ETV Bharat / bharat

ಉತ್ತರ ಭಾರತದಲ್ಲಿ ಚಳಿ ತೀವ್ರ: ದೆಹಲಿಯಲ್ಲಿ ಐದು ದಿನ 5ನೇ ಕ್ಲಾಸ್​ವರೆಗೆ ಶಾಲೆಗೆ ರಜೆ - cold waves

ಉತ್ತರ ಭಾರತದಲ್ಲಿ ಶೀತಗಾಳಿ ತೀವ್ರವಾಗಿದೆ. ದೆಹಲಿಯಲ್ಲಿ 5ನೇ ತರಗತಿ​ವರೆಗೆ ಶಾಲೆಗೆ ರಜೆ ನೀಡಲಾಗಿದೆ. ರಾಜಸ್ಥಾನದ ಸಿಕರ್​ ಪ್ರದೇಶದಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ.

ಮೈ ಕೊರೆಯುವ ಚಳಿ
ಮೈ ಕೊರೆಯುವ ಚಳಿ
author img

By ETV Bharat Karnataka Team

Published : Jan 7, 2024, 12:20 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ, ಕಾಶ್ಮೀರ ರಾಜಸ್ಥಾನ, ಹರಿಯಾಣ, ಪಂಜಾಬ್‌ ಸೇರಿದಂತೆ ಉತ್ತರ ಭಾರತದಲ್ಲಿ ಶೀತಗಾಳಿ, ಚಳಿ ತೀವ್ರವಾಗಿದೆ. ಕೆಲವೆಡೆ ತಾಪಮಾನ 2 ಡಿಗ್ರಿ ಸೆಲ್ಸಿಯಸ್​ಗೆ ಇಳಿದಿದೆ. ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯ ಕಾರಣ, ದೆಹಲಿಯಲ್ಲಿ ಮುಂದಿನ ಐದು ದಿನಗಳು ಅಂದರೆ ಜನವರಿ 12ರವರೆಗೆ ನರ್ಸರಿಯಿಂದ 5ನೇ ತರಗತಿವರೆಗಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ದೆಹಲಿಯಲ್ಲಿ ತೀವ್ರ ಶೀತಗಾಳಿ, ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ, ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಮಾನ್ಯತೆ ಪಡೆದ ಖಾಸಗಿ ಶಾಲೆಗಳಲ್ಲಿ ಚಳಿಗಾಲದ ರಜೆಯನ್ನು ಜನವರಿ 10ರವರೆಗೆ ವಿಸ್ತರಿಸಿ ಸರ್ಕಾರ ಆದೇಶಿಸಿತ್ತು. ಕೆಲವು ಗಂಟೆಗಳ ಬಳಿಕ ವಿಸ್ತರಣೆ ಆದೇಶವನ್ನು ಹಿಂತೆಗೆದುಕೊಂಡಿದೆ.

ಈ ಬಗ್ಗೆ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವರಾದ ಅತಿಶಿ, ದಿಲ್ಲಿಯಲ್ಲಿ ಕೊರೆಯುವ ಚಳಿ ಕಾರಣ ಚಿಕ್ಕಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹೀಗಾಗಿ ನರ್ಸರಿಯಿಂದ 5 ನೇ ತರಗತಿಗಲಿಗೆ 12 ರವರೆಗೂ ರಜೆ ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

  • Schools in Delhi will remain closed for the next 5 days due to the prevailing cold weather conditions, for students from Nursery to Class 5.

    — Atishi (@AtishiAAP) January 7, 2024 " class="align-text-top noRightClick twitterSection" data=" ">

ಮೈ ಕೊರೆಯುವ ಚಳಿಗೆ ಜನ ತತ್ತರ: ದೆಹಲಿ, ಪೂರ್ವ ರಾಜಸ್ಥಾನದ ಕೆಲವು ಭಾಗಗಳು, ವಾಯವ್ಯ ರಾಜಸ್ಥಾನ, ಹರಿಯಾಣ ಮತ್ತು ಪಂಜಾಬ್‌ನಲ್ಲಿ ಕೊರೆಯುವ ಚಳಿಯಿಂದಾಗಿ ಸೂರ್ಯೋದಯವೇ ಕಾಣದಂತಾಗಿದೆ. ಹವಾಮಾನ ದಿನದಿಂದ ದಿನಕ್ಕೆ ಅತಿ ಶೀತಲವಾಗುತ್ತಿದೆ. ಸೂರ್ಯನ ಕಿರಣಗಳೇ ಇಲ್ಲಿ ಅಗೋಚರವಾಗಿವೆ. ವಿವಿಧ ರೈಲು ನಿಲ್ದಾಣಗಳಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಸಂಚಾರ ವ್ಯತ್ಯಯ ಉಂಟಾಗಿತ್ತು.

ದೆಹಲಿ, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ ಮುಂದಿನ 1 ದಿನ ಶೀತದಿಂದ ತೀವ್ರ ಚಳಿಯ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ. ನಂತರ ಇಳಿಕೆ ಕಾಣಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಭಾನುವಾರ ಮಾಹಿತಿ ನೀಡಿದೆ.

ಪಂಜಾಬ್ ಮತ್ತು ಹರಿಯಾಣದ ಹಲವು ಭಾಗಗಳಲ್ಲಿ ಗರಿಷ್ಠ ತಾಪಮಾನವು 9-12ಡಿಗ್ರಿ ಸೆಲ್ಸಿಯಸ್​ ಇದ್ದರೆ, ಉತ್ತರ ರಾಜಸ್ಥಾನ, ದೆಹಲಿ, ವಾಯುವ್ಯ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ 13 ರಿಂ 16 ಡಿಗ್ರಿ ಸೆಲ್ಸಿಯಸ್​ಗೆ ಇಳಿದಿದೆ. ಇದು ಸಾಮಾನ್ಯಕ್ಕಿಂತ 4-9 ರಷ್ಟು ಕಡಿಮೆ ದಾಖಲಾಗುತ್ತಿದೆ.

ರಾಜಸ್ಥಾನದ ಸಿಕರ್​ನಲ್ಲಿ ಕನಿಷ್ಠ ತಾಪ ದಾಖಲು: ರಾಜಸ್ಥಾನ, ಪಂಜಾಬ್, ಹರಿಯಾಣ-ಚಂಡೀಗಢ -ದೆಹಲಿ, ಉತ್ತರ ಪ್ರದೇಶ, ವಾಯುವ್ಯ ಮಧ್ಯಪ್ರದೇಶ, ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಕನಿಷ್ಠ ತಾಪಮಾನವು 6-15 ಡಿಗ್ರಿ ಸೆಲ್ಸಿಯಸ್​ ಇದ್ದರೆ, ಪೂರ್ವ ರಾಜಸ್ಥಾನದ ಸಿಕರ್ ಪ್ರದೇಶದಲ್ಲಿ 2 ಡಿಗ್ಸಿ ಸೆಲ್ಸಿಯಸ್​ ದಾಖಲಾಗಿದ್ದು, ಇದು ಅತಿ ಕನಿಷ್ಠ ತಾಪಮಾನವಾಗಿದೆ.

ಚಳಿಯ ಜೊತೆಗೆ ಮಳೆ: ಹವಾಮಾನ ಇಲಾಖೆ ಮಾಹಿತಿಯ ಪ್ರಕಾರ, ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಜನವರಿ 8ರಿಂದ 10ರವರೆಗೆ ಗುಡುಗು, ಆಲಿಕಲ್ಲು ಮಳೆ ಬೀಳುವ ಸಾಧ್ಯತೆ ಇದೆ. ಇದರ ನಡುವೆಯೇ ಜನವರಿ 26ರಂದು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪರೇಡ್​ ತಂಡಗಳು ಪೂರ್ವಾಭ್ಯಾಸ ನಡೆಸಿದವು.

ಇದನ್ನೂ ಓದಿ: ಅದ್ಭುತ ವಿದೇಶಾಂಗ ನೀತಿಗೆ 'ರಾಮಾಯಣ'ದ ನಿದರ್ಶನ ಕೊಟ್ಟ ಡಾ.ಎಸ್.ಜೈಶಂಕರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.