ಆಂಧ್ರಪ್ರದೇಶ: ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‌ನ 'ಭಾರತ್ ಜೋಡೋ ಯಾತ್ರೆ' ಶುಕ್ರವಾರ ಸಾಯಂಕಾಲ ಆಂಧ್ರಪ್ರದೇಶವನ್ನು ಪ್ರವೇಶಿಸಲಿದೆ.
-
#BharatJodoYatra will start soon from Rampura, Chitradurga.
— Congress (@INCIndia) October 14, 2022 " class="align-text-top noRightClick twitterSection" data="
Come be a part of this historic movement. pic.twitter.com/fZl551wpyy
">#BharatJodoYatra will start soon from Rampura, Chitradurga.
— Congress (@INCIndia) October 14, 2022
Come be a part of this historic movement. pic.twitter.com/fZl551wpyy#BharatJodoYatra will start soon from Rampura, Chitradurga.
— Congress (@INCIndia) October 14, 2022
Come be a part of this historic movement. pic.twitter.com/fZl551wpyy
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಉನ್ನತ ನಾಯಕರನ್ನು ಒಳಗೊಂಡ ಯಾತ್ರೆ ವಿರಾಮದ ನಂತರ ಬೆಳಗ್ಗೆ ರಾಂಪುರದಿಂದ ಪುನರಾರಂಭವಾಗಿದೆ. ಇಂದು ಆಂಧ್ರ ಪ್ರದೇಶದ ಓಬಳಾಪುರಂನಲ್ಲೂ ಪಾದಯಾತ್ರೆ ನಡೆಯಲಿದೆ. ಶನಿವಾರ 10 ಗಂಟೆಗೆ ಗಣಿನಾಡು ಬಳ್ಳಾರಿಗೆ ಪಾದಯಾತ್ರೆ ತಲುಪಿದ್ದು, ಕರ್ನಾಟಕಕ್ಕೆ ಮರಳಿದ ಬಳಿಕ ರಾಹುಲ್ ಗಾಂಧಿ ರಾತ್ರಿ ಬಳ್ಳಾರಿ ಜಿಲ್ಲೆಯ ಹಲಕುಂದಿ ಮಠದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
-
"They say there are 2.5 lakh vacancies in Govt sector. But we are 20 lakh unemployed people. We have no opportunities."
— Congress (@INCIndia) October 14, 2022 " class="align-text-top noRightClick twitterSection" data="
Watch Shri @RahulGandhi interact with unemployed youth & how Congress will resolve the issue of unemployment.#BharatJodoYatra pic.twitter.com/mByeCSt4sa
">"They say there are 2.5 lakh vacancies in Govt sector. But we are 20 lakh unemployed people. We have no opportunities."
— Congress (@INCIndia) October 14, 2022
Watch Shri @RahulGandhi interact with unemployed youth & how Congress will resolve the issue of unemployment.#BharatJodoYatra pic.twitter.com/mByeCSt4sa"They say there are 2.5 lakh vacancies in Govt sector. But we are 20 lakh unemployed people. We have no opportunities."
— Congress (@INCIndia) October 14, 2022
Watch Shri @RahulGandhi interact with unemployed youth & how Congress will resolve the issue of unemployment.#BharatJodoYatra pic.twitter.com/mByeCSt4sa
ರಾಂಪುರದಿಂದ ಮೆರವಣಿಗೆ ಆರಂಭವಾಗುತ್ತಿದ್ದಂತೆಯೇ ಮಾರ್ಗದುದ್ದಕ್ಕೂ ಬ್ಯಾನರ್‌ಗಳು, ಪೋಸ್ಟರ್‌ಗಳು ಮತ್ತು ಕಾಂಗ್ರೆಸ್ ಧ್ವಜಗಳು ಕಂಡು ಬಂದವು. ಅನೇಕ ಜನರು ಗಾಂಧಿಯವರಿಗೆ ಹಸ್ತಲಾಘವ ಮಾಡಿ ಅವರೊಂದಿಗೆ ಸಂವಾದ ನಡೆಸಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿ ಹಲವು ನಾಯಕರು ರಾಹುಲ್ ಗಾಂಧಿಗೆ ಸಾಥ್ ನೀಡುತ್ತಿದ್ದಾರೆ.
ಕೆಲಹೊತ್ತು ಯಾತ್ರೆ ಆಂಧ್ರಪ್ರದೇಶದಲ್ಲಿ ಸಾಗುತ್ತೆ: ಇಂದು ರಾಜ್ಯದಲ್ಲಿನ ಪಾದಯಾತ್ರೆ ವೇಳೆ ಬಳ್ಳಾರಿಯ ಗಡಿಭಾಗದಲ್ಲಿರುವುದರಿಂದ ಆಂಧ್ರಪ್ರದೇಶದಲ್ಲಿ ಸ್ವಲ್ಪ ಸಮಯ ಪಾದಯಾತ್ರೆ ನಡೆಯಲಿದೆ. ಆ ಬಳಿಕ ರಾಹುಲ್ ಗಾಂಧಿಯವರು ಮತ್ತೆ ಕರ್ನಾಟಕಕ್ಕೆ ಹಿಂದಿರುಗುತ್ತಾರೆ. ಕಾಂಗ್ರೆಸ್ ಪದಾಧಿಕಾರಿಗಳ ಪ್ರಕಾರ, ರಾಹುಲ್ ಗಾಂಧಿ ಅವರು ಜಾಜಿರಕಲ್ಲು ಟೋಲ್ ಪ್ಲಾಜಾ ಮೂಲಕ ಆಂಧ್ರಪ್ರದೇಶವನ್ನು ಪ್ರವೇಶಿಸುತ್ತಾರೆ. ಅಲ್ಲಿ ಅವರು ಸಂಜೆ 4.30 ರವರೆಗೆ ತಂಗಿ ಮತ್ತೆ ಯಾತ್ರೆ ಪುನರಾರಂಭಿಸುತ್ತಾರೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ: ದಾರಿ ಉದ್ದಕ್ಕೂ ಜನಸಾಗರ
ಬಳ್ಳಾರಿಯಲ್ಲಿ ಬೃಹತ್ ಸಮಾವೇಶ: ಭಾರತ್ ಜೋಡೋ ಯಾತ್ರೆ ಶನಿವಾರ ಗಣಿನಾಡು ಬಳ್ಳಾರಿ ನಗರ ತಲುಪಲಿದ್ದು, ಅಂದೇ ಬೃಹತ್ ಸಮಾವೇಶ ಕೂಡ ನಡೆಯಲಿದೆ. ಇದು ಕರ್ನಾಟಕಕ್ಕೆ ಭಾರತ್ ಜೋಡೋ ತಲುಪಿದ ನಂತರ ನಡೆಯುತ್ತಿರುವ ಮೊದಲ ಸಮಾವೇಶವಾಗಲಿದೆ. ಪ್ರಿಯಾಂಕ ವಾದ್ರಾ ಭಾಗಿಯಾಗುವ ಈ ಸಮಾವೇಶದಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಳ್ಳುವ ಮೂಲಕ ಶಕ್ತಿ ಪ್ರದರ್ಶನ ತೋರಲಿದ್ದಾರೆ. ಶನಿವಾರ ಮಧ್ಯಾಹ್ನ 1 ಗಂಟೆಗೆ ಸಮಾವೇಶವನ್ನು ಆಯೋಜಿಸಲಾಗಿದೆ.
ರಾಜ್ಯದಲ್ಲಿ ಈಗಾಗಲೇ ಚಾಮರಾಜನಗರ, ಮಂಡ್ಯ, ತುಮಕೂರು, ಚಿತ್ರದುರ್ಗದಲ್ಲಿ ಪಾದಯಾತ್ರೆ ಭಾರಿ ಯಶಸ್ಸು ಸಾಧಿಸಿ ಮುನ್ನುಗ್ಗುತ್ತಿದೆ. ಇದೀಗ ಬಳ್ಳಾರಿ ಸಮಾವೇಶದೊಂದಿಗೆ ಪಾದಯಾತ್ರೆಗೆ ಮತ್ತಷ್ಟು ಬಲ ತುಂಬಲು ಕಾಂಗ್ರೆಸ್ ನಿರ್ಧರಿಸಿದೆ. ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 30 ರಂದು ಕರ್ನಾಟಕ ಪ್ರವೇಶಿಸಿದ್ದು, 21 ದಿನಗಳಲ್ಲಿ 511 ಕಿಮೀ ಕ್ರಮಿಸಿ ಅಕ್ಟೋಬರ್ 20 ರಂದು ರಾಜ್ಯದಿಂದ ನಿರ್ಗಮಿಸಲಿದೆ. ವಿಭಜಕ ಶಕ್ತಿಗಳ ವಿರುದ್ಧ ಭಾರತವನ್ನು ಒಗ್ಗೂಡಿಸುವ ಗುರಿಯನ್ನು ಈ ಯಾತ್ರೆ ಹೊಂದಿದೆ.
-
Congress' policy is clear, we won't allow the rampant privatisation of PSUs.
— Bharat Jodo (@bharatjodo) October 14, 2022 " class="align-text-top noRightClick twitterSection" data="
Instead, we will provide them with a conducive environment to thrive and grow.#BharatJodoYatra pic.twitter.com/FwtCbjmjwi
">Congress' policy is clear, we won't allow the rampant privatisation of PSUs.
— Bharat Jodo (@bharatjodo) October 14, 2022
Instead, we will provide them with a conducive environment to thrive and grow.#BharatJodoYatra pic.twitter.com/FwtCbjmjwiCongress' policy is clear, we won't allow the rampant privatisation of PSUs.
— Bharat Jodo (@bharatjodo) October 14, 2022
Instead, we will provide them with a conducive environment to thrive and grow.#BharatJodoYatra pic.twitter.com/FwtCbjmjwi
ಇದನ್ನೂ ಓದಿ: ಅಂದು 'ಡಿಸ್ಕವರಿ ಇಂಡಿಯಾ ಇಂದು ಭಾರತ್ ಜೋಡೋ': ರಾಗಾ ಯಾತ್ರೆಗೆ ಗಡಿಜಿಲ್ಲೆಯಿಂದಲೇ ಶ್ರೀಕಾರ