ETV Bharat / bharat

ಕ್ಲಾಸ್​ ರೂಂನಲ್ಲೇ ಮದ್ಯ ಸೇವನೆ ಮಾಡಿದ ವಿದ್ಯಾರ್ಥಿನಿಯರು!: ವಿಡಿಯೋ ವೈರಲ್ - ತರಗತಿ ಕ್ಲಾಸ್​ನಲ್ಲಿ ವಿದ್ಯಾರ್ಥಿನಿಯರು ಮದ್ಯ ಸೇವನೆ

ವಿದ್ಯಾರ್ಥಿನಿಯರು ಕಾಲೇಜು ಕ್ಲಾಸ್ ರೂಂನಲ್ಲೇ ಮದ್ಯಪಾನ ಮಾಡಿರುವ ವಿಡಿಯೋ ವೈರಲ್​ ಆಗಿದ್ದು, ಅವರನ್ನು ಅಮಾನತುಗೊಳಿಸಲಾಗಿದೆ.

College Girls Suspended For Consuming Alcohol

author img

By

Published : Apr 8, 2022, 7:55 PM IST

ಕಾಂಚಿಪುರಂ(ತಮಿಳುನಾಡು): 'ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು..' ಎಂಬ ಸಿನಿಮಾ ಹಾಡು ಕೇಳಿರುತ್ತೀರಾ. ಆದರೆ, ಅದು ಸಿನಿಮಾ ಆಗಿತ್ತು. ಈಗ ನಾವು ಹೇಳುತ್ತಿರುವ ವಿಷಯ ನಿಜ ಜೀವನದ್ದು. ಕಾಲೇಜು ವಿದ್ಯಾರ್ಥಿನಿಯರು ಕ್ಲಾಸ್ ರೂಂನಲ್ಲೇ ಕಂಠಪೂರ್ತಿ ಕುಡಿದಿರುವ ಘಟನೆ ತಮಿಳುನಾಡಿನ ಕಾಂಚಿಪುರಂನಲ್ಲಿ ನಡೆದಿದೆ. ಇದರ ವಿಡಿಯೋ ಇಲ್ಲಿದೆ ನೋಡಿ.

ಪ್ರಥಮ ವರ್ಷದ ಕಾಲೇಜು​ ವಿದ್ಯಾರ್ಥಿನಿಯರು ತರಗತಿ ಕೊಠಡಿಯಲ್ಲಿ ಮದ್ಯಸೇವನೆ ಮಾಡುತ್ತಿದ್ದು, ಕಾಲೇಜು ಆಡಳಿತ ಮಂಡಳಿಗೆ ಗೊತ್ತಾಗುತ್ತಿದ್ದಂತೆ 10 ವಿದ್ಯಾರ್ಥಿನಿಯರನ್ನು ಅಮಾನತು ಮಾಡಿದೆ. ಕಾಂಚಿಪುರಂನ ಎನತ್ತೂರ್​​ನಲ್ಲಿರುವ ಖಾಸಗಿ ಕಾಲೇಜಿನಲ್ಲಿ ಘಟನೆ ನಡೆದಿದೆ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಪ್ರಕಾರ, ಒಟ್ಟು 10 ವಿದ್ಯಾರ್ಥಿನಿಯರು ಕ್ಲಾಸ್​ ರೂಂನಲ್ಲಿದ್ದು, ಇದರಲ್ಲಿ ನಾಲ್ವರು ಯುವತಿಯರು ಮದ್ಯ ಸೇವನೆ ಮಾಡಿದ್ದಾರೆ. ಉಳಿದವರು ಅವರಿಗೆ ಸಹಾಯ ಮಾಡಿದ್ದಾರೆ.

ಕೂಲ್​ ಡ್ರಿಂಕ್ಸ್​ ಬಾಟಲಿಯಲ್ಲಿ ಮದ್ಯ ಬೆರೆಸಿ, ಅದನ್ನು ಸೇವನೆ ಮಾಡಿದ್ದಾರೆ. ಘಟನೆ ಬಗ್ಗೆ ಶಾಲಾ ಆಡಳಿತ ಮಂಡಳಿ ಗಮನಕ್ಕೆ ಬರುತ್ತಿದ್ದಂತೆ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಜೊತೆಗೆ, ವಿದ್ಯಾರ್ಥಿನಿಯರಿಗೆ ವೈದ್ಯಕೀಯ ಸಮಾಲೋಚನೆ ನಡೆಸುವಂತೆಯೂ ಸೂಚನೆ ನೀಡಲಾಗಿದೆ.

ಕಳೆದ ತಿಂಗಳು ತಮಿಳುನಾಡಿನ ಸರ್ಕಾರಿ ಬಸ್​​ವೊಂದರಲ್ಲಿ ವಿದ್ಯಾರ್ಥಿನಿಯರು ಮದ್ಯ ಸೇವನೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ತಿರುಕಝಕುಂದ್ರಂನಿಂದ ಠಾಚೂರ್​ಗೆ ತೆರಳುತ್ತಿದ್ದ ವೇಳೆ ವಿದ್ಯಾರ್ಥಿನಿಯರ ಗುಂಪು ಮದ್ಯಪಾನ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.