ಕೊಟ್ಟಾಯಂ(ಕೇರಳ): ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಸಹಪಾಠಿ ಕಾಲೇಜು ಆವರಣದಲ್ಲಿಯೇ ಬರ್ಬರವಾಗಿ ಕೊಂದಿರುವ ದುರ್ಘಟನೆ ಕೇರಳದ ಕೊಟ್ಟಾಯಂನಲ್ಲಿ ಶುಕ್ರವಾರ ನಡೆದಿದೆ.
ವೈಕಂನ ತಲೆಯೋಳಪರಂಬು ನಿವಾಸಿಯಾದ ವಿದ್ಯಾರ್ಥಿನಿ ನಿತಿನಮೋಲ್ (22) ಕೊಲೆಯಾದ ವಿದ್ಯಾರ್ಥಿನಿಯಾಗಿದ್ದು, ಕೊಟ್ಟಾಯಂನ ಸೇಂಟ್ ಥಾಮಸ್ ಕಾಲೇಜು ಕ್ಯಾಂಪಸ್ನಲ್ಲಿ ಮೂರನೇ ವರ್ಷದ BVOC (Bachelor of Vocation) ವ್ಯಾಸಂಗ ಮಾಡುತ್ತಿದ್ದಳು.
ಕೂತಟ್ಟುಕುಲಂನ ಉಪ್ಪಾಣಿ ನಿವಾಸಿಯಾದ ಅಭಿಷೇಕ್ ಬೈಜು ಎಂಬಾತನ ಮೇಲೆ ಕೊಲೆ ಆರೋಪವಿದ್ದು, ಪರೀಕ್ಷಾ ಕೊಠಡಿಗೆ ಬರುವ ವೇಳೆ ನಿತಿನಮೋಲ್ ತಲೆ ಕಡಿದು ಅಭಿಷೇಕ್ ಬೈಜು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರು ಅಭಿಷೇಕ್ ಬೈಜುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣ: ತಂದೆ ಪ್ರಭು ಮಾದಪ್ಪ ಹೇಳಿದ್ದೇನು?