ETV Bharat / bharat

ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿಗೆ 2ನೇ ಬಾರಿ ಕೊರೊನಾ ದೃಢ.. ದೇಶದಲ್ಲಿ 16 ಸಾವಿರ ಹೊಸ ಕೇಸ್​

ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಮತ್ತೆ ಕೊರೊನಾ ಕಾಣಿಸಿಕೊಂಡಿದೆ. ಇದರಿಂದ ಅವರು ಐಸೋಲೇಟ್​ ಆಗಿದ್ದಾರೆ. ರಾಹುಲ್​ ಗಾಂಧಿಗೂ ಅನಾರೋಗ್ಯ ಕಾಡಿದ್ದು, ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.

priyanka-gandhi
ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ
author img

By

Published : Aug 10, 2022, 9:50 AM IST

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಎರಡನೇ ಬಾರಿಗೆ ಕೊರೊನಾ ದೃಢಪಟ್ಟಿದೆ. ಈ ಬಗ್ಗೆ ಅವರು ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ.

ಜ್ವರದಿಂದ ಬಳಲುತ್ತಿದ್ದ ಪ್ರಿಯಾಂಕಾ ಗಾಂಧಿ ಅವರಿಗೆ ಇಂದು ಪರೀಕ್ಷೆ ನಡೆಸಿದಾಗ ಕೊರೊನಾ ಇರುವುದು ದೃಢಪಟ್ಟಿದೆ. "ನನಗೆ ಮತ್ತೆ ಕೊರೊನಾ ಪಾಸಿಟಿವ್​ ಬಂದಿದೆ. ಹೀಗಾಗಿ ಮನೆಯಲ್ಲಿ ಐಸೋಲೇಟ್​ ಆಗುತ್ತಿದ್ದೇನೆ. ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುತ್ತಿದ್ದೇನೆ " ಎಂದು ಟ್ವೀಟ್​ ಮಾಡಿದ್ದಾರೆ.

  • Tested positive for covid (again!) today. Will be isolating at home and following all protocols.

    — Priyanka Gandhi Vadra (@priyankagandhi) August 10, 2022 " class="align-text-top noRightClick twitterSection" data=" ">

ದೇಶದ ಕೊರೊನಾ ವರದಿ: ದೇಶದಲ್ಲಿ 24 ಗಂಟೆಗಳ ಅವಧಿಯಲ್ಲಿ 16,047 ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಂದೇ ದಿನದಲ್ಲಿ 19,539 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಹೊಸ ಕೊರೊನಾ ಪ್ರಕರಣಗಳ ಸಂಖ್ಯೆಗಿಂತಲೂ ಚೇತರಿಕೆ ಕಾಣುತ್ತಿರುವವರ ಸಂಖ್ಯೆ ಅಧಿಕವಾಗಿದೆ. ದೇಶದಲ್ಲಿ ಒಟ್ಟಾರೆ 4,35,35,610 ಜನರು (ಶೇ.95.52) ಚೇತರಿಸಿಕೊಂಡಿದ್ದಾರೆ. 5,26,826 ಜನರು ಈವರೆಗೂ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲೀಗ 1,28,261 ಲಕ್ಷ (ಶೇ.0.29) ಸಕ್ರಿಯ ಪ್ರಕರಣಗಳಿವೆ. 24 ಗಂಟೆ ಅವಧಿಯಲ್ಲಿ 15,21,429 ಜನರಿಗೆ ಕೊರೊನಾ ಲಸಿಕೆ ಹಾಕಿದ್ದು, ಒಟ್ಟಾರೆ 207 ಕೋಟಿ ಜನರಿಗೆ ಚುಚ್ಚುಮದ್ದು ಹಾಕಲಾಗಿದೆ.

ಓದಿ: ಸ್ವಾತಂತ್ರ್ಯೋತ್ಸವದಂದು ಉಗ್ರ ದಾಳಿ ರೂಪಿಸಿದ್ದವನ ಬಂಧನ.. ಸಂಚುಕೋರನಿಗೆ ಐಸಿಸ್​ ನಂಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.