ಗಡ್ಚಿರೋಲಿ, ಮಹಾರಾಷ್ಟ್ರ: 10 ತಿಂಗಳಲ್ಲಿ 13 ಜನರನ್ನು ಬಲಿ ಪಡೆದಿದ್ದ ಹುಲಿ ಕೊನೆಗೂ ಸಿಕ್ಕಿಬಿದ್ದಿದೆ. ಈ ಹುಲಿ ಡಿಸೆಂಬರ್‌ನಿಂದ ಗಡ್ಚಿರೋಲಿ ಮತ್ತು ಚಂದ್ರಾಪುರ ಜಿಲ್ಲೆಗಳಲ್ಲಿ ಸಂಚರಿಸುತ್ತಿದ್ದು, ಜನರ ಜೀವಕ್ಕೆ ಅಪಾಯವಾಗಿತ್ತು. ಸಿಟಿ-1 ಎಂದು ಹೆಸರಿಸಲಾದ ಈ ಹುಲಿಯನ್ನು ಹಿಡಿಯಲು ಯುದ್ಧದ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಗುರುವಾರ ವಾಡ್ಸಾ ಅರಣ್ಯ ಪ್ರದೇಶದಲ್ಲಿ ಹುಲಿ ಇರುವುದು ತಿಳಿದಿತ್ತು. ಕೂಡಲೇ ಕಾರ್ಯಪ್ರವೃತ್ತಾರದ ನಮ್ಮ ತಂಡ ಅದಕ್ಕೆ ಮಾದಕ ದ್ರವ್ಯ ನೀಡಿ ಸೆರೆ ಹಿಡಿಯಲಾಯಿತು. ಹುಲಿಯನ್ನು ಪುನರ್ವಸತಿಗಾಗಿ ವಾಡ್ಸಾ ರೇಂಜ್‌ನಿಂದ 183 ಕಿಮೀ ದೂರದಲ್ಲಿರುವ ನಾಗ್ಪುರದ ಗೊರೆವಾಡ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದೆ ಬಿಹಾರದಲ್ಲಿ ಮಾನವನ ರಕ್ತದ ರುಚಿ ಕಂಡಿದ್ದ ಹುಲಿಯನ್ನು ಶಾರ್ಪ್ ಶೂಟರ್‌ಗಳು ಕೊಂದು ಹಾಕಿದ್ದರು. ಚಂಪಾರಣ್ ಜಿಲ್ಲೆಯ ಬಗಾಹ ಗ್ರಾಮದ ಮೇಲೆ ಹುಲಿ ದಾಳಿ 9 ಗ್ರಾಮಸ್ಥರನ್ನು ಬಲಿ ತೆಗೆದುಕೊಂಡಿತ್ತು. ಗ್ರಾಮಸ್ಥರ ಮನವಿ ಮೇರೆಗೆ ಕೆಲ ವಾರಗಳಿಂದ ಹುಲಿ ಹಿಡಿಯಲು ಆನೆಗಳೊಂದಿಗೆ ಹುಡುಕಾಟ ನಡೆಸುತ್ತಿದ್ದರೂ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದರು.
ಇನ್ನು ಆ ಹುಲಿಯನ್ನು ಕೊಲ್ಲುವ ಮುನ್ನ ಮೂರು ದಿನಗಳಲ್ಲಿ ನಾಲ್ವರು ಬಲಿ ಪಡೆದಿತ್ತು ಎಂದು ಹೇಳಲಾಗ್ತಿದೆ. ಬಿಹಾರ ಸರ್ಕಾರದಿಂದ ಅನುಮತಿ ಪಡೆದ ನಂತರ ಶಾರ್ಪ್ ಶೂಟರ್‌ಗಳಿಂದ ಹುಲಿಯನ್ನು ಕೊಂದಿರುವುದಾಗಿ ಅರಣ್ಯ ಸಿಬ್ಬಂದಿ ಬಹಿರಂಗಪಡಿಸಿದ್ದಾರೆ.
ಓದಿ: ಒಂದೇ ತಿಂಗಳಲ್ಲಿ 7 ಜನರ ಕೊಂದು ಹಾಕಿದ ನರಭಕ್ಷಕ ಹುಲಿ: ಕಂಡಲ್ಲಿ ಗುಂಡಿಕ್ಕಲು ಆದೇಶ