ಪಿಂಪ್ರಿ-ಚಿಂಚ್ವಾಡ್ (ಮಹಾರಾಷ್ಟ್ರ): ಕೈಗಾರಿಕಾ ನಗರ ಎಂದೇ ಪ್ರಸಿದ್ಧಿ ಪಡೆದಿರುವ ಮಹಾರಾಷ್ಟ್ರದ ಪಿಂಪ್ರಿ-ಚಿಂಚ್ವಾಡ್ ನಗರದಲ್ಲಿ ಅಪರಾಧ ಪ್ರಕರಣಗಳ ಪ್ರಮಾಣ ಹೆಚ್ಚುತ್ತಿದೆ. ಹೀಗಾಗಿ ಜನರು ದಿನಕ್ಕೆ ನೂರಾರು ದೂರುಗಳನ್ನು ಹೊತ್ತು ಪೊಲೀಸ್ ಠಾಣೆಗಳ ಮೆಟ್ಟಿಲೇರುತ್ತಿದ್ದಾರೆ.
ಜನರ ಸಮಸ್ಯೆಗಳಿಗೆ ಆರಕ್ಷಕರು ಸ್ಪಂದಿಸುತ್ತಾರೆಯೇ ಎಂದು ಪೊಲೀಸರ ಕಾರ್ಯಪ್ರವೃತ್ತಿ ಗಮನಿಸುವ ಸಲುವಾಗಿ ಪಿಂಪ್ರಿ-ಚಿಂಚ್ವಾಡ್ ಪೊಲೀಸ್ ಆಯುಕ್ತ ಕೃಷ್ಣ ಪ್ರಕಾಶ್ ಅವರು ಬುಧವಾರ ಸಾಮಾನ್ಯ ವ್ಯಕ್ತಿಯಂತೆ ವೇಷ ಧರಿಸಿದ್ದರು. ಹಳದಿ ಸಲ್ವಾರ್, ತಲೆಯ ಮೇಲೆ ವಿಗ್ ಹಾಕಿ, ಅದರ ಮೇಲೆ ಬಿಳಿ ಟೋಪಿ ಹಾಕಿ, ಗಡ್ಡ ಅಂಟಿಸಿಕೊಂಡು ಮಟನ್ ಅಂಗಡಿಯ ಚಾಚಾನಂತೆ ರೆಡಿಯಾಗಿ, ನಗರದ ಮೂರು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಬೆಡ್ ಹಂಚಿಕೆ ಸಂಬಂಧ ಐಎಎಸ್ ಅಧಿಕಾರಿ ಮೇಲೆ ಹಲ್ಲೆ ಕೇಸ್: ಎಫ್ಐಆರ್ ದಾಖಲು
ಮೊದಲು ಹಿಂಜೇವಾಡಿ ಪೊಲೀಸ್ ಠಾಣೆಗೆ ಭೇಟಿ ನೀಡಿ, ಕೆಲ ವ್ಯಕ್ತಿಗಳು ನನ್ನ ಹೆಂಡತಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು, ವಾಕಡ್ ಪೊಲೀಸ್ ಠಾಣೆಗೆ ತೆರಳಿ ಸರಗಳ್ಳತನದ ದೂರು ಹಾಗೂ ಪಿಂಪ್ರಿ ಪೊಲೀಸ್ ಠಾಣೆಗೆ ಹೋಗಿ ಆಂಬುಲೆನ್ಸ್ ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ.
ಎರಡು ಠಾಣೆಗಳಲ್ಲಿ ಪೊಲೀಸರ ವರ್ತನೆ, ಸ್ಪಂದನೆಯನ್ನು ಕಮಿಷನರ್ ಶ್ಲಾಘಿಸಿದ್ದಾರೆ. ಆದರೆ ಒಂದು ಠಾಣೆಯಲ್ಲಿ ಕೆಟ್ಟ ಅನುಭವವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.