ETV Bharat / bharat

ಗ್ಯಾನವಾಪಿ ಮಸೀದಿ ಕೋರ್ಟ್ ಸರ್ವೇ ಮಾಡಿದ ಅಧಿಕೃತ ವಿಡಿಯೋ ಲೀಕ್​ - ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ವಿಡಿಯೋ

Gyanvapi case.. ವಾರಣಾಸಿಯ ಗ್ಯಾನವಾಪಿ ಮಸೀದಿಯಲ್ಲಿ ಕೋರ್ಟ್​ ಆದೇಶದ ಮೇರೆಗೆ ನಡೆದ ಸರ್ವೇ ಕಾರ್ಯದ ಅಧಿಕೃತ ವಿಡಿಯೋ ಲೀಕ್​ ಆಗಿದೆ. ಇದರಲ್ಲಿ ಶಿವಲಿಂಗ ಪತ್ತೆಯಾದ ಜಾಗ ಕಾಣುತ್ತಿದೆ.

commission-proceedings-video-leak-in-gyanvapi-case
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ಜಾಗ
author img

By

Published : May 30, 2022, 9:41 PM IST

ವಾರಣಾಸಿ(ಉತ್ತರ ಪ್ರದೇಶ): ಗ್ಯಾನವಾಪಿ- ಶೃಂಗಾರ್​ ಗೌರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದ ಮೇರೆಗೆ ನಡೆದ ಮಸೀದಿ ಸರ್ವೇ ಕಾರ್ಯದ ವಿಡಿಯೋ ಲಭ್ಯವಾಗಿದೆ. ಮಸೀದಿಯ ಕೊಳದಲ್ಲಿ ಶಿವಲಿಂಗ ಪತ್ತೆಯಾದ ಜಾಗದಲ್ಲಿ ಸರ್ವೇ ನಡೆಸುವ ವೇಳೆ ಚಿತ್ರೀಕರಿಸಲಾದ ವಿಡಿಯೋ ಇದಾಗಿದೆ. ಇದನ್ನು ಸರ್ಕಾರಿ ನೇಮಿತ ಛಾಯಾಗ್ರಾಕರೇ ವಿಡಿಯೋ ಮಾಡಿದ್ದು, ಅದು ಸೋರಿಕೆಯಾಗಿದೆ.

ಗ್ಯಾನವಾಪಿ ಮಸೀದಿ ಕೋರ್ಟ್ ಸರ್ವೇ ಮಾಡಿದ ಅಧಿಕೃತ ವಿಡಿಯೋ ಲೀಕ್​

ವಿಡಿಯೋದಲ್ಲಿ ದೊಡ್ಡ ಕಲ್ಲಿನಂತಿರುವ ಶಿವಲಿಂಗ ಮಾದರಿಯನ್ನು ಸಹ ಕಾಣಬಹುದಾಗಿದೆ. ಈ ಬಗ್ಗೆ ಕೋರ್ಟ್​ನಲ್ಲಿ ವಿವಾದವಿದೆ. ಗ್ಯಾನವಾಪಿ ಮಸೀದಿಯಲ್ಲಿ ಪತ್ತೆಯಾದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಹಿಂದು ಮಹಿಳೆಯರು ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಕೋರ್ಟ್​ ವಿಚಾರಣೆ ನಡೆಸುತ್ತಿದೆ.

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ಜಾಗ
ಗ್ಯಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ಜಾಗ

ಇಂದು ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ವೇಳೆ ದೂರುದಾರ ಮಹಿಳೆಯರ ಮೆಮೋರಿ ಕಾರ್ಡ್​ನಲ್ಲಿ ಈ ವಿಡಿಯೋ ಲಭ್ಯವಾಗಿರುವುದು ಗಮನಾರ್ಹ ಸಂಗತಿಯಾಗಿದೆ. ಕೋರ್ಟ್​ಗೆ ಸಲ್ಲಿಸಲಾದ ಅಫಿಡವಿಟ್ ಪ್ರಕಾರ, ಮಸೀದಿ ಸರ್ವೇ ಮಾಡಿದ ಈ ವಿಡಿಯೋ ಈ ಮಹಿಳೆಯರನ್ನು ಹೊರತುಪಡಿಸಿ ಬೇರೆ ಯಾರಿಗೂ ತಲುಪಬಾರದು ಎಂದು ನಮೂದಿಸಿದ ಹೊರತಾಗಿಯೂ ವಿಡಿಯೋ ಲೀಕ್ ಆಗಿದೆ.

ಓದಿ: ಜ್ಞಾನವಾಪಿ ವಿವಾದ: ಮಸೀದಿ ಸಮಿತಿ ಅರ್ಜಿ ವಿಚಾರಣೆ ಜುಲೈ 4ಕ್ಕೆ ಮುಂದೂಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.