ETV Bharat / bharat

ಸೀತೆಯನ್ನು ಹತ್ರಾಸ್​ ಪ್ರಕರಣಕ್ಕೆ ಹೋಲಿಸಿದ ಟಿಎಂಸಿ ಸಂಸದನ ವಿರುದ್ಧ ಪ್ರಕರಣ - ಸೀತೆಯನ್ನು ಹತ್ರಾಸ್​ ಪ್ರಕರಣಕ್ಕೆ ಹೋಲಿಸಿದ ಟಿಎಂಸಿ ಸಂಸದನ ವಿರುದ್ಧ ಪ್ರಕರಣ

ಪಶ್ಚಿಮ ಬಂಗಾಳದ ಬರಾಕ್‌ಪೋರ್‌ನಲ್ಲಿ ನಡೆದ ರ್ಯಾಲಿಯಲ್ಲಿ ಸೀತೆ ಅಪಹರಣ ಸಂಗತಿಯನ್ನು ಹತ್ರಾಸ್ ಪ್ರಕರಣಕ್ಕೆ ಹೋಲಿಸಿ ಭಾಷಣ ಮಾಡಿದ್ದ ಸಂಸದ ಕಲ್ಯಾಣ್​ ಬ್ಯಾನರ್ಜಿ ವಿರುದ್ಧ ಪ್ರಕರಣ ದಾಖಲಾಗಿದೆ.

Complaint against TMC MP for derogatory remarks on goddess Sita
ಸಂಸದ ಕಲ್ಯಾಣ್​ ಬ್ಯಾನರ್ಜಿ
author img

By

Published : Jan 11, 2021, 5:44 PM IST

ಕೊಲ್ಕತ್ತಾ: ಸೀತೆಯನ್ನು ಹತ್ರಾಸ್​​ ಪ್ರಕರಣಕ್ಕೆ ಹೋಲಿಸುವ ಮೂಲಕ ಅವಹೇಳನಕಾರಿ ಹೇಳಿಕೆ ನೀಡಿದ ತೃಣಮೂಲ ಕಾಂಗ್ರೆಸ್​​ (ಟಿಎಂಸಿ) ಸಂಸದ ಕಲ್ಯಾಣ್​ ಬ್ಯಾನರ್ಜಿ ವಿರುದ್ಧ ಹೌರಾ ಜಿಲ್ಲೆಯ ಗೋಲಾಬರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

ಬರಾಕ್‌ಪೋರ್‌ನಲ್ಲಿ ನಡೆದ ರ್ಯಾಲಿಯಲ್ಲಿ ಸೀತೆ ಅಪಹರಣ ಸಂಗತಿಯನ್ನು ಹತ್ರಾಸ್ ಪ್ರಕರಣಕ್ಕೆ ಹೋಲಿಸಿ ಬ್ಯಾನರ್ಜಿ ಭಾಷಣ ಮಾಡಿದ್ದರು. ಈ ಮೂಲಕ, ಹಿಂದೂ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ದೂರು ದಾಖಲಿಸಿರುವ ಬಿಜೆಪಿ ಯುವ ಮೋರ್ಚಾ ಸದಸ್ಯ ಆಶಿಶ್ ಜೈಸ್ವಾಲ್ ಹೇಳಿದರು.

ಇದನ್ನೂ ಓದಿ: ಬೇರೆ ಪಕ್ಷಗಳ ಕೊಳೆತ ನಾಯಕರನ್ನ ಸೆಳೆಯುವ ಬಿಜೆಪಿ ಜಂಕ್‌ ಪಾರ್ಟಿ.. ಮಮತಾ ಬ್ಯಾನರ್ಜಿ ವ್ಯಂಗ್ಯೋಕ್ತಿ!

ಹಿಂದೂಗಳು ಸೀತೆಯನ್ನು ಅತ್ಯುನ್ನತ ಗೌರವಾನ್ವಿತ ದೇವತೆಗಳಲ್ಲಿ ಒಬ್ಬರೆಂದು ಭಾವಿಸುತ್ತೇವೆ. ಆದರೆ, ಅಂತಹ ದೇವತೆಯನ್ನು ಅಪಮಾನಿಸಿದ್ದು ದುರುದ್ದೇಶಪೂರಿತ. ಇಂತಹ ಹೇಳಿಕೆಗಳಿಂದ ಸಮಾಜದಲ್ಲಿ ರಕ್ತಪಾತವಾಗುವ ಎಲ್ಲ ಅವಕಾಶಗಳಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಾನು ರಾವಣನಿಂದ ಅಪಹರಣಕ್ಕೆ ಒಳಗಾಗಿದ್ದೇನೆ. ಆದರೆ, ಕೇಸರಿ ಬೆಂಬಲಿಗರಿಂದ ಅಪಹರಣವಾಗಿದ್ದರೆ ಹತ್ರಾಸ್​ ಗ್ಯಾಂಗ್​ ರೇಪ್​ ಪ್ರಕರಣದಂತೆ ನಾನೂ ಬಲಿಪಶುವಾಗುತ್ತಿದೆ ಎಂದು ಸದ್ಯದ ಪರಿಸ್ಥಿತಿಯಲ್ಲಿ ಸೀತೆಯು ರಾಮನಿಗೆ ಹೇಳುವ ಸಂದರ್ಭ ಬರುತ್ತಿತ್ತು ಎಂದು ಹೇಳಿಕೆ ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.