ETV Bharat / bharat

ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯಲ್ಲಿ ಮಹಿಳಾ ಶಕ್ತಿ: 39 ಸದಸ್ಯರ ಪೈಕಿ 15 ಮಂದಿಗೆ ಸ್ಥಾನ - ಸಿಡ್ಬ್ಲ್ಯೂಸಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನ

ಪುನರ್​ರಚಿಸಲಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ 15 ಮಹಿಳೆಯರಿಗೆ ಸ್ಥಾನ ನೀಡಲಾಗಿದೆ. ರಾಜ್ಯದ ಮಲ್ಲಿಕಾರ್ಜುನ್ ಖರ್ಗೆ, ವೀರಪ್ಪ ಮೊಯ್ಲಿ ಹಾಗು ಬಿ.ಕೆ.ಹರಿಪ್ರಸಾದ್​ ತಂಡದಲ್ಲಿದ್ದಾರೆ.

ಕಾಂಗ್ರೆಸ್​ ಕಾರ್ಯಕಾರಿ ಸಮಿತಿ
ಕಾಂಗ್ರೆಸ್​ ಕಾರ್ಯಕಾರಿ ಸಮಿತಿ
author img

By ETV Bharat Karnataka Team

Published : Aug 22, 2023, 5:01 PM IST

Updated : Aug 22, 2023, 5:06 PM IST

ನವದೆಹಲಿ : ಈ ವರ್ಷಾಂತ್ಯದ ಪಂಚರಾಜ್ಯಗಳ ವಿಧಾನಸಭೆ ಮತ್ತು ಮುಂದಿನ ವರ್ಷದಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಕಾಂಗ್ರೆಸ್ ಪಕ್ಷ​, ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರ ನೇತೃತ್ವದಲ್ಲಿ 84 ಜನರ ಕಾಂಗ್ರೆಸ್​ ಕಾರ್ಯಕಾರಿ ಸಮಿತಿಯನ್ನು ಹೊಸದಾಗಿ ರಚಿಸಿದೆ. ಅದರಲ್ಲಿ ಪಕ್ಷದ ವಿರುದ್ಧ ಬಹಿರಂಗವಾಗಿ ಬಂಡಾಯವೇಳುತ್ತಿದ್ದ ನಾಯಕರೂ ಸೇರಿದಂತೆ 15 ಮಹಿಳೆಯರಿಗೆ ಅವಕಾಶ ನೀಡಲಾಗಿದೆ.

ಪಕ್ಷದ ಅತ್ಯುನ್ನತ ನೀತಿ ನಿರ್ಧಾರಗಳನ್ನು ಕೈಗೊಳ್ಳುವ ಸಂಸ್ಥೆಯಾದ ಸಿಡಬ್ಲ್ಯೂಸಿಗೆ ಇಷ್ಟು ಪ್ರಮಾಣದಲ್ಲಿ ಮಹಿಳೆಯರಿಗೆ ಅವಕಾಶ ನೀಡಿದ್ದು, ಒಟ್ಟು ಸದಸ್ಯರಲ್ಲಿ ಶೇ.66.6 ರಷ್ಟು ಮಹಿಳೆಯರೇ ಇದ್ದಾರೆ. ಇದು ಮಹಿಳಾ ಸಬಲೀಕರಣ ದ್ಯೋತಕ ಎಂದು ಪಕ್ಷ ಹೇಳಿಕೊಂಡಿದೆ.

ಕಾರ್ಯಕಾರಿ ಸಮಿತಿಯಲ್ಲಿರುವ ಮಹಿಳೆಯರು ಯಾರು?: ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಕೇಂದ್ರದ ಮಾಜಿ ಸಚಿವೆ ಅಂಬಿಕಾ ಸೋನಿ, ಕುಮಾರಿ ಸೆಲ್ಜಾ, ಮಾಜಿ ಸ್ಪೀಕರ್​ ಮೀರಾ ಕುಮಾರ್, ರಜನಿ ಪಾಟೀಲ್, ದೀಪಾ ದಾಸ್ ಮುನ್ಷಿ, ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ಸಿಂಗ್, ಮೀನಾಕ್ಷಿ ನಟರಾಜನ್, ಫುಲೋ ದೇವಿ ನೇತಮ್, ಯಶೋಮತಿ ಠಾಕೂರ್, ಪ್ರಣಿತಿ ಶಿಂಧೆ, ಸುಪ್ರಿಯಾ ಶ್ರೀನತೆ, ಅಲ್ಕಾ ಲಾಂಬಾ ಮತ್ತು ನೆಟ್ಟಾ ಡಿಸೋಜಾ.

ಪಕ್ಷದೊಳಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಸೋನಿಯಾ ಗಾಂಧಿ ಬದ್ಧತೆ ತೋರಿದ್ದಾರೆ. ಟಿಕೆಟ್ ಹಂಚಿಕೆಯಲ್ಲೂ ಇದು ಪ್ರತಿಫಲಿಸಲಿದೆ. ಸಿಡಬ್ಲ್ಯುಸಿಯಲ್ಲಿ 15 ಮಹಿಳಾ ಸದಸ್ಯರಿಗೆ ಅವಕಾಶ ನೀಡಿದ್ದು, ದಿಟ್ಟ ಹೆಜ್ಜೆಯಾಗಿದೆ ಎಂದು ಚುನಾವಣೆ ಅಂಚಿನಲ್ಲಿರುವ ಛತ್ತೀಸ್‌ಗಢದ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕುಮಾರಿ ಸೆಲ್ಜಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಎಐಸಿಸಿ ಉಸ್ತುವಾರಿ ರಜನಿ ಪಾಟೀಲ್ ಹೇಳಿದಂತೆ, ಕಾಂಗ್ರೆಸ್ ಯಾವಾಗಲೂ ಮಹಿಳಾ ಸಬಲೀಕರಣಕ್ಕೆ ಬದ್ಧವಾಗಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ 33 ಪ್ರತಿಶತ ಮೀಸಲಾತಿ ನೀಡಬೇಕೆಂಬುದನ್ನೂ ಬೆಂಬಲಿಸುತ್ತದೆ. ಆದರೆ, ಆಡಳಿತಾರೂಢ ಬಿಜೆಪಿ ಶಾಸನವನ್ನು ಅಂಗೀಕರಿಸದೇ ನಿರ್ಲಕ್ಷ್ಯ ತೋರಿದೆ ಎಂದು ತಿಳಿಸಿದರು.

ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆ: ಕಳೆದ ವರ್ಷ ಪ್ರಿಯಾಂಕಾ ಗಾಂಧಿಯವರ ನೇತೃತ್ವದಲ್ಲಿ ಉತ್ತರಪ್ರದೇಶ, ಹಿಮಾಚಲ ಪ್ರದೇಶ, ಗುಜರಾತ್ ಮತ್ತು ಕರ್ನಾಟಕದಂತಹ ರಾಜ್ಯಗಳಲ್ಲಿ ಮಹಿಳಾ ಮತದಾರರಿಗಾಗಿ ಪ್ರತ್ಯೇಕ ಪ್ರಣಾಳಿಕೆಗಳನ್ನು ಕಾಂಗ್ರೆಸ್ ಹೊರತಂದಿತ್ತು. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ತೆಲಂಗಾಣದಲ್ಲಿ ಇದೇ ರೀತಿಯ ತಂತ್ರವನ್ನು ಅನುಸರಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಪುನರ್​ರಚಿಸಲಾದ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಒಟ್ಟಾರೆ, 84 ಸದಸ್ಯರನ್ನು ಒಳಗೊಂಡಿದೆ. ಈಚೆಗೆ ಸೇರಿರುವ 39 ಸದಸ್ಯರು ಸೇರಿ, 18 ಕಾಯಂ ಆಹ್ವಾನಿತರು, 9 ವಿಶೇಷ ಆಹ್ವಾನಿತರು, 12 ಎಸ್​ಸಿ, ಎಸ್​ಟಿ 4, ಒಬಿಸಿ 16, ಅಲ್ಪಸಂಖ್ಯಾತರು 9, ಮಹಿಳೆಯರು 15, ಮತ್ತು ಸಾಮಾನ್ಯ ವರ್ಗದ 43 ಸದಸ್ಯರು ಇದ್ದಾರೆ. ಹಿಂದಿನ ಸಿಡಬ್ಲ್ಯೂಸಿಯಲ್ಲಿ 24 ಜನರು ಇದ್ದರು. ಇದನ್ನೀಗ 39 ಕ್ಕೆ ಹೆಚ್ಚಿಸಲಾಗಿದೆ.

ಇದನ್ನೂ ಓದಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಸರ್ಜರಿ: ಮೊಯ್ಲಿ, ಬಿಕೆ ಹರಿಪ್ರಸಾದ್​ಗೆ ಖಾಯಂ ಆಹ್ವಾನಿತ ಸದಸ್ಯ ಸ್ಥಾನ

Last Updated : Aug 22, 2023, 5:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.