ETV Bharat / bharat

ಕೇಂದ್ರದಿಂದ ಹೊಸ ವರ್ಷ- ಕ್ರಿಸ್ಮಸ್​ ಗಿಫ್ಟ್​: ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ 39.50 ರೂ ಇಳಿಕೆ

19 ಕೆಜಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ 39.50 ರೂ ಕಡಿತ ಇಳಿಕೆ ಮಾಡಲಾಗಿದೆ.

ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ 39.50 ರೂ ಇಳಿಕೆ

author img

By ETV Bharat Karnataka Team

Published : Dec 22, 2023, 2:18 PM IST

ನವದೆಹಲಿ: ಹೊಸ ವರ್ಷ ಮತ್ತು ಕ್ರಿಸ್ಮಸ್​ಗೂ ಮುನ್ನವೇ ಕೇಂದ್ರ ಸರ್ಕಾರ ಭಾರತೀಯರಿಗೆ ಬಂಪರ್​ ಗಿಫ್ಟ್​ ನೀಡಿದೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಶುಕ್ರವಾರ ತೈಲ ಮಾರುಕಟ್ಟೆ ಕಂಪನಿಗಳು ಕಡಿತಗೊಳಿಸಿವೆ. ಪ್ರತಿ ಸಿಲಿಂಡರ್ ಬೆಲೆ ರೂ.39.50 ಇಳಿಕೆಯಾಗಲಿದೆ. ಕಡಿಮೆಯಾದ ಹೊಸ ದರಗಳು ಇಂದಿನಿಂದ ಅಂದರೆ ಡಿಸೆಂಬರ್ 22, 2023 ರಿಂದ ಜಾರಿಗೆ ಬರಲಿವೆ. ಆದರೇ ಗೃಹ ಬಳಿಕೆಯ ಎಲ್​ಪಿಜಿ ಸಿಲೆಂಡರ್​ನ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಸದ್ಯ ಗೃಹ ಬಳಕ್ಕೆ ಸಿಲಿಂಡರ್ ಬೆಲೆಗಳು ಸ್ಥಿರವಾಗಿ ಮುಂದುವರೆದಿದೆ.

ಈ ಹಿಂದೆ ವಾಣಿಜ್ಯ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1796.50 ರೂ., ಮುಂಬೈನಲ್ಲಿ 1749 ರೂ., ಕೋಲ್ಕತ್ತಾದಲ್ಲಿ 1908 ರೂ. ಮತ್ತು ಚೆನ್ನೈನಲ್ಲಿ 1968.50 ರೂ. ಇತ್ತು. ಇದೀಗಾ 39.50 ರೂಪಾಯಿಗಳ ಬೆಲೆ ಇಳಿಕೆಯ ನಂತರ, ಈಗ ಕೋಲ್ಕತ್ತಾದಲ್ಲಿ 1869 ರೂ, ಮುಂಬೈನಲ್ಲಿ 1710 ರೂ ಮತ್ತು ಚೆನ್ನೈನಲ್ಲಿ 1929.50 ರೂಗೆ ಲಭ್ಯವಾಗಲಿದೆ.

ಇದಕ್ಕೂ ಮುನ್ನ ಡಿಸೆಂಬರ್ 1 ರಂದು 19 ಕೆಜಿ ವಾಣಿಜ್ಯ ಎಲ್​ಪಿಜಿ ಸಿಲಿಂಡರ್ ಬೆಲೆಯನ್ನು 21 ರೂ ನಷ್ಟು ಹೆಚ್ಚಳ ಮಾಡಲಾಗಿತ್ತು. ಇದಕ್ಕೂ ಮೊದಲು ನ.16ರಂದು 57 ರೂ.ಗಳ ರಿಯಾಯಿತಿ ನೀಡಲಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಪ್ರತಿ ತಿಂಗಳು ನಿರಂತರವಾಗಿ ಏರಿಳಿತಗೊಳ್ಳುತ್ತಿದೆ.

ಗೃಹ ಬಳಕೆ ಸಿಲಿಂಡರ್​ಗಳ ದರದಲ್ಲಿ ಬದಲಾವಣೆ ಇಲ್ಲ: ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಈ ವರ್ಷದ ಆಗಸ್ಟ್‌ನಿಂದ ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಕಳೆದ ಬಾರಿ ಆಗಸ್ಟ್ 30 ರಂದು ಕೇಂದ್ರ ಸರ್ಕಾರ ಗೃಹ ಬಳಕೆ ಸಿಲಿಂಡರ್​ಗಳಿಗೆ ರೂ. 200ರಷ್ಟು ಕಡಿತಗೊಳಿಸಿತ್ತು. ದೆಹಲಿಯಲ್ಲಿ ಪ್ರಸ್ತುತ LPG ಸಿಲಿಂಡರ್ ಬೆಲೆಗಳು ರೂ. 903 ಇದ್ದರೆ, ಕೋಲ್ಕತ್ತಾದಲ್ಲಿ ರೂ. 929, ಮುಂಬೈ ರೂ. 902.50. ಹೈದರಾಬಾದ್‌ನಲ್ಲಿ 14.2 ಕೆಜಿ ಗೃಹಬಳಕೆಯ ಸಿಲಿಂಡರ್ ದರ ರೂ. 955 ಆಗಿದೆ.

ಸರ್ಕಾರಿ ತೈಲ ಕಂಪನಿಗಳಿಂದ ಬೆಲೆ ನಿರ್ಧಾರ: ದೇಶದಲ್ಲಿ ಸರ್ಕಾರಿ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಪ್ರತಿ ತಿಂಗಳ 1ನೇ ತಾರೀಖಿನಂದು ಅಡುಗೆ ಅನಿಲದ ಬೆಲೆಗಳನ್ನು ನಿರ್ಧರಿಸುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಅನಿಲ ಬೆಲೆಯನ್ನು ಪರಿಗಣಿಸಿ ಈ ಬೆಲೆಯನ್ನು ನಿರ್ಧರಿಸಲಾಗುತ್ತದೆ.

ಇದನ್ನೂ ಓದಿ: ಬಡ್ಡಿದರದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡ ಯುರೋಪಿಯನ್​ ಸೆಂಟ್ರಲ್​ ಬ್ಯಾಂಕ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.