ETV Bharat / bharat

'ಪ್ರೇಮಿಗಳ ದಿನಕ್ಕೆ ಬಾಯ್​ಫ್ರೆಂಡ್​ ಇಲ್ಲದೆ ಕಾಲೇಜಿಗೆ ಪ್ರವೇಶವಿಲ್ಲ': ವೈರಲ್​ ಆಗುತ್ತಿದೆ ಮತ್ತೊಂದು ನೋಟಿಸ್​ - ವೈರಲ್​ ಆಗುತ್ತಿರುವ ನೋಟಿಸ್​

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನೋಟಿಸ್​ ನಕಲಿ ಎಂದು ಕಾಲೇಜು ಪ್ರಾಂಶುಪಾಲರು ಸ್ಪಷ್ಟಪಡಿಸಿದ್ದಾರೆ.

Umerkot Pendrani College
ಉಮರ್‌ಕೋಟ್ ಪೆಂಡ್ರಾನಿ ಕಾಲೇಜು
author img

By

Published : Jan 28, 2023, 1:28 PM IST

ನಬರಂಗ್​ಪುರ(ಒಡಿಶಾ): ಒಡಿಶಾದ ಜಗತ್‌ಸಿಂಗ್‌ಪುರದ ಸ್ವಾಮಿ ವಿವೇಕಾನಂದ ಸ್ಮಾರಕ ಸ್ವಾಯತ್ತ ಕಾಲೇಜಿನಲ್ಲಿ ನಡೆದ ಘಟನೆ ನಂತರ ಅಂತಹದೇ ಘಟನೆ ಇದೀಗ ಅದೇ ರಾಜ್ಯದ ನಬರಂಗ್​ಪುರದಲ್ಲಿ ನಡೆದಿದೆ. ಪ್ರೇಮಿಗಳ ದಿನದಂದು ಬಾಯ್​ಫ್ರೆಂಡ್​ ಇಲ್ಲದೆ ಕಾಲೇಜಿಗೆ ಪ್ರವೇಶವಿಲ್ಲ ಎಂದು ವಿದ್ಯಾರ್ಥಿನಿಯರಿಗೆ ನೀಡಿರುವ ನೋಟಿಸ್​ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಈಗ ವೈರಲ್​ ಆಗುತ್ತಿರುವ ನೋಟಿಸ್​ ಉಮರ್‌ಕೋಟ್ ಪೆಂಡ್ರಾನಿ ಕಾಲೇಜಿನಿಂದ ಹೊರಡಿಸಲಾಗಿದ್ದು ಎನ್ನುವ ವದಂತಿಯೂ ಹಬ್ಬಿದೆ. ಆದರೆ ಸದ್ಯಕ್ಕಂತು ಪ್ರೇಮಿಗಳ ದಿನಾಚರಣೆ ಸಮೀಪಿಸುತ್ತಿರುವ ಈ ಹೊತ್ತಲ್ಲಿ ಇಂತಹ ಒಂದು ನೋಟಿಸ್​ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್ ಆಗುತ್ತಿದೆ.

ಉಮರ್‌ಕೋಟ್ ಪೆಂಡ್ರಾನಿ ಕಾಲೇಜಿನಿಂದ ಹೊರಡಿಸಲಾಗಿದ್ದು ಎಂದು ಹೇಳಲಾಗುತ್ತಿರುವ ಈ ನೋಟಿಸ್​ನಲ್ಲಿ ಕಾಲೇಜು ಪ್ರಾಂಶುಪಾಲ ಸಹಿಯೂ ಇದೆ. ಕಾಲೇಜು ಪ್ರಾಂಶುಪಾಲರ ಹೆಸರಲ್ಲಿ ವೈರಲ್ ಆಗಿರುವ ಈ ನೋಟಿಸ್ ಬಗ್ಗೆ ವಿದ್ಯಾರ್ಥಿಗಳು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ನೋಟಿಸ್​ ನಕಲಿ ಎಂದು ಉಮರ್‌ಕೋಟ್ ಪೆಂಡ್ರಾನಿ ಕಾಲೇಜಿನ ಪ್ರಾಂಶುಪಾಲರು ಸ್ಪಷ್ಟಪಡಿಸಿದ್ದಾರೆ.

College notice going viral
ವೈರಲ್​ ಆಗುತ್ತಿರುವ ಕಾಲೇಜು ನೋಟಿಸ್​

ನೋಟಿಸ್​ನಲ್ಲಿ ಏನಿದೆ?: ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ನೋಟಿಸ್​ನಲ್ಲಿ 'ಫೆಬ್ರವರಿ 14 ರೊಳಗೆ ಎಲ್ಲಾ ಹುಡುಗಿಯರು ಕನಿಷ್ಠ ಒಬ್ಬ ಬಾಯ್​ಫ್ರೆಂಡ್​ ಹೊಂದಿರುವುದು ಕಡ್ಡಾಯ. ಭದ್ರತಾ ಉದ್ದೇಶಗಳಿಗಾಗಿ ಇದನ್ನು ಮಾಡಲಾಗಿದೆ. ಬಾಯ್​ಫ್ರೆಂಡ್​ ಇಲ್ಲದೆ ಬರುವ ಒಂಟಿ ಹುಡುಗಿಯರಿಗೆ ಕಾಲೇಜು ಆವರಣಕ್ಕೆ ಪ್ರವೇಶವಿಲ್ಲ. ಕಾಲೇಜು ಪ್ರವೇಶಿಸಬೇಕಾದರೆ ಅವರು ತಮ್ಮ ಗೆಳೆಯನೊಂದಿಗಿನ ಇತ್ತೀಚಿನ ಚಿತ್ರವನ್ನು ತೋರಿಸಬೇಕು. ಪ್ರೀತಿಯನ್ನು ಹಂಚಿರಿ.' ಎಂದು ಬರೆಯಲಾಗಿದೆ. ವಿದ್ಯಾರ್ಥಿನಿಯರು ತಮ್ಮ ಗೆಳೆಯನೊಂದಿಗೆ ಫೋಟೋ ತೆಗೆದು ಗುರುತಿನ ಚೀಟಿಯಂತೆ ಕಾಲೇಜಿನ ಪ್ರವೇಶ ದ್ವಾರದಲ್ಲಿ ತೋರಿಸಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಆಶ್ಚರ್ಯವೆಂದರೆ ನಕಲಿ ಎಂದು ಹೇಳಲಾಗುತ್ತಿರುವ ನೋಟಿಸ್​ನಲ್ಲಿ ಕಾಲೇಜಿನ ಪ್ರಾಂಶುಪಾಲರ ಸಹಿ ಇದೆ.

ವೈರಲ್​ ಆಗುತ್ತಿರುವ ನೋಟಿಸ್​ ಬಗ್ಗೆ ಕಾಲೇಜು ಪ್ರಾಂಶುಪಾಲೆ ಅನಿತಾ ಮಾಝಿ ಅವರನ್ನು ಕೇಳಿದರೆ, 'ನೋಟಿಸ್ ಸಂಪೂರ್ಣ ನಕಲಿಯಾಗಿದೆ. ವೈರಲ್ ಆಗುತ್ತಿರುವ ನೋಟಿಸ್​ನಲ್ಲಿ ಅಧಿಸೂಚನೆ ಸಂಖ್ಯೆ ಕಳೆದ ಜನವರಿ 26ರಂದು ಹೊರಡಿಸಿರುವುದು. ಇದು ಸರಸ್ವತಿ ಪೂಜೆಗೆ ಹೊರಡಿಸಿದ್ದ ನೋಟಿಸ್​. ಅದನ್ನು ಯಾರೋ ಕಾಪಿ ಮಾಡಿ ವೈರಲ್ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗುವುದು' ಎಂದು ಹೇಳಿದ್ದಾರೆ.

ಕಾಲೇಜು ಪ್ರಾಂಶುಪಾಲರು ನೋಟಿಸ್​ ನಕಲಿ ಎಂದು ಸ್ಪಷ್ಟಪಡಿಸಿರುವ ಕಾರಣ, ಈಗ ಇಂತಹ ನೋಟಿಸ್ ವೈರಲ್ ಮಾಡಿರುವ ಆರೋಪಿ ಯಾರು ಎಂಬ ಪ್ರಶ್ನೆ ಎದ್ದಿದೆ. ವಿದ್ಯಾರ್ಥಿನಿಯರ ಗೌರವಕ್ಕೆ ಚ್ಯುತಿ ಬರುವಂತಹ ನೋಟಿಸ್​ ಒಂದು ಮೊಬೈಲ್‌ನಿಂದ ಮೊಬೈಲ್‌ಗೆ ಹರಿದಾಡುತ್ತಿದ್ದರೂ ಕಾಲೇಜು ಆಡಳಿತ ಮಂಡಳಿ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಕೆಲ ದಿನಗಳ ಹಿಂದೆಯಷ್ಟೆ ಒಡಿಶಾದ ಜಗತ್‌ಸಿಂಗ್‌ಪುರದಲ್ಲಿರುವ ಸ್ವಾಮಿ ವಿವೇಕಾನಂದ ಸ್ಮಾರಕ ಸ್ವಾಯತ್ತ ಕಾಲೇಜಿನಲ್ಲಿ ಇಂತಹದೊಂದು ನೋಟಿಸ್​ ವೈರಲ್ ಆಗಿತ್ತು. ಪ್ರೇಮಿಗಳ ದಿನದಂದು ವಿದ್ಯಾರ್ಥಿನಿಯರು ಬಾಯ್​ಫ್ರೆಂಡ್​ ಜೊತೆ ಕಾಲೇಜಿಗೆ ಬರಬೇಕು. ಬಾಯ್​ಫ್ರೆಂಡ್​ ಇಲ್ಲದೆ ಬರುವ ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ಪ್ರವೇಶವಿಲ್ಲ ಎಂದು ಆ ನೋಟಿಸ್​ನಲ್ಲಿಯೂ ಬರೆಯಲಾಗಿತ್ತು. ಈ ನೋಟಿಸ್​ನಲ್ಲಿಯೂ ಕಾಲೇಜು ಪ್ರಾಂಶುಪಾಲರ ಸಹಿ ಇತ್ತು. ಅದು ಎಸ್‌ವಿಎಂ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ವಿಜಯ್‌ಕುಮಾರ್‌ ಪಾತ್ರ ಅವರ ಸಹಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪ್ರಾಂಶುಪಾಲ ವಿಜಯ್​ ಕುಮಾರ್​ ಪಾತ್ರಾ ಅವರು, ಇದೊಂದು ನಕಲಿ ನೋಟಿಸ್​. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ವ್ಯಾಲೆಂಟೈನ್​ ದಿನ ಬಾಯ್​ಫ್ರೆಂಡ್​ ಜೊತೆ ಬರದಿದ್ರೆ ನೋ ಎಂಟ್ರಿ; ನೋಟಿಸ್​ ವೈರಲ್ ಆಗ್ತಿದ್ದಂತೆ ಕಾಲೇಜ್​ ಅಲರ್ಟ್​ ​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.