ETV Bharat / bharat

ಕೇಂದ್ರದ ವಿವಾದಿತ ಕೃಷಿ ಕಾನೂನುಗಳ ವಿರುದ್ಧ 6 ರಾಜ್ಯಗಳು ಅಂಗೀಕರಿಸಿದ ನಿರ್ಣಯಗಳ ವಿಶ್ಲೇಷಣೆ.. - ಕೇಂದ್ರದ ನೂತನ ಕೃಷಿ ಕಾಯ್ದೆಗಳಿಗೆ ವಿರೋಧ

ಬಿಜೆಪಿ ಆಡಳಿತವಿಲ್ಲದ ರಾಜ್ಯಗಳಾದ ಪಂಜಾಬ್, ರಾಜಸ್ಥಾನ, ಛತ್ತೀಸ್​ಗಢ, ದೆಹಲಿ, ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು, ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಮೂರು ಕೃಷಿ ಕಾನೂನುಗಳ ವಿರುದ್ಧ ನಿರ್ಣಯವನ್ನು ಅಂಗೀಕರಿಸಿವೆ..

Comparative analysis of Resolution Passed by six states
ಆರು ರಾಜ್ಯಗಳು ಅಂಗೀಕರಿಸಿದ ಕೇಂದ್ರದ ಕೃಷಿ ಕಾನೂನು ವಿರುದ್ಧದ ನಿರ್ಣಯಗಳ ತುಲನಾತ್ಮಕ ವಿಶ್ಲೇಷಣೆ
author img

By

Published : Jan 31, 2021, 4:43 PM IST

1. ಕೇಂದ್ರದ ಕೃಷಿ ಕಾನೂನು ವಿರುದ್ಧ ನಿರ್ಣಯ ಅಂಗೀಕರಿಸಿದ ಮೊದಲ ರಾಜ್ಯ ಪಂಜಾಬ್ :

  • ಬಿಜೆಪಿ ಹೊರತುಪಡಿಸಿ ಎಲ್ಲ ವಿರೋಧ ಪಕ್ಷಗಳು ಸರ್ವಾನುಮತದಿಂದ ಅಂಗೀಕರಿಸಿ ಕೇಂದ್ರದ ಕೃಷಿ ಕಾನೂನು ವಿರುದ್ಧದ ಮಸೂದೆಯನ್ನು ರಾಜ್ಯಪಾಲರಿಗೆ ಹಸ್ತಾಂತರಿಸಿದವು.
  • ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ವಿಶೇಷ ನಿಬಂಧನೆ ಮತ್ತು ಪಂಜಾಬ್ ತಿದ್ದುಪಡಿ ಮಸೂದೆ 2020 ಎಂಎಸ್‌ಪಿಗಿಂತ ಕಡಿಮೆ ಬೆಲೆಗೆ ಗೋಧಿ ಅಥವಾ ಭತ್ತವನ್ನು ಖರೀದಿಸುವ ಅಥವಾ ಮಾರಾಟ ಮಾಡುವ ಯಾವುದೇ ವ್ಯಕ್ತಿಗೆ ದಂಡ ಮತ್ತು ಮೂರು ವರ್ಷಗಳಿಗಿಂತ ಕಡಿಮೆ ಜೈಲು ಶಿಕ್ಷೆ ವಿಧಿಸಲು ಅಧಿಕಾರಿಗಳಿಗೆ ಅವಕಾಶ ನೀಡುತ್ತದೆ.
  • ಬೆಂಬಲ ಬೆಲೆ ಮತ್ತು ಕೃಷಿ ಸೇವೆಗಳ ವಿಶೇಷ ನಿಬಂಧನೆ ಮತ್ತು ಪಂಜಾಬ್ ತಿದ್ದುಪಡಿ ಮಸೂದೆ 2020ರ ರೈತರ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದವು ಎಂಎಸ್‌ಪಿಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲು ರೈತರಿಗೆ ಕಿರುಕುಳ ನೀಡುವ ಯಾರಿಗಾದ್ರೂ ಶಿಕ್ಷೆಯಾಗುತ್ತದೆ ಎಂದು ಹೇಳುತ್ತದೆ.
  • ಅಗತ್ಯ ಸರಕುಗಳ ವಿಶೇಷ ನಿಬಂಧನೆ ಮತ್ತು ಪಂಜಾಬ್ ತಿದ್ದುಪಡಿ ಮಸೂದೆ 2020 ಕೃಷಿ ಉತ್ಪನ್ನಗಳ ಸಂಗ್ರಹಣೆ ಮತ್ತು ಕಾಳಸಂತೆ ಮಾರಾಟವನ್ನು ಪರಿಶೀಲಿಸುವ ಅವಕಾಶವನ್ನು ಹೊಂದಿದೆ.
  • ನಾಗರಿಕ ಕಾರ್ಯವಿಧಾನ ಸಂಹಿತೆ (ಪಂಜಾಬ್ ತಿದ್ದುಪಡಿ) ಮಸೂದೆ 2020 ರೈತರಿಗೆ 2.45 ಎಕರೆವರೆಗೆ ಹಿಡುವಳಿಗಳನ್ನು ಹೊಂದಿದ ರೈತರಿಗೆ ಪರಿಹಾರ ಪ್ರಕ್ರಿಯೆಯಲ್ಲಿ ತಮ್ಮ ಭೂಮಿ ನೀಡಿದ್ದಕ್ಕೆ ಪರಿಹಾರ ನೀಡುತ್ತದೆ.

2. ಪಂಜಾಬ್ ನಂತರ ಕೇಂದ್ರದ ಕಾಯ್ದೆಗಳನ್ನು ತಿರಸ್ಕರಿಸಿದ 2ನೇ ರಾಜ್ಯ ರಾಜಸ್ಥಾನ :

  • ಕೇಂದ್ರ ತಂದ ಕಾನೂನುಗಳ ರಾಜ್ಯ ತಿದ್ದುಪಡಿಗಳಿಗೆ ಸಂಬಂಧಿಸಿದ ಮೂರು ಮಸೂದೆಗಳಾದ, ರೈತರು ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) (ರಾಜಸ್ಥಾನ ತಿದ್ದುಪಡಿ) ಮಸೂದೆ, 2020, ರೈತ (ಸಬಲೀಕರಣ ಮತ್ತು ಸಂರಕ್ಷಣೆ) ಬೆಂಬಲ ಬೆಲೆ ಮತ್ತು ಕೃಷಿ ಸೇವೆಗಳ ಒಪ್ಪಂದ (ರಾಜಸ್ಥಾನ) ತಿದ್ದುಪಡಿ) ಮಸೂದೆ, 2020, ಮತ್ತು ಅಗತ್ಯ ಸರಕುಗಳು (ವಿಶೇಷ ನಿಬಂಧನೆಗಳು ಮತ್ತು ರಾಜಸ್ಥಾನ ತಿದ್ದುಪಡಿ) ಮಸೂದೆ 2020.
  • ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವ ರೈತರು, ಕೃಷಿ ಕಾರ್ಮಿಕರು ಮತ್ತು ಇತರರ ಜೀವನೋಪಾಯವನ್ನು ಭದ್ರಪಡಿಸುವ ಸಲುವಾಗಿ 1961 ರ ರಾಜಸ್ಥಾನ ಕೃಷಿ ಉತ್ಪನ್ನ ಮಾರುಕಟ್ಟೆಗಳ ಕಾಯ್ದೆ ಜಾರಿಗೆ ತಂದಿದೆ. ನಿಯಂತ್ರಿತ ಚೌಕಟ್ಟಿನ ಮೂಲಕ ರಾಜ್ಯದಲ್ಲಿ ಕೃಷಿ ಸುರಕ್ಷತೆಯನ್ನು ಪುನಃ ಸ್ಥಾಪಿಸಲು ಈ ಮಸೂದೆಗಳು ಪ್ರಯತ್ನಿಸಿವೆ. ಒಂದು ಮಸೂದೆ ಅನ್ವಯ ರೈತರಿಗೆ ಕಿರುಕುಳ ನೀಡಿದ್ದಕ್ಕಾಗಿ ಮೂರರಿಂದ ಏಳು ವರ್ಷ ಜೈಲು ಶಿಕ್ಷೆ ಮತ್ತು ₹5 ಲಕ್ಷ ದಂಡ ವಿಧಿಸಲಾಗಿದೆ.
  • ಬೆಂಬಲ ಬೆಲೆ ಮಸೂದೆ ಒಪ್ಪಂದದ ಪ್ರಕಾರ ಕೃಷಿ ಉತ್ಪನ್ನಗಳಿಗೆ ಪಾವತಿಸುವ ಬೆಲೆ ಕೇಂದ್ರ ಸರ್ಕಾರವು ಘೋಷಿಸಿರುವ ಚಾಲ್ತಿಯಲ್ಲಿರುವ ಎಂಎಸ್‌ಪಿಗೆ ಸಮನಾದ ಅಥವಾ ಹೆಚ್ಚಿರದ ಹೊರತು ಬೆಳೆ ಮಾರಾಟ ಅಥವಾ ಖರೀದಿಗೆ ಯಾವುದೇ ಕೃಷಿ ಒಪ್ಪಂದವು ಮಾನ್ಯವಾಗುವುದಿಲ್ಲ. ಅಗತ್ಯ ಸರಕುಗಳ ಕಾಯ್ದೆಗೆ ತಿದ್ದುಪಡಿ ತರಲು ಬಯಸುವ ಮಸೂದೆಯು, ಗ್ರಾಹಕರನ್ನು ಕೃಷಿ ಉತ್ಪನ್ನಗಳ ಸಂಗ್ರಹಣೆ ಮತ್ತು ಕಾಳಸಂತೆ ಮಾರಾಟದಿಂದ ರಕ್ಷಿಸಲು ಮತ್ತು ರೈತರ ಹಿತಾಸಕ್ತಿಗಳನ್ನು ಕಾಪಾಡುವುದನ್ನು ಒಳಗೊಂಡಿದೆ.

ಕೇಂದ್ರದ ಕೃಷಿ ಕಾನೂನು ವಿರುದ್ಧ ನಿರ್ಣಯ ಅಂಗೀಕರಿಸಿದ 3ನೇ ರಾಜ್ಯ ಛತ್ತೀಸ್​​ಗಢ:

  • ಎರಡು ದಿನಗಳ ವಿಶೇಷ ಅಧಿವೇಶನ ಕರೆಯುವ ಮೂಲಕ, ಮಾರುಕಟ್ಟೆಯ ಬೆಲೆಗಳ ಏರಿಳಿತದಿಂದ ರೈತರನ್ನು ರಕ್ಷಿಸಲು ಕೋರಿ 2020 ಛತ್ತೀಸ್​ಗಢ ಕೃಷಿ ಉಪಾಜ್ ಮಂಡಿ (ತಿದ್ದುಪಡಿ) ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.
  • ಈ ಮಸೂದೆ ಪ್ರಕಾರ ಅಧಿಸೂಚಿತ ಕೃಷಿ ಉತ್ಪನ್ನಗಳ ಮಾರುಕಟ್ಟೆ ನಿಯಂತ್ರಣಕ್ಕಾಗಿ ಡೀಮ್ಡ್ ಮಾರುಕಟ್ಟೆ ಸ್ಥಾಪಿಸಲು ಅಥವಾ ಖಾಸಗಿ ಮಾರುಕಟ್ಟೆಗಳನ್ನು ಡೀಮ್ಡ್ ಮಾರುಕಟ್ಟೆ ಎಂದು ಘೋಷಿಸಲು ಈ ಮಸೂದೆ ಅನುಮತಿಸುತ್ತದೆ ಎಂದು ಕಾಂಗ್ರೆಸ್ ಸಚಿವರೊಬ್ಬರು ತಿಳಿಸಿದ್ದಾರೆ.
  • ಅಧಿಸೂಚಿತ ಕೃಷಿ ಉತ್ಪನ್ನಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಸಂಬಂಧಿಸಿದ ಉತ್ಪನ್ನಗಳ ಉತ್ಪಾದನೆಗೆ ಆದೇಶಿಸಲು ಒಂದು ಪ್ರಾಧಿಕಾರ ಅಥವಾ ಅಧಿಸೂಚಿತ ಅಧಿಕಾರಿಗಳನ್ನೊಳಗೊಂಡ ಮಾರುಕಟ್ಟೆ ಸಮಿತಿಯ ಅಥವಾ ಮಂಡಳಿಯ ಕಾರ್ಯದರ್ಶಿ ಅಥವಾ ಯಾವುದೇ ಉದ್ಯೋಗಿಗೆ ಅಧಿಕಾರವನ್ನು ಖಾತರಿಪಡಿಸುವುದನ್ನು ಈ ಮಸೂದೆ ಹೇಳುತ್ತದೆ.
  • ಈ ಅಧಿಕಾರಿಗಳು ಗೋದಾಮುಗಳು ಮತ್ತು ವಾಹನಗಳನ್ನು ಪರಿಶೀಲಿಸುವ ಹಕ್ಕಿದೆ ಮತ್ತು ಅಗತ್ಯವಿದ್ದರೆ ಅವುಗಳನ್ನು ಸೀಜ್​ ಮಾಡಬಹುದು. ಅಧಿಸೂಚಿತ ಕೃಷಿ ಉತ್ಪನ್ನಗಳ ಎಲೆಕ್ಟ್ರಾನಿಕ್ ವ್ಯಾಪಾರ ವೇದಿಕೆಯ ಮಾರಾಟವನ್ನು ಸ್ಥಾಪಿಸಲು ಮಸೂದೆ ರಾಜ್ಯ ಸರ್ಕಾರಕ್ಕೆ ಅವಕಾಶ ನೀಡುತ್ತದೆ.
  • ಕೃಷಿ ಸಚಿವ ರವೀಂದ್ರ ಚೌಬೆ ಮಾತನಾಡಿ, ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಲು ಅನುಕೂಲವಾಗುವಂತೆ ರಾಜ್ಯದ ಮಾರುಕಟ್ಟೆ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ, ಮಸೂದೆಯು ಯಾವುದೇ ಕೇಂದ್ರ ಕಾನೂನುಗಳನ್ನು ಉಲ್ಲಂಘಿಸಿಲ್ಲ, ಇದರಿಂದಾಗಿ ಕೇಂದ್ರ ಸರ್ಕಾರದೊಂದಿಗೆ ಮುಖಾಮುಖಿಯಾಗುವುದನ್ನು ತಪ್ಪಿಸಬಹುದು. "ರಾಜ್ಯದಲ್ಲಿ ಶೇಕಡಾ 80 ರಷ್ಟು ರೈತರು ಸಣ್ಣ ಮತ್ತು ಅತಿಸಣ್ಣ ಕೃಷಿಕರಿದ್ದಾರೆ." ಅವರಿಗೆ ಧಾನ್ಯಗಳನ್ನು ಬೆಲೆ ಹೆಚ್ಚಳವಾಗುವ ತನಕ ಧಾನ್ಯಗಳನ್ನು ಸಂಗ್ರಹಿಸುವ ಸಾಮರ್ಥ್ಯ ಇಲ್ಲ. ಹೀಗಾಗಿ ಚೌಕಾಶಿ ಇಲ್ಲದೇ ನ್ಯಾಯಯುತ ಬೆಲೆಗೆ ಮಾರಾಟಮಾಡಲು ಅವರಿಗೆ ಅನುಕೂಲವಾಗುವಂತೆ 'ಡೀಮ್ಡ್ ಮಂಡಿ' ಮತ್ತು ಎಲೆಕ್ಟ್ರಾನಿಕ್ ವ್ಯಾಪಾರ ವೇದಿಕೆಯನ್ನು ಸ್ಥಾಪಿಸುವುದು ಅಗತ್ಯವಾಗಿತ್ತು" ಎಂದು ಹೇಳಿದ್ರು.

ಕೃಷಿ ಕಾನೂನು ವಿರುದ್ಧ ನಿರ್ಣಯ ಅಂಗೀಕರಿಸಿದ 4ನೇ ರಾಜ್ಯ ನವದೆಹಲಿ :

ಎಎಪಿ ಮುಖಂಡ ಮತ್ತು ದೆಹಲಿ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಅವರು ಕಾನೂನುಗಳನ್ನು ರದ್ದುಗೊಳಿಸುವ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿದರು. ಈ ವಿಧಾನಸಭೆ ಕೇಂದ್ರದ ಎಲ್ಲಾ ನೂತನ ಮೂರು ಕೃಷಿ ಕಾಯಿದೆಗಳನ್ನು ತಿರಸ್ಕರಿಸುತ್ತದೆ ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ, ಸಂಸತ್ತು ಅಂಗೀಕರಿಸಿದ ಕೃಷಿ ಕಾನೂನುಗಳು ಮತ್ತು ಎಂಎಸ್​ಪಿಯಲ್ಲಿ ಎಲ್ಲಾ ಬೆಳೆಗಳನ್ನು ಸರ್ಕಾರ ಖರೀದಿಸುವ ಖಾತರಿ ನೀಡುವ ಪ್ರತ್ಯೇಕ ಮಸೂದೆಯನ್ನು ತರುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡುತ್ತದೆ ಎಂದು ಗಹ್ಲೋಟ್ ನಿರ್ಣಯವನ್ನು ಓದಿದರು.

ಕೇಂದ್ರದ ಕೃಷಿ ಕಾನೂನು ವಿರುದ್ಧ ನಿರ್ಣಯ ಅಂಗೀಕರಿಸಿದ 5ನೇ ರಾಜ್ಯ ಕೇರಳ :

ಕಾರ್ಪೊರೇಟ್​​ಗಳೆದುರು ಚೌಕಾಸಿ ಮಾಡುವ ರೈತರ ಶಕ್ತಿಯನ್ನೇ ಈ ಕಾಯ್ದೆಗಳು ದುರ್ಬಲಗೊಳಿಸುತ್ತವೆ ಎಂದು ಕೇರಳ ಸರ್ಕಾರದ ನಿರ್ಣಯ ಹೇಳುತ್ತದೆ.

"ರೈತರ ರಕ್ಷಣೆಯನ್ನು ಖಾತ್ರಿಪಡಿಸಿಕೊಳ್ಳಲು ಕೇಂದ್ರದ ಈ ಕಾನೂನುಗಳಲ್ಲಿ ಅವಕಾಶವಿಲ್ಲ. ಇದು ಆಹಾರ ಮತ್ತು ಆಹಾರ ಸುರಕ್ಷತೆಯ ವಿತರಣೆಯನ್ನು ಅಪಾಯದಂಚಿಗೆ ತಳ್ಳುತ್ತದೆ ಮತ್ತು ಸಂಗ್ರಹಣೆ ಮತ್ತು ಕಾಳಸಂತೆ ಮಾರಾಟದ ಹೆಚ್ಚಳಕ್ಕೆ ಕಾರಣವಾಗುತ್ತದೆ” ಎಂದು ನಿರ್ಣಯ ತಿಳಿಸಿದೆ. ಅಲ್ಲದೇ, ಸಂವಿಧಾನದ ಏಳನೇ ಅನುಸೂಚಿಯಲ್ಲಿ ಕೃಷಿ ರಾಜ್ಯ ವಿಷಯವಾಗಿದೆ.

ರಾಜ್ಯಗಳ ಮೇಲೆ ಗಂಭೀರವಾದ ಪರಿಣಾಮ ಬೀರುವ ವಿಷಯಗಳನ್ನು, ಮಸೂದೆಗಳನ್ನು ಅಂತರ್​-ರಾಜ್ಯ ಪರಿಷತ್ತಿನ ಸಭೆಯಲ್ಲಿ ಚರ್ಚಿಸಬೇಕಾಗಿತ್ತು. ಮಸೂದೆಗಳನ್ನು ಸಂಸತ್ತಿನ ಸ್ಥಾಯಿ ಸಮಿತಿಗೆ ಉಲ್ಲೇಖಿಸದೆ ತರಾತುರಿಯಲ್ಲಿ ಅಂಗೀಕರಿಸುವುದು ಗಂಭೀರ ವಿಷಯವಾಗಿದೆ” ಎಂದು ನಿರ್ಣಯ ತಿಳಿಸಿದೆ.

ಕೇಂದ್ರದ ಕೃಷಿ ಕಾನೂನು ವಿರುದ್ಧ ನಿರ್ಣಯ ಅಂಗೀಕರಿಸಿದ 6ನೇ ರಾಜ್ಯ ಪಶ್ಚಿಮ ಬಂಗಾಳ:

  • ಪಶ್ಚಿಮ ಬಂಗಾಳ ವಿಧಾನಸಭೆಯು ಕೇಂದ್ರದ ನೂತನ ಮೂರು ಕೃಷಿ ಕಾನೂನುಗಳ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ ಆರನೇ ರಾಜ್ಯವಾಗಿದೆ.
  • ಕೇಂದ್ರದ ಕಾನೂನುಗಳ ವಿರುದ್ಧದ ನಿರ್ಣಯವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಧಾನಸಭೆಯಲ್ಲಿ ಮಂಡನೆ ಮಾಡಿದರು.

ತುಲನಾತ್ಮಕ ವಿಶ್ಲೇಷಣೆ:

1. ಪಂಜಾಬ್ ಮತ್ತು ರಾಜಸ್ಥಾನವು ಅಂಗೀಕರಿಸಿದ ಕೇಂದ್ರದ ಕೃಷಿ ಕಾನೂನು ವಿರುದ್ಧ ನಿರ್ಣಯಗಳು ಒಂದಕ್ಕೊಂದು ಹೋಲುತ್ತದೆ. ಎಂಎಸ್​ಪಿಗಿಂತ ಕೆಳಗಿರುವ ಮತ್ತು ರೈತರಿಗೆ ಕಿರುಕುಳ ನೀಡಿದ್ದಕ್ಕಾಗಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸುವ ನಿಯಮ ಒಂದೇ ಆಗಿರುತ್ತದೆ.

ಆದಾಗ್ಯೂ ಜೈಲಿನ ಅವಧಿ ಮತ್ತು ದಂಡದ ಮೊತ್ತದಲ್ಲಿ ವ್ಯತ್ಯಾಸವಿದೆ. ಬೆಳೆಗಳ ಸಂಗ್ರಹಣೆಯನ್ನು ತಪ್ಪಿಸಲು ಬೆಳೆ ಸಂಸ್ಕರಣಾ ಗೊಡೌನ್‌ಗಳಲ್ಲಿ ಭದ್ರತಾ ಷರತ್ತನ್ನು ಎರಡೂ ರಾಜ್ಯಗಳು ತಮ್ಮ ಬಿಲ್​ನಲ್ಲಿ ಸೇರಿಸಿವೆ.. ಇನ್ನು ಪಂಜಾಬ್ ಹೆಚ್ಚುವರಿಯಾಗಿ ನಾಗರಿಕ ಕಾರ್ಯವಿಧಾನದ ಸಂಹಿತೆ (ಪಂಜಾಬ್ ತಿದ್ದುಪಡಿ) ಯನ್ನು ಜಾರಿಗೊಳಿಸಿದೆ.

2. ಪಂಜಾಬ್ ಮತ್ತು ರಾಜಸ್ಥಾನಕ್ಕಿಂತ ಭಿನ್ನವಾಗಿ, ಮಾರುಕಟ್ಟೆಯ ಬೆಲೆಗಳ ಏರಿಳಿತದಿಂದ ರೈತರನ್ನು ರಕ್ಷಿಸಲು ಛತ್ತೀಸ್​ಗಢ ಪ್ರಯತ್ನಿಸುತ್ತಿದೆ. ಅಧಿಸೂಚಿತ ಕೃಷಿ ಉತ್ಪನ್ನಗಳ ಮಾರಾಟವನ್ನು ನಿಯಂತ್ರಿಸಲು ಡೀಮ್ಡ್ ಮಾರುಕಟ್ಟೆ ಅನ್ನು ಸ್ಥಾಪಿಸಲು ಅಥವಾ ಖಾಸಗಿ ಮಾರುಕಟ್ಟೆಗಳನ್ನು ಡೀಮ್ಡ್ ಮಂಡಿಸ್ ಎಂದು ಘೋಷಿಸಲು ಮಸೂದೆ ಅನುಮತಿಸುತ್ತದೆ.

3. ಪಂಜಾಬ್, ರಾಜಸ್ಥಾನ ಮತ್ತು ಛತ್ತೀಸ್​ಗೇ ಹೊರತುಪಡಿಸಿ, ಉಳಿದ ಮೂರು ರಾಜ್ಯಗಳಾದ ದೆಹಲಿ, ಕೇರಳ ಮತ್ತು ಪಶ್ಚಿಮ ಬಂಗಾಳ ಕೇಂದ್ರದ ಕಾನೂನುಗಳನ್ನು ರದ್ದುಗೊಳಿಸುವ ನಿರ್ಣಯವನ್ನು ಅಂಗೀಕರಿಸಿವೆ. ಮತ್ತು ಆಹಾರ ಸುರಕ್ಷತೆ, ಸಾಂವಿಧಾನಿಕ ಸಿಂಧುತ್ವ ಮತ್ತು ರೈತರ ಮೂಲಭೂತ ಹಕ್ಕು ಗಳ ರಕ್ಷಣೆಯನ್ನು ಬೆಂಬಲಿಸುತ್ತವೆ.

ಕೇಂದ್ರದ ಕೃಷಿ ಕಾನೂನು ವಿರುದ್ಧ ನಿರ್ಣಯ ಅಂಗೀಕರಿಸಿದ ರಾಜ್ಯಗಳುಎಂಎಸ್​ಪಿಗಿಂತ ಕಡಿಮೆ ಬೆಲೆಗೆ ಮಾರಲು ಒತ್ತಾಯಿಸಿದರೆ ವಿಧಿಸಬಹುದಾದ ಶಿಕ್ಷೆ ಮತ್ತು ದಂಡಮಾರುಕಟ್ಟೆ ಶುಲ್ಕ ಅಗತ್ಯ ವಸ್ತುಗಳ ನಿಯಂತ್ರಣಸಿವಿಲ್ ನ್ಯಾಯಾಲಯಗಳಿಗಿರುವ ಅಧಿಕಾರ
ಪಂಜಾಬ್​

ಪಂಜಾಬ್‌ನಲ್ಲಿ, ಯಾವುದೇ ಖರೀದಿದಾರನು ಒಬ್ಬ ರೈತನನ್ನು ಗೋಧಿ ಅಥವಾ ಭತ್ತವನ್ನು

ಎಂಎಸ್‌ಪಿಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲು ಒತ್ತಾಯಿಸಿದರೆ, ಅವನಿಗೆ

ಕನಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ.

ಆಯಾ ರಾಜ್ಯ ಎಪಿಎಂಸಿ ಕಾಯಿದೆಗಳ ಅಡಿಯಲ್ಲಿ ಸ್ಥಾಪಿಸಲಾದ ಅಥವಾ

ಸೂಚಿಸಲಾದ ಮಾರುಕಟ್ಟೆಗಳ ಹೊರಗಿನ ವ್ಯಾಪಾರಕ್ಕಾಗಿ ಶುಲ್ಕವನ್ನು ವಿಧಿಸಲು

(ಖಾಸಗಿ ವ್ಯಾಪಾರಿಗಳು ಮತ್ತು ಎಲೆಕ್ಟ್ರಾನಿಕ್ ವ್ಯಾಪಾರ ವೇದಿಕೆಗಳಲ್ಲಿ) ರಾಜ್ಯ ಮಸೂದೆಗಳು

ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುತ್ತವೆ.ಸಂಗ್ರಹಿಸಿದ ಇಂತಹ ಶುಲ್ಕಗಳನ್ನು ಸಣ್ಣ ಮತ್ತು ಅಲ್ಪ ರೈತರ ಕಲ್ಯಾಣಕ್ಕಾಗಿ ಬಳಸಿಕೊಳ್ಳಲಾಗುತ್ತದೆ.

ರಾಜ್ಯ ಸರ್ಕಾರವು ಈ ಕೆಳಗಿನ ಅಧಿಕಾರವನ್ನು ಹೊಂದಿರುತ್ತದೆ ಎಂದು ರಾಜ್ಯ ಮಸೂದೆಗಳು ಹೇಳುತ್ತವೆ.

(i) ಅಗತ್ಯ ವಸ್ತುಗಳ ಉತ್ಪಾದನೆ, ಪೂರೈಕೆ ಮತ್ತು ವಿತರಣೆಯನ್ನು ನಿಯಂತ್ರಿಸುವುದು ಮತ್ತು

(ii) ಅಸಾಧಾರಣ ಸಂದರ್ಭಗಳಲ್ಲಿ ಸ್ಟಾಕ್ ಮಿತಿಗಳನ್ನು ಹೇರುವುದು. ಅಂತಹ ಸಂದರ್ಭಗಳು ಇವುಗಳನ್ನು ಒಳಗೊಂಡಿರಬಹುದು:

(i) ಕ್ಷಾಮ, (ii) ಬೆಲೆ ಏರಿಕೆ, (iii) ನೈಸರ್ಗಿಕ ವಿಪತ್ತು, ಅಥವಾ (iv) ಬೇರೆ ಯಾವುದೇ ಪರಿಸ್ಥಿತಿ.

ಸಂಗ್ರಹಣೆಯನ್ನು ತಪ್ಪಿಸಲು ಶೇಖರಣಾ ಗೋಡೌನ್‌ಗಳಲ್ಲಿ ಭದ್ರತಾ ಚೀಕ್‌ನ ಷರತ್ತನ್ನು ಸೇರಿಸಲಾಗುತ್ತದೆ

ಪಂಜಾಬ್ ಮಸೂದೆ ರೈತರಿಗೆ ಕೇಂದ್ರೀಯ ಕಾಯಿದೆಗಳ ಅಡಿಯಲ್ಲಿ ಲಭ್ಯವಿರುವ ಸಿವಿಲ್ ನ್ಯಾಯಾಲಯಗಳನ್ನು ಸಂಪರ್ಕಿಸಲು ಅಥವಾ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಇತರ ಪರಿಹಾರಗಳನ್ನು ಪಡೆಯಲು ಅನುಮತಿಸುತ್ತದೆ.
ರಾಜಸ್ಥಾನ

ರಾಜಸ್ಥಾನದಲ್ಲಿ, ಖರೀದಿದಾರನು ಎಂಎಸ್​​ಪಿಗಿಂತ ಕಡಿಮೆ ಬೆಲೆಗೆ ಕೃಷಿ ಒಪ್ಪಂದಕ್ಕೆ ಬರಲು ರೈತನನ್ನು ಒತ್ತಾಯಿಸಿದರೆ,

ಖರೀದಿದಾರನಿಗೆ ಮೂರು ಮತ್ತು ಏಳು ವರ್ಷಗಳ ನಡುವೆ ಜೈಲು ಶಿಕ್ಷೆ ಅಥವಾ ಐದು ಲಕ್ಷ ರೂಪಾಯಿಗಳವರೆಗೆ ದಂಡ ಅಥವಾ ಈ ಎರಡೂ ಶಿಕ್ಷೆಗಳನ್ನು ವಿಧಿಸಬಹುದು ಎಂಬ ಅಂಶವನ್ನು ಮಸೂದೆ ಒಳಗೊಂಡಿದೆ.

ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುತ್ತವೆ. ಸಂಗ್ರಹಿಸಿದ ಇಂತಹ ಶುಲ್ಕಗಳನ್ನು ಸಣ್ಣ ಮತ್ತು ಅಲ್ಪ

ಎಪಿಎಂಸಿಗಳನ್ನು ನಡೆಸಲು ಮತ್ತು ರಾಜಸ್ಥಾನದ ರೈತರ ಕಲ್ಯಾಣಕ್ಕಾಗಿ ಬಳಸಿಕೊಳ್ಳಲಾಗುತ್ತದೆ.

ವಿವಾದಗಳ ಕುರಿತು ಸಿವಿಲ್ ನ್ಯಾಯಾಲಯಗಳ ವ್ಯಾಪ್ತಿಯು ರಾಜ್ಯ ಎಪಿಎಂಸಿ ಕಾಯ್ದೆ ಮತ್ತು ಅದರ ಅಡಿಯಲ್ಲಿರುವ ನಿಯಮಗಳ ಪ್ರಕಾರ ಇರುತ್ತದೆ ಎಂದು ರಾಜಸ್ಥಾನ್ ಮಸೂದೆ ಹೇಳುತ್ತದೆ.

ಪ್ರಸ್ತುತ, ರಾಜ್ಯ ಎಪಿಎಂಸಿ ಕಾಯ್ದೆಯು ನಾಗರಿಕ ನ್ಯಾಯಾಲಯಗಳು ವ್ಯಾಪಾರ ಭತ್ಯೆ ಮತ್ತು ಗುತ್ತಿಗೆ ಕೃಷಿ ಒಪ್ಪಂದಗಳಿಗೆ ಸಂಬಂಧಿಸಿದ ವಿವಾದಗಳ ಬಗ್ಗೆ ತೀರ್ಪು ನೀಡುವುದನ್ನು ನಿಷೇಧಿಸುತ್ತದೆ.

ಛತ್ತೀಸ್​ಗಢಅಧಿಸೂಚಿತ ಕೃಷಿ ಉತ್ಪನ್ನಗಳ ಮಾರಾಟವನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ಡೀಮ್ಡ್ ಮಂಡಿಯನ್ನು ಸ್ಥಾಪಿಸಲು ಅಥವಾ ಖಾಸಗಿ ಮಾರುಕಟ್ಟೆಗಳನ್ನು ಡೀಮ್ಡ್ ಮಂಡಿಗಳು ಎಂದು ಘೋಷಿಸಲು ಅನುಮತಿಸುತ್ತದೆ. ಅಧಿಕಾರಿಗಳಿಗೆ ಗೋದಾಮುಗಳು ಮತ್ತು ವಾಹನಗಳನ್ನು ಪರಿಶೀಲಿಸುವ ಹಕ್ಕಿದೆ ಮತ್ತು ಅಗತ್ಯವಿದ್ದರೆ ಮತ್ತು ಅವುಗಳನ್ನು ಸೀಜ್​ ಮಾಡಬಹುದು
ದೆಹಲಿಆಹಾರ ಭದ್ರತೆ, ಸಾಂವಿಧಾನಿಕ ಸಿಂಧುತ್ವ ಮತ್ತು ರೈತರ ಮೂಲಭೂತ ಹಕ್ಕು ಮತ್ತು ಆಸಕ್ತಿಯನ್ನು ಉಲ್ಲೇಖಿಸಿ ಅವರು ಈ ಕಾಯ್ದೆಯನ್ನು ರದ್ದುಮಾಡಿ ಎಂಎಸ್‌ಪಿಯನ್ನು ಕಾನೂನುಬದ್ಧಗೊಳಿಸುವ ನಿರ್ಣಯವನ್ನು ಅಂಗೀಕರಿಸಿದೆ
ಕೇರಳಆಹಾರ ಭದ್ರತೆ, ಸಾಂವಿಧಾನಿಕ ಸಿಂಧುತ್ವ ಮತ್ತು ರೈತರ ಮೂಲಭೂತ ಹಕ್ಕು ಮತ್ತು ಆಸಕ್ತಿಯನ್ನು ಉಲ್ಲೇಖಿಸಿ ಅವರು ಈ ಕಾಯ್ದೆಯನ್ನು ರದ್ದುಮಾಡಿ ಎಂಎಸ್‌ಪಿಯನ್ನು ಕಾನೂನುಬದ್ಧಗೊಳಿಸುವ ನಿರ್ಣಯವನ್ನು ಅಂಗೀಕರಿಸಿದರು.
ಪಶ್ವಿಮ ಬಂಗಾಳಆಹಾರ ಭದ್ರತೆ, ಸಾಂವಿಧಾನಿಕ ಸಿಂಧುತ್ವ ಮತ್ತು ರೈತರ ಮೂಲಭೂತ ಹಕ್ಕು ಮತ್ತು ಆಸಕ್ತಿಯನ್ನು ಉಲ್ಲೇಖಿಸಿ ಅವರು ಈ ಕಾಯ್ದೆಯನ್ನು ರದ್ದುಮಾಡಿ ಎಂಎಸ್‌ಪಿಯನ್ನು ಕಾನೂನುಬದ್ಧಗೊಳಿಸುವ ನಿರ್ಣಯವನ್ನು ಅಂಗೀಕರಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.