ETV Bharat / bharat

ಜಾರ್ಖಂಡ್​ನಲ್ಲಿ ಕರ್ನಾಟಕದ ಕೋಬ್ರಾ ಯೋಧ ಆತ್ಮಹತ್ಯೆ

ಜಾರ್ಖಂಡ್​ನ ಹಜಾರಿಬಾಗ್​ನಲ್ಲಿ ಕರ್ನಾಟಕದ ಯೋಧರೊಬ್ಬರು ಮಾನಸಿಕ ತೊಂದರೆಯಿಂದಾಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

Cobra jawan commits succide
Cobra jawan commits succide
author img

By

Published : Apr 1, 2021, 10:43 PM IST

ಹಜಾರಿಬಾಗ್​​​(ಜಾರ್ಖಂಡ್​): ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದ ಕರ್ನಾಟಕ ಮೂಲದ ಕೋಬ್ರಾ ಯೋಧನೋರ್ವ ಜಾರ್ಖಂಡ್​ನ ಹಜಾರಿಬಾಗ್​​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತ ಸಂದೀಪ್​ ನಾರಾಯಣ್​ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರೆಂದು ತಿಳಿದು ಬಂದಿದೆ. 2014ರಿಂದ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಕಳೆದ ಕೆಲ ತಿಂಗಳಿಂದ ಮಾನಸಿಕವಾಗಿ ತೊಂದರೆಗೊಳಗಾಗಿದ್ದರು. ಇದಕ್ಕೆ ಅವರು ಜಾರ್ಖಂಡ್​ನ ರಾಂಚಿಯ ಕಾಂಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

ಹಜಾರಿಬಾಗ್​ನಲ್ಲಿರುವ ಕೋಬ್ರಾ ವಾಹಿನಿ 203 ಶಿಬಿರದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದೀಪ್, ಕ್ಯಾಂಪ್​ನಲ್ಲಿರುವ ಕೋಣೆಯೊಳಗಿನ ಫ್ಯಾನ್​ಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಅತ್ಯಧಿಕ 43,183 ಕೋವಿಡ್ ಕೇಸ್​; ಮುಂಬೈನಲ್ಲೇ 8,646 ಪ್ರಕರಣ!

ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕೋಬ್ರಾ ಕಾರ್ಪ್ಸ್​​ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದೆ. ರಾಂಚಿಯ ವಿಮಾನ ನಿಲ್ದಾಣದಿಂದ ಸ್ವಗ್ರಾಮಕ್ಕೆ ಪಾರ್ಥಿವ ಶರೀರವನ್ನು ರವಾನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.