ಭದ್ರಾಚಲಂ: ಭದ್ರಾಚಲಂ ಸರ್ಕಾರಿ ಪ್ರಾದೇಶಿಕ ಆಸ್ಪತ್ರೆಯಲ್ಲಿ ಭದ್ರಾದ್ರಿ ಕೊತ್ತಗುಡೆಂ ಜಿಲ್ಲಾಧಿಕಾರಿ ಅನುದೀಪ್ ಅವರ ಪತ್ನಿ ಮಾಧವಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜಿಲ್ಲಾಧಿಕಾರಿ ತಮ್ಮ ಪತ್ನಿ ಹೆರಿಗೆಗಾಗಿ ಮಂಗಳವಾರ ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಿಸಿದ್ದರು.
![collector wife gives birth, collector wife gives birth to a baby boy, collector wife gives birth to a baby boy in government hospital, bhadrachalam news, ಮಗುವಿಗೆ ಜನ್ಮ ನೀಡಿದ ಜಿಲ್ಲಾಧಿಕಾರಿ ಪತ್ನಿ, ಗಂಡು ಮಗುವಿಗೆ ಜನ್ಮ ನೀಡಿದ ಜಿಲ್ಲಾಧಿಕಾರಿ ಪತ್ನಿ, ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಜಿಲ್ಲಾಧಿಕಾರಿ ಪತ್ನಿ, ಭದ್ರಾಚಲಂ ಸುದ್ದಿ,](https://etvbharatimages.akamaized.net/etvbharat/prod-images/10bhadrachalam-brk_1011newsroom_1636527762_364.jpg)
ಮಂಗಳವಾರ ರಾತ್ರಿ ತುಂಬ ಗರ್ಭಿಣಿಯಾಗಿದ್ದ ಮಾಧವಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಜಿಲ್ಲಾಧಿಕಾರಿ ಅನುದೀಪ್ ತಮ್ಮ ಪತ್ನಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಡಿಸಿಎಚ್‌ಎಸ್ ಡಾ. ಎಂ.ಮುಕ್ಕಂಟೇಶ್ವರರಾವ್ ಮತ್ತು ಉಪ ಅಧೀಕ್ಷಕ ಡಾ.ರಾಮಕೃಷ್ಣ ಅವರ ಮೇಲ್ವಿಚಾರಣೆಯಲ್ಲಿ ವೈದ್ಯರು ಆಕೆಗೆ ಅಗತ್ಯ ಪರೀಕ್ಷೆಗಳನ್ನು ನಡೆಸಿದರು. ಬಳಿಕ ರಾತ್ರಿ ಒಂದು ಗಂಟೆಗೆ ಜಿಲ್ಲಾಧಿಕಾರಿ ಪತ್ನಿಗೆ ಸಿಸೇರಿಯನ್ ಮಾಡಿಸಿದರು.
ಸಿಸೇರಿಯನ್ ಮೂಲಕ ಗಂಡು ಮಗು ಜನಿಸಿದ್ದಕ್ಕೆ ಜಿಲ್ಲಾಧಿಕಾರಿ ಅನುದೀಪ್ ದಂಪತಿ ಸಂತಸ ವ್ಯಕ್ತಪಡಿಸಿದರು. ಕೆಲ ದಿನಗಳಿಂದ ಜಿಲ್ಲಾಧಿಕಾರಿ ಪತ್ನಿ ಮಾಧವಿ ಸರ್ಕಾರಿ ಆಸ್ಪತ್ರೆಗೆ ಬಂದು ಸ್ತ್ರೀರೋಗ ತಜ್ಞರ ಸಲಹೆ ಪಡೆಯುತ್ತಿದ್ದರು. ಸರ್ಕಾರಿ ಆಸ್ಪತ್ರೆಗಳ ಮೇಲೆ ಹೆಚ್ಚಿನ ವಿಶ್ವಾಸ ಮೂಡಿಸುವ ಜಿಲ್ಲಾಧಿಕಾರಿಯವರ ಈ ಪ್ರಯತ್ನವನ್ನು ಹಲವರು ಶ್ಲಾಘಿಸಿದ್ದಾರೆ.