ನವದೆಹಲಿ: ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಿಂದ ಆನ್‌ಲೈನ್ ಮೂಲಕ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ ಪಿಸಿಸಿಗಳಿಗೆ ಬುಧವಾರದಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.
ಭಾರತೀಯ ಅಂಚೆ ಇಲಾಖೆಯ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ಪಿಸಿಸಿ ಅರ್ಜಿ ಸೌಲಭ್ಯವನ್ನು ಇನ್ನಷ್ಟು ಸರಳಗೊಳಿಸಲಾಗಿದೆ. ಸೆಪ್ಟೆಂಬರ್ 28 ರಿಂದ ಎಲ್ಲಾ ಪಿಒಪಿಎಸ್‌ಕೆಗಳಲ್ಲಿ ಈ ಸೌಲಭ್ಯ ಲಭ್ಯವಿರುತ್ತದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
28 ಸೆಪ್ಟೆಂಬರ್ 2022 ಬುಧವಾರದಿಂದ ಭಾರತದಾದ್ಯಂತ ಎಲ್ಲಾ ಆನ್‌ಲೈನ್ POPSK ಗಳಲ್ಲಿ PCC ಸೇವೆಗಳಿಗೆ ಅರ್ಜಿ ಸಲ್ಲಿಸುವ ಸೌಲಭ್ಯ ಲಭ್ಯವಾಗಲಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಈ PCC ಅಪ್ಲಿಕೇಶನ್ ಸೌಲಭ್ಯವನ್ನು POPSK ಗಳಿಗೆ ವಿಸ್ತರಿಸುವಲ್ಲಿ ಸಚಿವಾಲಯವು ತೆಗೆದುಕೊಂಡ ಕ್ರಮವು ವಿದೇಶದಲ್ಲಿ ಉದ್ಯೋಗವನ್ನು ಬಯಸುವ ಭಾರತೀಯ ನಾಗರಿಕರಿಗೆ ಸಹಾಯ ಮಾಡುತ್ತದೆ.
ಅಲ್ಲದೇ ಶಿಕ್ಷಣ, ದೀರ್ಘಾವಧಿಯ ವೀಸಾ, ವಲಸೆ ಇತ್ಯಾದಿಗಳಂತಹ ಇತರ PCC ಅವಶ್ಯಕತೆಗಳ ಬೇಡಿಕೆಯನ್ನು ಪೂರೈಸುತ್ತದೆ ಎಂದು ವಿದೇಶಾಂಗ ಇಲಾಖೆ ನೀಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿ:ಅಪರೂಪದ ಚಿಟ್ಟೆ ಅಟ್ಲಾಸ್ ಬಿಹಾರದಲ್ಲಿ ಪತ್ತೆ.. ವನದೇವಿಯೆಂದು ಪೂಜೆ ಮಾಡಿದ ಜನರು