ನಾಸಿಕ್: ನಾಸಿಕ್ ಪ್ರದೇಶದ ಘೋಟಿ ಪ್ರದೇಶದಲ್ಲಿ ಮುಂಬೈ-ನಾಗ್ಪುರ ಸೂಪರ್ ಎಕ್ಸ್‌ಪ್ರೆಸ್‌ವೇಯಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಯ ಒಂದು ಭಾಗವು ಕುಸಿದಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಇಗತ್‌ಪುರಿ ತಾಲೂಕಿನ ಗಂಗಡವಾಡಿ ಮತ್ತು ಬೆಳಗಾನ್-ತರಹಳೆಗೆ ಸಂಪರ್ಕ ಸೇತುವೆಗೆ ಕ್ರೇನ್‌ಗಳಿಂದ ಬ್ರಿಡ್ಜ್ ನಿರ್ಮಿಸುತ್ತಿದ್ದಾಗ ಸೋಮವಾರ ರಾತ್ರಿ 7.30ರ ಸುಮಾರಿಗೆ ಇದ್ದಕ್ಕಿದ್ದಂತೆ ಕುಸಿದಿದೆ.
ಈ ಅವಘಡದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ, ಸೇತುವೆ ಮುರಿದು ಬಿದ್ದ ಕಾರಣ ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಮುರಿದು ಬೀಳಲು ಕಾರಣಗಳನ್ನು ಪರಿಶೀಲಿಸಲಾಗುತ್ತಿದ್ದು, ಅಪಘಾತದ ಸ್ಥಳದ ಸುತ್ತಮುತ್ತಲಿನ ಪ್ರದೇಶವನ್ನು ಸುತ್ತುವರಿಯಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಘೋಟಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸೇತುವೆಯು 701-ಕಿಮೀ ಉದ್ದದ ಡಿಸೆಂಬರ್ 11, 2022 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ 'ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ್' ಹಂತ I ರ ಅತ್ಯಂತ ಕಷ್ಟಕರವಾದ ಭೂಪ್ರದೇಶದಲ್ಲಿ ಕೊಂಡಿಯಾಗಿದೆ. ಉಳಿದ ಸುಮಾರು 181-ಕಿಮೀ ಉದ್ದದ ನಾಸಿಕ್-ಮುಂಬೈ ವಿಭಾಗದ ಕಾಮಗಾರಿಯು ಪ್ರಸ್ತುತ ತ್ವರಿತ ಗತಿಯಲ್ಲಿ ಕಾರ್ಯಗತಗೊಳ್ಳುತ್ತಿದ್ದು, ಸೇತುವೆ ಕುಸಿತದಿಂದ 55,000 ಕೋಟಿ ರೂ.ಗಳ ಬೃಹತ್ ಯೋಜನೆ ಪೂರ್ಣಗೊಳ್ಳಲು ವಿಳಂಬವಾಗುವ ಸಾಧ್ಯತೆಯಿದೆ. ಸೇತುವೆ ಅಪಘಾತವು ನಿರ್ಮಾಣದ ಗುಣಮಟ್ಟ, ಪ್ರಕ್ರಿಯೆಗಳು ಮತ್ತು ಸಾಮಗ್ರಿಗಳು ಮತ್ತು ಸರಿಯಾದ ಸೈಟ್ ಮೇಲ್ವಿಚಾರಣೆಯ ಮೇಲೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: ಸೇತುವೆಯಿಂದ ಬಿದ್ದ ಬಸ್.. 15 ಮಂದಿ ದುರ್ಮರಣ