ETV Bharat / bharat

'ಸಂಸತ್​ ಉದ್ಘಾಟನೆ ರಾಜ್ಯಾಭಿಷೇಕವಲ್ಲ': ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್​ ಟೀಕೆ - inaugurates new Parliament building

ನೂತನ ಸಂಸತ್​ ಭವನ ಉದ್ಘಾಟನಾ ಕಾರ್ಯಕ್ರಮದಿಂದ ಕಾಂಗ್ರೆಸ್​ ಸೇರಿದಂತೆ 21 ವಿಪಕ್ಷಗಳು ದೂರ ಉಳಿದಿವೆ.

ಪ್ರಧಾನಿ ವಿರುದ್ಧ ಕಾಂಗ್ರೆಸ್​ ಟ್ವೀಟಾಸ್ತ್ರ
ಪ್ರಧಾನಿ ವಿರುದ್ಧ ಕಾಂಗ್ರೆಸ್​ ಟ್ವೀಟಾಸ್ತ್ರ
author img

By

Published : May 28, 2023, 1:12 PM IST

Updated : May 28, 2023, 1:33 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹೊಸ ಸಂಸತ್ತನ್ನು ಉದ್ಘಾಟಿಸಬಾರದು ಎಂದು ವಿರೋಧಿಸಿದ್ದ ಕಾಂಗ್ರೆಸ್​ ಸೇರಿದಂತೆ ಕೆಲವು ವಿಪಕ್ಷಗಳು ಕಾರ್ಯಕ್ರಮದಿಂದ ದೂರ ಉಳಿದಿವೆ. ವಿರೋಧದ ನಡುವೆಯೂ ಉದ್ಘಾಟನೆ ಮಾಡಿದ ಪ್ರಧಾನಿಯನ್ನು ಕೈ ಪಕ್ಷ ಟೀಕಿಸಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ರಾಹುಲ್​ ಗಾಂಧಿ, 'ಸಂಸತ್ತು ಜನರ ಧ್ವನಿ. ಅದರ ಉದ್ಘಾಟನೆಯನ್ನು ಪ್ರಧಾನಿಗಳು ರಾಜ್ಯಾಭಿಷೇಕ ಎಂದು ಭಾವಿಸಿದ್ದಾರೆ' ಎಂದು ಟೀಕಿಸಿದ್ದಾರೆ.

  • संसद लोगों की आवाज़ है!

    प्रधानमंत्री संसद भवन के उद्घाटन को राज्याभिषेक समझ रहे हैं।

    — Rahul Gandhi (@RahulGandhi) May 28, 2023 " class="align-text-top noRightClick twitterSection" data=" ">

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರೂ ಟ್ವೀಟ್​ ಮಾಡಿ, ‘ಸಂಸದೀಯ ಕಾರ್ಯವೈಖರಿ ಬಗ್ಗೆ ಸಂಪೂರ್ಣ ತಿರಸ್ಕಾರ ಹೊಂದಿರುವ, ಸ್ವಯಂ ವೈಭವೀಕರಣದ ಸರ್ವಾಧಿಕಾರಿ ಪ್ರಧಾನಿ ನೂತನ ಸಂಸತ್ತನ್ನು ಲೋಕಾರ್ಪಣೆ ಮಾಡಿದ್ದಾರೆ' ಎಂದಿದ್ದಾರೆ.

ಅಲ್ಲದೇ, ಮೇ 28 ನೇ ತಾರೀಖಿನಂದು ನಡೆದ ಈ ಹಿಂದಿನ ಘಟನೆಗಳನ್ನು ನಮೂದಿಸಿರುವ ರಮೇಶ್​, ಭಾರತದ ಸಂಸದೀಯ ಪ್ರಜಾಪ್ರಭುತ್ವವನ್ನು ಉನ್ನತ ಮಟ್ಟಕ್ಕೆ ಏರಿಸಲು ಶ್ರಮಿಸಿದ ವ್ಯಕ್ತಿ ಮಾಜಿ ಪ್ರಧಾನಿ ಜವಾಹರ್​ಲಾಲ್​ ನೆಹರೂ 1964 ರಲ್ಲಿ ನಿಧನರಾದರು. ಅವರನ್ನು ಇದೇ ದಿನದಂದು ಅಂತಿಮ ಸಂಸ್ಕಾರ ಮಾಡಲಾಯಿತು. ಅಲ್ಲದೇ, ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದ, ಹಿಂದು ವಿಚಾರವಾದಿ ವಿ.ಡಿ.ಸಾವರ್ಕರ್​ ಅವರ ಜನ್ಮದಿನವೂ (1883 ರಲ್ಲಿ) ಇಂದೇ ಆಗಿದೆ ಎಂದು ಬರೆದುಕೊಂಡಿದ್ದಾರೆ.

  • 28 मई को आज के दिन:

    1. नेहरू, जिन्होंने भारत में संसदीय लोकतंत्र को मज़बूत करने के लिए सबसे अधिक काम किया, उनका 1964 में अंतिम संस्कार किया गया था।

    2. सावरकर, जिसकी विचारधारा ने ऐसा माहौल बनाया जो महात्मा गांधी की हत्या का कारण बना, उसका जन्म 1883 में हुआ था।

    3. राष्ट्रपति,…

    — Jairam Ramesh (@Jairam_Ramesh) May 28, 2023 " class="align-text-top noRightClick twitterSection" data=" ">

'ರಾಷ್ಟ್ರಪತಿಗೆ ಅವಮಾನ': ಇದಲ್ಲದೇ, ದೇಶದ ಮೊದಲ ಆದಿವಾಸಿ ರಾಷ್ಟ್ರಪತಿಯಾದ ದ್ರೌಪದಿ ಮುರ್ಮು ಅವರನ್ನು ಇಂತಹ ದೊಡ್ಡ ಕಾರ್ಯಕ್ರಮಕ್ಕೆ ಆಹ್ವಾನ ನೀಡದೇ ಅವಮಾನಿಸಲಾಗಿದೆ. ರಾಷ್ಟ್ರಪತಿಗಳ ಸಾಂವಿಧಾನಿಕ ಕರ್ತವ್ಯಗಳನ್ನು ಪೂರೈಸಲು ಮತ್ತು ಹೊಸ ಸಂಸತ್ ಭವನವನ್ನು ಉದ್ಘಾಟಿಸಲು ಅನುಮತಿಸುವುದಿಲ್ಲ ಎಂದರೆ ಏನರ್ಥ ಎಂದು ರಮೇಶ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಹೊಸ ಸಂಸತ್​ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ, ಸ್ಪೀಕರ್​ ಪೀಠದ ಬಳಿ ಸೆಂಗೋಲ್​ ಪ್ರತಿಷ್ಠಾಪನೆ

'ಸರ್ವಾಧಿಕಾರಿ ಮೋದಿ': ಪ್ರಜಾಪ್ರಭುತ್ವ ಸಂಸತ್ತಿನ ಕಾರ್ಯವಿಧಾನಗಳ ಬಗ್ಗೆ ಸಂಪೂರ್ಣ ತಿರಸ್ಕಾರ ಹೊಂದಿರುವ, ಸ್ವಯಂ ವೈಭವೀಕರಿಸುವ ಸರ್ವಾಧಿಕಾರಿ ಪ್ರಧಾನ ಮಂತ್ರಿ ಮೋದಿ. ವಿರಳವಾಗಿ ಸಂಸತ್ತಿಗೆ ಹಾಜರಾಗುವ ಅಥವಾ ದೇಶದ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಸಿಕೊಳ್ಳದ ವ್ಯಕ್ತಿಯಿಂದ ಹೊಸ ಸಂಸತ್ತಿನ ಕಟ್ಟಡ ಉದ್ಘಾಟನೆಯಾಗಿದೆ. ಅಸತ್ಯಗಳನ್ನು ಸೃಷ್ಟಿಸುವುದು ಹಾಗು ಇದಕ್ಕೆ ಮಾಧ್ಯಮಗಳು ಬೆಂಬಲ ನೀಡುತ್ತಿರುವುದು, ಈ ವರ್ಷದ ಅತಿ ಕೆಳಮಟ್ಟದ ವಿದ್ಯಮಾನ ಎಂದು ಟೀಕಿಸಿದ್ದಾರೆ.

ನೂತನ ಸಂಸತ್ ಭವನದಲ್ಲಿ ಸ್ಥಾಪಿಸಲಾಗಿದ್ದ ಸೆಂಗೋಲ್ ಹಾಗೂ ಸಂಸತ್ತಿನ ಉದ್ಘಾಟನೆ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಸಂಘರ್ಷ ನಡೆಯುತ್ತಿದೆ. ಹೊಸ ಸಂಸತ್ ಭವನವನ್ನು ಪ್ರಧಾನಿಯ ಬದಲಾಗಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದವು. ಹೀಗಾಗಿ ಕಾಂಗ್ರೆಸ್​, ಟಿಎಂಸಿ, ಆಪ್​ ಸೇರಿದಂತೆ 21 ವಿಪಕ್ಷಗಳು ನೂತನ ಸಂಸತ್​ ಭವನ ಉದ್ಘಾಟನಾ ಕಾರ್ಯಕ್ರಮದಿಂದ ಪರಿತ್ಯಕ್ತವಾಗಿವೆ.

ಇದನ್ನೂ ಓದಿ: 'ಹೊಸ ಸಂಸತ್​ ಭವನ ಸಬಲೀಕರಣದ ತೊಟ್ಟಿಲಾಗಲಿ': ಪ್ರಧಾನಿ ಮೋದಿ ಆಶಯ

Last Updated : May 28, 2023, 1:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.