡ್ಡ ಜಾತ್ಯತೀತ ನಾಯಕ ಎಂದು ಬಣ್ಣಿಸಿದ್ದರು. ಮಾಜಿ ಪ್ರಧಾನಿಗಳು ಸೇರಿದಂತೆ ಹಲವಾರು ಭಾರತೀಯ ನಾಯಕರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಆದರೆ, ಯಾರೂ ಕೂಡ ಜಿನ್ನಾ ಸ್ಮಾರಕಕ್ಕೆ ಭೇಟಿ ನೀಡಲಿಲ್ಲ ಮತ್ತು ಅವರನ್ನು ಅತಿದೊಡ್ಡ ಜಾತ್ಯತೀತ ನಾಯಕ ಎಂದೂ ಶ್ಲಾಘಿಸಲಿಲ್ಲ. ಬಿಜೆಪಿಯವರು ಹೋಗಿ ಅಡ್ವಾಣಿಯವರ ಬಳಿ ಈ ಬಗ್ಗೆ ಪ್ರಶ್ನಿಸಬೇಕೆಂದು ತಿರುಗೇಟು ನೀಡಿದ್ದಾರೆ.
ಅಲ್ಲದೇ, ಐಯುಎಂಎಲ್ ಭಾರತದಲ್ಲಿ ನೋಂದಾಯಿತ ರಾಜಕೀಯ ಪಕ್ಷವಾಗಿದೆ. ಚುನಾವಣಾ ಆಯೋಗವು ಜಾತ್ಯತೀತವಲ್ಲದ ಪಕ್ಷಗಳನ್ನು ನೋಂದಾಯಿಸುವುದಿಲ್ಲ. ಇದು ಕೋಮುವಾದಿಯಾಗಿದ್ದರೆ, ಚುನಾವಣಾ ಆಯೋಗವು ಪಕ್ಷದ ನೋಂದಣಿಗೆ ಅವಕಾಶ ನೀಡುತ್ತಿರಲಿಲ್ಲ ಎಂದು ಪ್ರೊ.ವಲ್ಲಭ್ ಹೇಳಿದ್ದಾರೆ.
ಇದೇ ವೇಳೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರೊ.ವಲ್ಲಭ್, ರಾಹುಲ್ ಎಂದಿಗೂ ವಿದೇಶದಲ್ಲಿ ಭಾರತವನ್ನು ಅವಮಾನಿಸಿಲ್ಲ, ಆದರೆ, ಪ್ರಧಾನಿ ಮೋದಿ ಈ ಹಿಂದೆ ಹಲವಾರು ಬಾರಿ ದೇಶಕ್ಕೆ ಅವಮಾನ ಮಾಡಿದ್ದಾರೆ. ವಿದೇಶಿ ನೆಲದಲ್ಲಿ ದೇಶವನ್ನು ಏಕೆ ಅವಮಾನಿಸಿದರು ಎಂದು ಮೋಹನ್ ಭಾಗವತ್ ಅವರು ಪ್ರಧಾನಿ ಮೋದಿಯವರನ್ನು ಕೇಳಬೇಕೆಂದು ಹೇಳಿದ್ದಾರೆ.
ದಕ್ಷಿಣ ಕೊರಿಯಾದಲ್ಲಿ ಮೋದಿ ಜನರು ಭಾರತೀಯರಾಗಿ ಹುಟ್ಟಲು ನಾಚಿಕೆಪಡುತ್ತಾರೆ. 2016ರಲ್ಲಿ ಜಪಾನ್‌ಗೆ ಹೋಗಿ ವಿನಾಶಕಾರಿ ನೋಟು ಅಮಾನ್ಯೀಕರಣದಿಂದ ಸಂಕಟ ಅನುಭವಿಸಿದ ಮಧ್ಯಮ ವರ್ಗದವರನ್ನು ಮೋದಿ ಗೇಲಿ ಮಾಡಿದ್ದರು. ಅಮೆರಿಕಕ್ಕೆ ಹೋಗಿ 2014ಕ್ಕಿಂತ ಮೊದಲು ಭಾರತವನ್ನು ಹಾವಾಡಿಗರ ರಾಷ್ಟ್ರ ಎಂದು ಪರಿಗಣಿಸಲಾಗಿತ್ತು ಎಂದು ಹೇಳಿದ್ದಾರೆ. ಭಾಗವತ್ ಜಿ ಅಂತಹ ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ಏಕೆ ಪ್ರತಿಷ್ಠಾಪಿಸಿದ್ದೀರಿ ಎಂದು ಪ್ರೊ.ವಲ್ಲಭ್ ಪ್ರಶ್ನಿಸಿದರು.
ರಾಹುಲ್ ಎಂದಿಗೂ ದೇಶದ ಜನರನ್ನು ಗೇಲಿ ಮಾಡಿಲ್ಲ: ರಾಹುಲ್ ಗಾಂಧಿ ಯಾವತ್ತೂ ದೇಶ ವಿದೇಶಗಳಲ್ಲಿ ಅವಮಾನ ಮಾಡಿಲ್ಲ. ಅವರು ನಿರುದ್ಯೋಗ ಮತ್ತು ಬೆಲೆ ಏರಿಕೆಯಂತಹ ಸಾಮಾಜಿಕ ಸಮಸ್ಯೆಗಳು ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ಹದಗೆಡಿಸಲಾಗುತ್ತಿದೆ ಎಂದು ಪ್ರಸ್ತಾಪಿಸುತ್ತಿದ್ದಾರೆ. ರಾಹುಲ್ ಎಂದಿಗೂ ದೇಶದ ಜನರನ್ನು ಗೇಲಿ ಮಾಡಿಲ್ಲ ಎಂದು ಕಾಂಗ್ರೆಸ್ ವಕ್ತಾರ ಸ್ಪಷ್ಟನೆ ನೀಡಿದ್ದರು.
"ಪಿಎಂ ಮೋದಿ ಬಾಸ್" ಎಂಬ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಹೇಳಿಕೆಯಿಂದ ಬಿಜೆಪಿ ಹರ್ಷಗೊಂಡಿದೆ. ಆದರೆ, ಎರಡು ಆಸ್ಟ್ರೇಲಿಯಾದ ವಿಶ್ವವಿದ್ಯಾನಿಲಯಗಳು ಐದು ವಿಭಿನ್ನ ರಾಜ್ಯಗಳಿಗೆ ಸೇರಿದ ಭಾರತೀಯ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ನಿರಾಕರಿಸಿರುವುದನ್ನು ಕೇಸರಿ ಪಕ್ಷವು ಮರೆತಿದೆ. ಮೋದಿ ತಮ್ಮ ಸ್ವಂತಿಕೆಯಿಂದ ಹೋಗುವುದಿಲ್ಲ. ಅವರು ಭಾರತದ ಜನರನ್ನು ಪ್ರತಿನಿಧಿಸುತ್ತಾರೆ. ಪ್ರಧಾನಿ ಮೋದಿಯವರ ವಿದೇಶಿ ಭೇಟಿಗಳ ವೆಚ್ಚವನ್ನು ಭಾರತೀಯ ತೆರಿಗೆದಾರರು ಭರಿಸುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಹೆಚ್ಚು ಶಿಕ್ಷೆ ಪಡೆದ ಭಾರತದ ಮೊದಲ ವ್ಯಕ್ತಿ ನಾನು: ರಾಹುಲ್ ಗಾಂಧಿ