ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯ ಬೆನ್ನಲ್ಲೇ ಇದೀಗ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯೂ ಕಡಿಮೆಯಾಗಿದೆ. ಗಗನಕ್ಕೇರಿದ್ದ ಗ್ಯಾಸ್ ದರ ಇಂದಿನಿಂದ ಪ್ರತಿ ಸಿಲಿಂಡರ್‌ಗೆ 115.50 ರೂ.ಯಷ್ಟು ಕಡಿಮೆಯಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ 1,744 ರೂ. ಗೆ ಇಳಿದಿದೆ.
ತೈಲ ಮಾರುಕಟ್ಟೆ ಕಂಪನಿಗಳು ಕೊನೆಯ ಬಾರಿಗೆ ಮೇ ತಿಂಗಳಲ್ಲಿ ಬೆಲೆ ಏರಿಕೆ ಮಾಡಿದ್ದವು. ಇದಾದ ಬಳಿಕ ಇದೇ ಮೊದಲ ಬಾರಿಗೆ ತುಸು ನಿರಾಳತೆಯ ಸುದ್ದಿ ನೀಡಿವೆ. ತೈಲ ಮಾರುಕಟ್ಟೆ ಕಂಪನಿಗಳು ಸಾಮಾನ್ಯವಾಗಿ ಪ್ರತಿ ತಿಂಗಳ ಆರಂಭದಲ್ಲಿ ಮತ್ತು ಮಧ್ಯದಲ್ಲಿ ಎಲ್‌ಪಿಜಿ ಬೆಲೆ ಬದಲಾವಣೆಯನ್ನು ಪ್ರಕಟಿಸುತ್ತವೆ.
ಇದನ್ನೂ ಓದಿ: ಏಳು ತಿಂಗಳ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ 40 ಪೈಸೆ ಇಳಿಕೆದಿ: