ETV Bharat / bharat

ಖಾಸಗಿ ದರ್ಬಾರ್​ ನಡುವೆ ಸರ್ಕಾರಿ ಸೇವೆ ಪಡೆದ ಅಧಿಕಾರಿ.. ಸರ್ಕಾರಿ ಆಸ್ಪತ್ರೆಯಲ್ಲೇ ಮಗುವಿಗೆ ಜನ್ಮನೀಡಿದ ಡಿಸಿ ಪತ್ನಿ

author img

By

Published : Nov 11, 2021, 8:02 AM IST

ಈಗ ಎಲ್ಲವೂ ಸುಸಜ್ಜಿತ.. ತುಸು ಸ್ಥಿತಿವಂತರಿದ್ದರೆ ಸಾಕು ಐಷಾರಾಮಿಯತ್ತ ಜನ ಮುಗಿ ಬೀಳುತ್ತಾರೆ. ಸರ್ಕಾರಿ ವ್ಯವಸ್ಥೆ ಬಗ್ಗೆ ಅನಾದರ ಬೆಳೆಸಿಕೊಂಡಿರುವ ಈ ಸಂದರ್ಭದಲ್ಲಿ ಇಲ್ಲೊಬ್ಬರು ಡಿಸಿ, ಸರ್ಕಾರಿ ಆಸ್ಪತ್ರೆಯಲ್ಲೇ ತಮ್ಮ ಪತ್ನಿಗೆ ಹೆರಿಗೆ ಮಾಡಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರಿ ಆಸ್ಪತ್ರೆಗಳೇನೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

DC
DC

ಭದ್ರಾದ್ರಿ(ತೆಲಂಗಾಣ): ಈಗ ಎಲ್ಲದಕ್ಕೂ ಜನ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿದ್ದರೂ ತುಸು ಸ್ಥಿತಿವಂತರಿದ್ದರೆ ಸಾಕು ಅವರೆಲ್ಲ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡ್ತಿದ್ದಾರೆ. ಅದಕ್ಕೆ ಕಾರಣವೂ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕಂಡು ಬರದ ಸ್ಪಚ್ಚತೆ, ವೈದ್ಯರ ಕೊರತೆ, ಉದ್ದುದ್ದ ಪಾಳೆಗಳ ಸಹವಾಸ ಬೇಡ ಎಂಬ ಕಾರಣಕ್ಕೆ ಬಹುತೇಕರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಾರೆ.

ಆದರೆ, ಇಲ್ಲೊಬ್ಬ ಜಿಲ್ಲಾಧಿಕಾರಿ ತಮ್ಮ ಪತ್ನಿಯನ್ನ ಸರ್ಕಾರ ಆಸ್ಪತ್ರೆಗೆ ಸೇರಿಸಿ ಅಲ್ಲೇ ಚಿಕಿತ್ಸೆ ಕೊಡಿಸಿ, ಸುರಕ್ಷಿತ ಹೆರಿಗೆ ಮಾಡಿಸಿ ಸೈ ಎನಿಸಿಕೊಂಡಿದ್ದಾರೆ. ಎಲ್ಲ ಸೌಲಭ್ಯ ಪಡೆಯುವ ಮಾರ್ಗಗಳಿದ್ದರೂ ಅದೆಲ್ಲವನ್ನು ಬದಿಗೊತ್ತಿ ಸರ್ಕಾರಿ ಆಸ್ಪತ್ರೆಯಲ್ಲಿ ಪತ್ನಿಗೆ ಹೆರಿಗೆ ಮಾಡಿಸುವ ಮೂಲಕ ತಾವೊಬ್ಬ ಜನಸಾಮಾನ್ಯ ಎಂಬುದನ್ನು ಋಜುವಾತು ಮಾಡಿದ್ದಾರೆ.

ಹೌದು ಭದ್ರಾದ್ರಿ ಕೊತೆಗುಡೆಮ್​​ ಜಿಲ್ಲೆಯ ಜಿಲ್ಲಾಧಿಕಾರಿ ಅನುದೀಪ್​​ ದುರಿಶೆಟ್ಟಿ, ತಮ್ಮ ಪತ್ನಿ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸುವ ಬದಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆರಿಗೆ ಮಾಡಿಸಿದ್ದಾರೆ. ಜಿಲ್ಲಾಧಿಕಾರಿ ಪತ್ನಿ ಸರ್ಕಾರಿ ಆಸ್ಪತ್ರೆಯಲ್ಲಿ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ.

ಖಾಸಗಿ ಆಸ್ಪತ್ರೆಗಳನ್ನು ತ್ಯಜಿಸಿ ಸರ್ಕಾರಿ ಆಸ್ಪತ್ರೆಯಲ್ಲೂ ಆಧುನಿಕ ವ್ಯವಸ್ಥೆ ಇದೆ ಎಂಬುದನ್ನು ತೋರಿಸಿಕೊಟ್ಟಿರುವ ಡಿಸಿ ಕಾರ್ಯಕ್ಕೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ತೆಲಂಗಾಣ ರಾಜ್ಯ ಆರೋಗ್ಯ ಸಚಿವ ಟಿ ಹರೀಶ್ ರಾವ್ ಮತ್ತು ಸಾರಿಗೆ ಸಚಿವ ಪುವ್ವಾಡ ಅಜಯ್ ಕುಮಾರ್ ಡಿಸಿ ಕಾರ್ಯಕ್ಕೆ ಶಹಬ್ಬಾಸ್​ ಹೇಳಿದ್ದಾರೆ.

"ಕಲೆಕ್ಟರ್_ಬಿಡಿಡಿ ಮತ್ತು ಅವರ ಪತ್ನಿಗೆ ಹೃತ್ಪೂರ್ವಕ ಅಭಿನಂದನೆಗಳು. ತಾಯಿ ಮತ್ತು ಮಗು ಇಬ್ಬರೂ ಚೆನ್ನಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಸಿಎಂ ಕೆಸಿಆರ್ ಅವರ ಸಮರ್ಥ ನಾಯಕತ್ವದಲ್ಲಿ ರಾಜ್ಯ ವೈದ್ಯಕೀಯ ಮೂಲಸೌಕರ್ಯವು ಹೇಗೆ ಮೊದಲ ಆಯ್ಕೆಯಾಗಿದೆ ಎಂಬುದನ್ನು ನೋಡಲು ನಮಗೆ ಅಪಾರ ಹೆಮ್ಮೆಯಾಗುತ್ತದೆ" ಎಂದು ಹರೀಶ್ ರಾವ್ ಟ್ವೀಟ್ ಮಾಡಿದ್ದಾರೆ.

ಅಂದ ಹಾಗೆ ಡಿಸಿ ದುರಿಶೆಟ್ಟಿ 2017ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ದೇಶದಲ್ಲೇ ಟಾಪರ್ ಆಗಿ, ನಾಗರಿಕ ಸೇವೆಗೆ ಆಯ್ಕೆ ಆಗಿದ್ದರು. ಇದೀಗ ಅವರು ಭದ್ರಾದ್ರಿ ಡಿಸಿ ಆಗಿ ಕೆಲಸ ಮಾಡುತ್ತಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.