ETV Bharat / bharat

"ನನ್ನ ಆ ಆಸೆ ಈಡೇರಿಸಿದ್ರೆ, ಪಾಸಿಂಗ್​ ಪ್ರಮಾಣ ಪತ್ರ ನೀಡುವೆ"..ವಿದ್ಯಾರ್ಥಿನಿಗೆ ಪ್ರಾಂಶುಪಾಲನ ಕಿರುಕುಳ! - ಲೈಂಗಿಕ ಕಿರುಕುಳ ಆರೋಪ

ದೈಹಿಕವಾಗಿ ತನ್ನೊಂದಿಗೆ ಸಹಕರಿಸಿದಾಗ ಮಾತ್ರ ಪಾಸ್​ ಆಗಿರುವ​ ಪ್ರಮಾಣ ಪತ್ರ ನೀಡುವುದಾಗಿ ಕಾಲೇಜ್​ ಪ್ರಾಂಶುಪಾಲನೊಬ್ಬ ವಿದ್ಯಾರ್ಥಿನಿಗೆ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

College Principal
College Principal
author img

By

Published : Aug 2, 2021, 10:50 PM IST

ವಿಶಾಖಪಟ್ಟಣಂ(ಆಂಧ್ರಪ್ರದೇಶ): 21 ವರ್ಷದ ನರ್ಸಿಂಗ್​ ವಿದ್ಯಾರ್ಥಿನಿಯೊಬ್ಬಳು ಕಾಲೇಜ್​​ ಪ್ರಾಂಶುಪಾಲರೊಬ್ಬರ ವಿರುದ್ಧ ಗಂಭೀರ ಪ್ರಕರಣ ದಾಖಲು ಮಾಡಿದ್ದು, ಆಂಧ್ರಪ್ರದೇಶದ ವಿಶಾಖಪಟ್ಟಣಂದ ಪೂರ್ವ ಗೋದಾವರಿಯಲ್ಲಿ ಈ ಘಟನೆ ನಡೆದಿದೆ. ಜುಲೈ 31ರಂದು ವಿದ್ಯಾರ್ಥಿನಿ ಪೊಲೀಸ್​ ಠಾಣೆ ಮೆಟ್ಟಲೇರಿ ದೂರು ದಾಖಲಿಸಿದ್ದಾಳೆ.

ಆಂಧ್ರಪ್ರದೇಶದ ರಂಪಚೋಡವರಂನ ವಿದ್ಯಾರ್ಥಿನಿ ಕಳೆದ ಕೆಲ ದಿನಗಳಿಂದ ಕಾಲೇಜ್​ ಪ್ರಾಂಶುಪಾಲರಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸಿದ್ದಾಳೆ. ಕಾಲೇಜ್​ನಲ್ಲಿ ಉತ್ತೀರ್ಣ ಆಗಿರುವ ಪ್ರಮಾಣ ಪತ್ರ ಬೇಕಾದರೆ ತನ್ನ ಲೈಂಗಿಕ ಬಯಕೆ ಪೂರೈಸುವಂತೆ ಕೇಳಿಕೊಳ್ಳುತ್ತಿದ್ದಾರೆಂದು ಆರೋಪ ಮಾಡಿದ್ದು, ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾಳೆ.

ಇದನ್ನೂ ಓದಿರಿ: Video ವೈರಲ್​​: ನಡುರಸ್ತೆಯಲ್ಲೇ ಕ್ಯಾಬ್​​ ಡ್ರೈವರ್​ ಮೇಲೆ ಹಲ್ಲೆ ನಡೆಸಿದ ಯುವತಿ!

ಆಂಧ್ರಪ್ರದೇಶದ ಕಾಕಿನಾಡಿನ ಮದರ್ ಥೆರೇಸಾ ಕಾಲೇಜ್​ನಲ್ಲಿ ವಿದ್ಯಾರ್ಥಿನಿ ನರ್ಸಿಂಗ್​ ವ್ಯಾಸಂಗ ಮುಗಿಸಿದ್ದು, ಇದೀಗ ಪ್ರಮಾಣ ಪತ್ರ ಪಡೆದುಕೊಳ್ಳಲು ಪ್ರಾಂಶುಪಾಲರು ಅಡ್ಡಿ ಪಡಿಸಿ, ತಮ್ಮ ಬಯಕೆ ಪೂರೈಸುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಕಾಲೇಜ್​ ಪ್ರಾಂಶುಪಾಲರಾಗಿರುವ ರಾವ್​ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ನಮಗೆ ಯಾವುದೇ ರೀತಿಯ ಮಾಹಿತಿ ಇಲ್ಲ ಎಂದು ನರ್ಸಿಂಗ್​ ಕಾಲೇಜ್​ನ ಸಿಬ್ಬಂದಿ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಅನೇಕ ಮಹಿಳಾ ಸಂಘಟನೆಗಳು ಪ್ರಾಂಶುಪಾಲರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.