ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೇ ವಿಷಯವಾಗಿ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಟ್ವೀಟರ್ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿರುವ ಸೋನಿಯಾ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಎಚ್ಚೆತ್ತುಕೊಂಡು ತಮ್ಮ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದಿದ್ದಾರೆ. ದೇಶದ ಎಲ್ಲರಿಗೂ ಉಚಿತವಾಗಿ ಕೊರೊನಾ ವ್ಯಾಕ್ಸಿನ್ ನೀಡಬೇಕು ಎಂದಿರುವ ಸೋನಿಯಾ, ಲಸಿಕೆ ವೇಗವಾಗಿ ಉತ್ಪಾದನೆ ಮಾಡಲು ಕಡ್ಡಾಯ ಪರವಾನಗಿ ನೀಡಬೇಕು ಎಂದಿದ್ದಾರೆ.
-
कोरोना महामारी के इस चुनौतीपूर्ण समय में आपके व आपके परिवार की सुरक्षा और अच्छे स्वास्थ्य की कामना करती हूं। वह लाखों परिवार जिन्होंने अपने परिजनों को खोया है, उनके प्रति दिल से अपनी संवेदना व्यक्त करती हूं।
— Congress (@INCIndia) May 1, 2021 " class="align-text-top noRightClick twitterSection" data="
- कांग्रेस अध्यक्षा, श्रीमती सोनिया गांधी#COVID19India pic.twitter.com/btmCeG8K6B
">कोरोना महामारी के इस चुनौतीपूर्ण समय में आपके व आपके परिवार की सुरक्षा और अच्छे स्वास्थ्य की कामना करती हूं। वह लाखों परिवार जिन्होंने अपने परिजनों को खोया है, उनके प्रति दिल से अपनी संवेदना व्यक्त करती हूं।
— Congress (@INCIndia) May 1, 2021
- कांग्रेस अध्यक्षा, श्रीमती सोनिया गांधी#COVID19India pic.twitter.com/btmCeG8K6Bकोरोना महामारी के इस चुनौतीपूर्ण समय में आपके व आपके परिवार की सुरक्षा और अच्छे स्वास्थ्य की कामना करती हूं। वह लाखों परिवार जिन्होंने अपने परिजनों को खोया है, उनके प्रति दिल से अपनी संवेदना व्यक्त करती हूं।
— Congress (@INCIndia) May 1, 2021
- कांग्रेस अध्यक्षा, श्रीमती सोनिया गांधी#COVID19India pic.twitter.com/btmCeG8K6B
ಡೆಡ್ಲಿ ವೈರಸ್ ಕೋವಿಡ್ ಬಿಕ್ಕಟ್ಟು ಎದುರಿಸಲು ರಾಷ್ಟ್ರೀಯ ನೀತಿ ರೂಪಿಸಬೇಕು ಎಂದಿರುವ ಸೋನಿಯಾ, ಅದರಲ್ಲಿ ಯಾವುದೇ ರೀತಿಯ ರಾಜಕೀಯ ತರಬಾರದು ಎಂದು ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಬಡವರ ಕುಟುಂಬಗಳಿಗೆ ಕೇಂದ್ರ ಸರ್ಕಾರ ತಲಾ 6 ಸಾವಿರ ರೂ. ನೀಡಬೇಕು ಎಂದಿರುವ ಸೋನಿಯಾ, ಕಾಳಸಂತೆಯಲ್ಲಿ ಕೋವಿಡ್ ಔಷಧ ಮಾರಾಟವಾಗುವುದನ್ನ ತಡೆಯಬೇಕು ಎಂದಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ಕಾಂಗ್ರೆಸ್ ಕೂಡ ಸರ್ಕಾರದ ಜೊತೆ ನಿಲ್ಲಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ಮಧ್ಯೆ ಪಂಚಾಯ್ತಿ ಚುನಾವಣೆ: ಯುಪಿ ಸರ್ಕಾರದ ವಿರುದ್ಧ ಪ್ರಿಯಾಂಕಾ ವಾಗ್ದಾಳಿ
ಕಳೆದ ಕೆಲ ದಿನಗಳಿಂದ ದೇಶದಲ್ಲಿ ಪ್ರತಿದಿನ ಲಕ್ಷಾಂತರ ಕೋವಿಡ್ ಕೇಸ್ ದಾಖಲಾಗುತ್ತಿದ್ದು, ನಿನ್ನೆ ದಾಖಲೆಯ 4 ಲಕ್ಷಕ್ಕೂ ಅಧಿಕ ಸೋಂಕಿತ ಪ್ರಕರಣ ಕಾಣಿಸಿಕೊಂಡಿವೆ. ಇದರ ಮಧ್ಯೆ 3500ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.