ETV Bharat / bharat

ಬಿಜೆಪಿ ಪ್ರಣಾಳಿಕೆ ಸುಳ್ಳಿನ ಕಂತೆ, ಹಿಂದಿನ ಭರವಸೆಗಳನ್ನೇ ಈಡೇರಿಸಿಲ್ಲ: ಕಾಂಗ್ರೆಸ್

ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಕಾಂಗ್ರೆಸ್​ ನಾಯಕರು ಸರಣಿಯಾಗಿ ಟೀಕೆ ಮಾಡಿದ್ದಾರೆ. ಪ್ರಣಾಳಿಕೆ ಬೋಗಸ್​ಗಳ ಕಂತೆ ಎಂದು ದೂರಿದ್ದಾರೆ.

ಕರ್ನಾಟಕ ಬಿಜೆಪಿ ಪ್ರಣಾಳಿಕೆ
ಕರ್ನಾಟಕ ಬಿಜೆಪಿ ಪ್ರಣಾಳಿಕೆ
author img

By

Published : May 1, 2023, 5:14 PM IST

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಕಾಂಗ್ರೆಸ್​ "ಬೋಗಸ್​" ಎಂದು ಜರಿದಿದೆ. ಕಳೆದ ಚುನಾವಣೆ ವೇಳೆ ನೀಡಿದ್ದ ಶೇ.90 ರಷ್ಟು ಭರವಸೆಗಳನ್ನು ಈಡೇರಿಸಿಲ್ಲ. ಈ ಬಾರಿಯ ಪ್ರಣಾಳಿಕೆಯೂ ನಕಲಿಯಾಗಿದೆ ಎಂದು ಟೀಕಿಸಿದೆ.

ವರ್ಷದಲ್ಲಿ 3 ಎಲ್‌ಪಿಜಿ ಸಿಲಿಂಡರ್‌ಗಳು ಉಚಿತ ಎಂದು ಕರ್ನಾಟಕ ಬಿಜೆಪಿ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದೆ. ಕೇಂದ್ರ ಸರ್ಕಾರವು ಮಾತ್ರ ಗೃಹಬಳಕೆಯ ಅಡುಗೆ ಅನಿಲದ ಬೆಲೆಯನ್ನು ಮೂರು ಪಟ್ಟು ಹೆಚ್ಚಿಸಿದೆ. ಇದರಿಂದ ಜನರು ಹಣದುಬ್ಬರದಿಂದ ಬೇಸತ್ತಿದ್ದಾರೆ ಎಂದು ಕಾಂಗ್ರೆಸ್​ ಕಿಡಿಕಾರಿದೆ.

2018 ರ ಪ್ರಣಾಳಿಕೆಯಲ್ಲಿನ ಭರವಸೆಗಳಲ್ಲಿ ಶೇ.90 ರಷ್ಟನ್ನು ಈಡೇರಿಸಿಲ್ಲ. ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪವಿದೆ. ಇದರ ಮಧ್ಯೆ ಪಕ್ಷ ಮತ್ತೊಂದು ನಕಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವುದು ದಿಗಿಲು ಮೂಡಿಸುವ ಸಂಗತಿ ಎಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ಸುಪ್ರಿಯಾ ಶ್ರಿನೇಟ್ ಹೇಳಿದ್ದಾರೆ.

ಕಳೆದ ವರ್ಷ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಒಂದು ವರ್ಷದಲ್ಲಿ 2 ಎಲ್‌ಪಿಜಿ ಸಿಲಿಂಡರ್‌ಗಳು ಉಚಿತ ಎಂದು ಘೋಷಿಸಲಾಗಿತ್ತು. ಗೋವಾ ವಿಧಾನಸಭಾ ಚುನಾವಣೆಯಲ್ಲೂ ವರ್ಷಕ್ಕೆ 3 ಉಚಿತ ಎಲ್‌ಪಿಜಿ ಸಿಲಿಂಡರ್‌ಗಳ ಭರವಸೆಯನ್ನು ಬಿಜೆಪಿ ನೀಡಿತ್ತು. ಆದರೆ, ಅದು ಈವರೆಗೂ ಜಾರಿ ಮಾಡಿಲ್ಲ. ಇಲ್ಲೂ ಕೂಡ ಅದೇ ಭರವಸೆ ನೀಡಿ ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್​ ಹೇಳಿದೆ.

ಸುಳ್ಳಿನ ಕಂತೆ: ಬಿಜೆಪಿ ಕರ್ನಾಟಕದ 3 ಉಚಿತ ಎಲ್‌ಪಿಜಿ ಸಿಲಿಂಡರ್‌ಗಳ ಭರವಸೆ ಸುಳ್ಳಿನ ಕಂತೆಯಾಗಿದೆ ಎಂಬುದನ್ನು ಕರ್ನಾಟಕದ ಜನರು ತಿಳಿದುಕೊಳ್ಳಬೇಕು. ಗೋವಾ ಮುಖ್ಯಮಂತ್ರಿ ಕೂಡ ಇದೇ ರೀತಿಯ ಭರವಸೆ ನೀಡಿ ಅದರಿಂದ ಹಿಂದೆ ಸರಿದಿದ್ದಾರೆ. ಬಿಜೆಪಿಯ ಡಿಎನ್‌ಎಯಲ್ಲಿಯೇ ಸುಳ್ಳು ಇದೆ ಎಂದು ರಾಜ್ಯದಲ್ಲಿ ಪ್ರಚಾರ ನಡೆಸುತ್ತಿರುವ ಗೋವಾ ಕಾಂಗ್ರೆಸ್ ಮುಖ್ಯಸ್ಥ ಅಮಿತ್ ಪಾಟ್ಕರ್ ಆರೋಪಿಸಿದ್ದಾರೆ.

ಒಂದೆಡೆ ಕೇಂದ್ರ ಸರ್ಕಾರ ಅಡುಗೆ ಅನಿಲದ ಬೆಲೆಯನ್ನು ವಿಪರೀತ ಏರಿಕೆ ಮಾಡುತ್ತಿದೆ. ರಾಜ್ಯ ಬಿಜೆಪಿ ಮಾತ್ರ 3 ಉಚಿತ ಸಿಲಿಂಡರ್​ಗಳ ಭರವಸೆ ನೀಡುವುದರಲ್ಲಿ ಏನು ಅರ್ಥವಿದೆ ಎಂದು ಕಾಂಗ್ರೆಸ್ ವಕ್ತಾರ ಪ್ರೊ.ಗೌರವ್ ವಲ್ಲಭ್ ಪ್ರಶ್ನಿಸಿದ್ದಾರೆ.

ಬಿಜೆಪಿ ಘೋಷಿಸಿರುವ 3 ಸಿಲಿಂಡರ್‌ಗಳ ಉಚಿತ ವಿತರಣೆಯು ಕಾಂಗ್ರೆಸ್​ನ 2 ಸಾವಿರ ರೂಪಾಯಿ ಭರವಸೆಗಿಂತ ಅತಿ ಕಡಿಮೆಯಾಗಿದೆ. ಪ್ರಸ್ತುತ ಸಿಲಿಂಡರ್​ ಬೆಲೆ 1,100 ರೂ. ಇದೆ. ವಾರ್ಷಿಕವಾಗಿ 3,300 ರೂ. ಆಗುತ್ತದೆ. ಕಾಂಗ್ರೆಸ್​ ಮಹಿಳೆಯರಿಗೆ ನೀಡುವ ತಿಂಗಳಿಗೆ 2,000 ರೂ.ಗಳ ಕಾಂಗ್ರೆಸ್ ಖಾತರಿಯು ವರ್ಷಕ್ಕೆ 24,000 ರೂ. ಆಗುತ್ತದೆ. ಇದರಿಂದ ಜನರು ಕಾಂಗ್ರೆಸ್​ ಪರವಾಗಿ ನಿಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್​ ಗ್ಯಾರಂಟಿ ಆಯ್ಕೆ: ಇದಲ್ಲದೇ, ಕಾಂಗ್ರೆಸ್​ ಬಿಪಿಎಲ್ ಕುಟುಂಬಗಳ ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಿದೆ. ಬಿಜೆಪಿ ಈಗ ಕೇವಲ 5 ಕೆಜಿ ನೀಡುತ್ತಿದೆ. 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌, ಬೆಲೆ ಏರಿಕೆ ಎದುರಿಸಲು ಮಹಿಳೆಯರಿಗೆ ತಿಂಗಳಿಗೆ 2000 ರೂ., ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, ಪದವೀಧರರಿಗೆ 3000 ರೂ. ನಿರುದ್ಯೋಗ ಭತ್ಯೆಯನ್ನೇ ಕನ್ನಡಿಗರು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದರು.

ಏಕರೂಪ ನಾಗರಿಕ ಸಂಹಿತೆ ಜಾರಿ ಭರವಸೆಯನ್ನು ಟೀಕಿಸಿದ ಕಾಂಗ್ರೆಸ್​ನ ಪ್ರೊ.ವಲ್ಲಭ್ ಅವರು, ಚುನಾವಣಾ ಸಮಯದಲ್ಲಿ ಬಿಜೆಪಿ ಇಂತಹ ಭರವಸೆ ನೀಡುತ್ತದೆ. ಆದರೆ, ಅಧಿಕಾರಕ್ಕೆ ಬಂದ ನಂತರ ಜಾರಿ ಮಾಡುವುದಿಲ್ಲ. ಬಿಜೆಪಿ ಮತ ಚುನಾವಣೆಗಾಗಿ ಇಂತಹ ಘೋಷಣೆ ಮಾಡುತ್ತದೆ. ಮಧ್ಯಪ್ರದೇಶದಲ್ಲಿ ಸಂಹಿತೆ ಏಕೆ ಇನ್ನೂ ಜಾರಿ ಮಾಡಿಲ್ಲ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಏಕರೂಪದ ನಾಗರಿಕ ಸಂಹಿತೆ ಜಾರಿ, BPL ಕುಟುಂಬಕ್ಕೆ ಪ್ರತಿದಿನ ಅರ್ಧ ಲೀಟರ್ ಹಾಲು, 3 ಗ್ಯಾಸ್ ಸಿಲಿಂಡರ್‌ ಫ್ರೀ!- ಬಿಜೆಪಿ ಪ್ರಣಾಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.