ETV Bharat / bharat

ಸಂಸತ್ ಸಿಬ್ಬಂದಿಗೆ ಹೊಸ ಡ್ರೆಸ್ ಕೋಡ್: ರಾಜಕೀಯ ಕೆಸರೆರಚಾಟಕ್ಕೆ ನಾಂದಿ

ಭಾರತದ ಹೊಸ ಸಂಸತ್ತಿನಲ್ಲಿ ಉದ್ಯೋಗಿಗಳು, ಮಾರ್ಷಲ್‌ಗಳು ಮತ್ತು ಭದ್ರತಾ ಸಿಬ್ಬಂದಿ ಹೊಸ ದಿರಿಸಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಸತ್ ಸಿಬ್ಬಂದಿಗೆ ಕಮಲದ ಹೂವಿನ ಅಚ್ಚುಗಳಿರುವ ಹೊಸ ಡ್ರೆಸ್ ಕೋಡ್ ನೀಡಿರುವುದು ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ.

DRESS CODE
ಹೊಸ ಡ್ರೆಸ್ ಕೋಡ್
author img

By PTI

Published : Sep 13, 2023, 7:24 AM IST

ನವದೆಹಲಿ: ದೇಶದ ನೂತನ ಸಂಸತ್​ ಭವನ ಸಿದ್ಧವಾಗಿದೆ. ಇದು ನವ ಭಾರತದ ಸಂಕೇತ ಎಂದು ಬಣ್ಣಿಸಲಾಗುತ್ತಿದೆ. ಇದರೊಂದಿಗೆ ಹೊಸ ಕಟ್ಟಡದಲ್ಲಿ ಕೆಲಸ ಮಾಡುವ ನೌಕರರ ಡ್ರೆಸ್ ಕೂಡ ಬದಲಿಸಲು ನಿರ್ಧರಿಸಲಾಗಿದೆ. ಹೊಸ ಉಡುಗೆಯು ಸಂಪೂರ್ಣವಾಗಿ ಭಾರತೀಯ ಸಾಂಪ್ರದಾಯಿಕ ಶೈಲಿಯಲ್ಲಿರಲಿದೆ. ಇದೀಗ ನೂತನ ಡ್ರೆಸ್ ಕೋಡ್ ರಾಜಕೀಯ ಗದ್ದಲಕ್ಕೆ ನಾಂದಿ ಹಾಡಿದೆ. "ಆಡಳಿತ ಪಕ್ಷದ ಚುನಾವಣಾ ಚಿಹ್ನೆಯನ್ನು ಪ್ರಚಾರ ಮಾಡಲಾಗುತ್ತಿದೆ, ಇದು ತೀರಾ ಕೆಳಮಟ್ಟದ ರಾಜಕೀಯ ತಂತ್ರಗಾರಿಕೆ" ಎಂದು ಕಾಂಗ್ರೆಸ್ ಟೀಕಿಸಿದೆ.

ಲೋಕಸಭೆಯ ಸಚಿವಾಲಯ ಹೊರಡಿಸಿದ ಆಂತರಿಕ ಸುತ್ತೋಲೆಯ ಪ್ರಕಾರ, ಮಾರ್ಷಲ್‌ಗಳು, ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು, ಚೇಂಬರ್ ಅಟೆಂಡರ್‌ಗಳು ಮತ್ತು ಚಾಲಕರಿಗೆ ಹೊಸ ಸಮವಸ್ತ್ರವನ್ನು ನೀಡಿದ್ದು, ಹೊಸ ಸಂಸತ್ ಭವನವು ಕಾರ್ಯನಿರ್ವಹಿಸಲು ಪ್ರಾರಂಭಿಸಿದ ನಂತರ ಅವರು ಇದನ್ನು ಧರಿಸಬೇಕು ಎಂದು ತಿಳಿಸಿದೆ. ಈ ಉಡುಪನ್ನು NIFT ಸಿದ್ಧಪಡಿಸಿದೆ.

ಉಭಯ ಸದನಗಳ ಮಾರ್ಷಲ್‌ಗಳ ಡ್ರೆಸ್ ಕೂಡ ಬದಲಾಯಿಸಲಾಗಿದೆ. ಈ ಮಾರ್ಷಲ್‌ಗಳು ಮೊದಲಿಗಿಂತ ವಿಭಿನ್ನವಾಗಿ ಕಾಣಲಿದ್ದಾರೆ. ಅವರ ಶರ್ಟ್‌ಗಳು ಕಡು ಗುಲಾಬಿ ಬಣ್ಣದ್ದಾಗಿದ್ದು, ಅವುಗಳ ಮೇಲೆ ಕಮಲದ ಹೂವುಗಳು ಇರುತ್ತವೆ ಮತ್ತು ಖಾಕಿ ಬಣ್ಣದ ಪ್ಯಾಂಟ್‌, ಮಣಿಪುರಿ ಪೇಟ ಧರಿಸಲಿದ್ದಾರೆ. ಕಮಲದ ಹೂವಿನ ಆಕಾರದ ಬಗ್ಗೆ ಹಲವು ವಿರೋಧ ಪಕ್ಷದ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲವು ಅಜೆಂಡಾಗಳ ಅಡಿಯಲ್ಲಿ ಸರ್ಕಾರವು ಉಡುಗೆಯಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಜೊತೆಗೆ, ಮಹಿಳಾ ಅಧಿಕಾರಿಗಳಿಗೆ ಚಳಿಗಾಲದಲ್ಲಿ ಧರಿಸಲು ಜಾಕೆಟ್‌ಗಳೊಂದಿಗೆ ಗಾಢ ಬಣ್ಣದ ಸೀರೆಗಳನ್ನು ಆಯ್ಕೆ ಮಾಡಲಾಗಿದೆ. ಭದ್ರತಾ ಸಿಬ್ಬಂದಿ ನೀಲಿ ಸಫಾರಿ ಸೂಟ್‌ಗಳ ಬದಲಿಗೆ ಸೈನ್ಯನಿಕರು ಧರಿಸುವ ರೀತಿಯ ಬಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಉದ್ಯೋಗಿಗಳ ಶರ್ಟ್‌ಗಳ ಮೇಲೆ ಕಮಲದ ಮುದ್ರಣ: ಉದ್ಯೋಗಿಗಳ ಬಟ್ಟೆಯ ಮೇಲೆ ಕಮಲದ ಹೂವನ್ನು ಮುದ್ರಿಸಿರುವುದರಿಂದ ವಿವಾದ ಉದ್ಭವಿಸಿದೆ. ಏಕೆಂದರೆ, ಇದು ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಚುನಾವಣಾ ಚಿಹ್ನೆ. ಆದಾಗ್ಯೂ, ಇದನ್ನು ಭಾರತೀಯ ಸಂಪ್ರದಾಯದ ಸಂಕೇತವೆಂದು ಬಣ್ಣಿಸಲಾಗುತ್ತಿದೆ. ಇದರ ಆಧಾರದ ಮೇಲೆಯೇ ಇದನ್ನು ಜಿ20 ಲೋಗೋದಲ್ಲಿ ಕೂಡ ಸೇರಿಸಲಾಗಿತ್ತು.

ಕಾಂಗ್ರೆಸ್​ ಟ್ವೀಟ್​: ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಅಭಿಪ್ರಾಯ ಹಂಚಿಕೊಂಡ ಲೋಕಸಭೆಯ ಕಾಂಗ್ರೆಸ್ ವಿಪ್ ಮಾಣಿಕಂ ಟ್ಯಾಗೋರ್, "ಬಿಜೆಪಿಯು ಸಂಸತ್ತನ್ನು ಏಕಪಕ್ಷೀಯ ವಿಷಯವಾಗಿ ನೋಡುತ್ತಿದೆ. ಉಡುಗೆ ವಿನ್ಯಾಸಗಳಲ್ಲಿ ಕಮಲದ ಹೂವನ್ನು ಏಕೆ ಬಳಸಲಾಗಿದೆ?. ಅಲ್ಲಿ "ಕಮಲ ಮಾತ್ರ ಏಕೆ? ಇದೆ, ನವಿಲು ಏಕೆ ಇಲ್ಲ? ಅಥವಾ ಹುಲಿಯನ್ನು ಏಕೆ ಹಾಕಿಲ್ಲ?. ಅದು ಬಿಜೆಪಿ ಪಕ್ಷದ ಚುನಾವಣಾ ಚಿಹ್ನೆ ಅಲ್ಲವೇ. ಏಕೆ ರೀತಿ ಮಾಡಲಾಗಿದೆ ಓಂ ಬಿರ್ಲಾ ಸರ್​ ಅವರೇ" ಎಂದು ಪ್ರಶ್ನಿಸಿದ್ದಾರೆ.

ಹೊಸ ಸಂಸತ್ತಿನಲ್ಲಿ ವಿಶೇಷ ಅಧಿವೇಶನ: ಮೇ 28 ರಂದು ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಅಂದಿನಿಂದಲೇ ಹೊಸ ಡ್ರೆಸ್ ಧರಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ವಿಳಂಬವಾಗಿದೆ. ಸೆಪ್ಟೆಂಬರ್ 18ರಂದು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಹಳೆ ಕಟ್ಟಡದಲ್ಲಿ ಅಧಿವೇಶನ ಆರಂಭವಾದರೂ ಮರುದಿನದಿಂದ ಹೊಸ ಸಂಸತ್ ಭವನದಿಂದ ಕಲಾಪ ಆರಂಭವಾಗಲಿದೆ. (ಪಿಟಿಐ)

ಇದನ್ನೂ ಓದಿ : ಸಂಸತ್ ಸಿಬ್ಬಂದಿಗೆ ಹೊಸ ಸಮವಸ್ತ್ರ, ಕಮಾಂಡೋ ಟ್ರೇನಿಂಗ್; ಹೇಗಿದೆ ಗೊತ್ತಾ ಹೊಸ ಉಡುಪು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.