ಅಯೋಧ್ಯೆ: ರಾಮನಗರಿ ಅಯೋಧ್ಯೆಯಲ್ಲಿ ರಾಮನ ಮಂದಿರಕ್ಕಿಂತ ಮೊದಲು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಅವರ ಬೆಂಬಲಿಗನೋರ್ವ ಭಗವಾನ್ ಶ್ರೀರಾಮನ ಮುಂದೆಯೇ ಮಂದಿರವನ್ನು ನಿರ್ಮಿಸಿದ್ದಾರೆ. ಸಿಎಂ ಯೋಗಿ ಮಂದಿರ ಇದೀಗ ಪೂರ್ಣಗೊಂಡು, ಬೆಂಬಲಿಗ ಪ್ರತಿದಿನ ಪೂಜೆ ಮಾಡುತ್ತಿದ್ದಾರೆ.
ತಮ್ಮನ್ನು ಸಿಎಂ ಯೋಗಿ ಪ್ರಚಾರಕ ಎಂದು ಬಣ್ಣಿಸಿಕೊಂಡ ಪ್ರಭಾಕರ್ ಮೌರ್ಯನ್ ಎಂಬ ವ್ಯಕ್ತಿ ಅವರಿಗಾಗಿ ಹಾಡುಗಳನ್ನು ಬರೆದು ಹಾಡುತ್ತಾರೆ. ಅಯೋಧ್ಯೆಯಲ್ಲಿ ರಾಮನ ಮಂದಿರ ನಿರ್ಮಾಣ ಪೂರ್ಣಗೊಳ್ಳುವ ಮುನ್ನವೇ ಯೋಗಿ ಮಂದಿರ ನಿರ್ಮಾಣವಾಗಿದೆ. ಈ ದೇವಾಲಯವು ಜಿಲ್ಲೆಯ ಮಸೌಧ ಬ್ಲಾಕ್‌ನಲ್ಲಿದೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಯಾರು ರಾಮಮಂದಿರವನ್ನು ಕಟ್ಟುತ್ತಾರೋ ಅವರ ಮಂದಿರವನ್ನು ಕಟ್ಟುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದೆ. ಅದೇ ರೀತಿ ಯೋಗಿ ಆದಿತ್ಯನಾಥ ಅವರು ರಾಮ ಮಂದಿರವನ್ನು ನಿರ್ಮಿಸುತ್ತಿದ್ದಾರೆ. ಅವರ ಮಂದಿರವನ್ನು ನಾನು ನಿರ್ಮಿಸಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ತ್ರಿವೇಣಿ ಸಂಗಮದಲ್ಲಿ ನಡೆಯುವ ಮಹಾ ಕುಂಭ ಮೇಳಕ್ಕೆ ಯೋಗಿ ಆದಿತ್ಯನಾಥ್