ಲಖಿಂಪುರ ಖೇರಿ(ಉತ್ತರ ಪ್ರದೇಶ): ಅಪಘಾತದಲ್ಲಿ ಗಾಯಗೊಂಡವರ ಸ್ಥಿತಿಗತಿ ತಿಳಿಯಲು ಲಖನೌ ಕಮಿಷನರ್ ರೋಷನ್ ಜೇಕಬ್ ಮೋತಿಪುರ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದರು. ಆಸ್ಪತ್ರೆಯಲ್ಲಿ 9 ವರ್ಷದ ಬಾಲಕನೊಬ್ಬ ನೋವಿನಿಂದ ನರಳುತ್ತಿರುವುದನ್ನು ಗಮನಿಸಿದ ಕಮಿಷನರ್ ರೋಷನ್ ಜೇಕಬ್ ಬಿಕ್ಕಿ ಬಿಕ್ಕಿ ಅತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಲಖಿಂಪುರ ಖೇರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡವರ ಸ್ಥಿತಿಗತಿ ತಿಳಿಯಲು ಕಮಿಷನರ್ ರೋಷನ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆದ್ರೆ ಇನ್ನೊಂದು ಪ್ರಕರಣದಲ್ಲಿ ಗಂಭೀರವಾಗಿ ಗಂಭೀರವಾಗಿ ಗಾಯಗೊಂಡ ಬಾಲಕನೊಬ್ಬ ಬೆಡ್ನಲ್ಲಿ ಬೆನ್ನುನೋವಿನಿಂದ ನರಳುತ್ತಿರುವುದನ್ನು ಗಮನಿಸಿ ವಿಚಾರಿಸಿದ್ದಾರೆ. ಈ ವೇಳೆ ಮಗು ಜೋರಾಗಿ ಅಳತೊಡಗಿತು. ತಾಯಿಯೂ ಸಹ ಬಿಕ್ಕಿ ಬಿಕ್ಕಿ ಅಳತೊಡಗಿದರು.
ಸೆಪ್ಟೆಂಬರ್ 26 ರಂದು ವಾಜಪೇಯಿ ಗ್ರಾಮದಲ್ಲಿ ಮಣ್ಣಿನ ಗೋಡೆ ಕುಸಿದು ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅಪರ ಜಿಲ್ಲಾಧಿಕಾರಿ ಆಯುಕ್ತರಿಗೆ ತಿಳಿಸಿದ್ದಾರೆ. ದುರಂತದಲ್ಲಿ ಮಗುವಿನ ಬೆನ್ನಿಗೆ ಬಲವಾಗಿ ಪೆಟ್ಟಾಗಿದ್ದು, ಅವನು ತನ್ನ ಹೊಟ್ಟೆಯ ಮೇಲೆ ಮಲಗಿರುತ್ತಾನೆ ಎಂದು ತಾಯಿ ಅಳತೊಡಗಿದ್ದಾರೆ. ಇದನ್ನು ಕಂಡ ಆಯುಕ್ತರಾದ ರೋಷನ್ ಜೇಕಬ್ ಅವರು ಕಣ್ಣೀರು ತಡೆಯಲಾಗದೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಬಳಿಕ ಕಮಿಷನರ್ ಎಡಿಎಂ ಸಂಜಯ್ ಕುಮಾರ್ ಸಿಂಗ್ ಅವರಿಗೆ ಮಗುವನ್ನು ಲಖನೌದ ಕೆಜಿಎಂಯು ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸುವಂತೆ ಸೂಚಿಸಿದರು. ರೆಡ್ ಕ್ರಾಸ್ ಸಂಸ್ಥೆಯೊಂದಿಗೆ ಮಾತನಾಡಿ ಕೂಡಲೇ ಈ ಮಗುವಿಗೆ ಆರ್ಥಿಕ ನೆರವು ನೀಡಬೇಕು ಎಂದು ಆಯುಕ್ತರು ಎಡಿಎಂಗೆ ತಿಳಿಸಿದರು.
ಈ ಬಾಲಕನಿಗೆ ಚಿಕಿತ್ಸೆ ನೀಡಲು ಸರ್ಕಾರಿ ನೌಕರರು ಕೂಡ ಜೊತೆಗಿದ್ದು, ಚಿಕಿತ್ಸೆ ಕೊಡಿಸುವುದಾಗಿ ರೋಷನ್ ಜೇಕಬ್ ಅಭಯ ನೀಡಿದ್ದಾರೆ. ಅಳುತ್ತಿದ್ದ ತಾಯಿ ಮತ್ತು ಮಗುವಿಗೆ ಆಯುಕ್ತರು ಸಮಾಧಾನ ಪಡಿಸಿ ಸೂಕ್ತ ಚಿಕಿತ್ಸೆ ಭರವಸೆ ನೀಡಿದರು.
ಓದಿ: ಬಸ್-ಟ್ರಕ್ ಮಧ್ಯೆ ಮುಖಾಮುಖಿ ಡಿಕ್ಕಿ.. ಭೀಕರ ರಸ್ತೆ ಅಪಘಾತದಲ್ಲಿ ಎಂಟು ಜನ ಸಾವು