ETV Bharat / bharat

ಗೋರಖ್‌ಪುರ ಮೃಗಾಲಯಕ್ಕೆ ಬಿಳಿ ಹುಲಿ ಬಿಟ್ಟ ಯೋಗಿ.. ಚಿರತೆ ಮರಿಗೆ ಹಾಲು ಕುಡಿಸಿದ ಸಿಎಂ - ಗೋರಖ್‌ಪುರ ಮೃಗಾಲಯಕ್ಕೆ ಬಿಳಿ ಹುಲಿ

ಗೋರಖ್‌ಪುರ ಮೃಗಾಲಯಕ್ಕೆ ಭೇಟಿ ನೀಡಿದ ಸಿಎಂ ಯೋಗಿ ಆಧಿತ್ಯನಾಥ್​ ಬಿಳಿ ಹುಲಿಯನ್ನ ಮುಗಾಲಯದಲ್ಲಿ ಬಿಡುಗಡೆ ಮಾಡಿದರು.

up_gkp_01_see
ಗೋರಖ್‌ಪುರ ಮೃಗಾಲಯಕ್ಕೆ ಬಿಳಿ ಹುಲಿ
author img

By

Published : Oct 5, 2022, 10:42 PM IST

Updated : Oct 5, 2022, 10:55 PM IST

ಗೋರಖ್​​ಪುರ: ಉತ್ತರ ಪ್ರದೇಶದ ಗೋರಖ್‌ಪುರದಲ್ಲಿರುವ ಶಹೀದ್ ಅಶ್ಫಾಕ್ ಉಲ್ಲಾ ಖಾನ್ ಮೃಗಾಲಯಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಬುಧವಾರ ಭೇಟಿ ನೀಡಿದರು. ಈ ವೇಳೆ ಯೋಗಿ ಚಿರತೆ ಮರಿಯೊಂದಕ್ಕೆ ಹಾಲು ಕುಡಿಸಿದರು. ಬಳಿಕ ಎರಡು ಚಿರತೆ ಮರಿಗಳಿಗೆ ಚಂಡಿ ಮತ್ತು ಭವಾನಿ ಎಂದು ಹೆಸರಿಟ್ಟಿದ್ದು, ಅವುಗಳನ್ನ ಮೃಗಾಲಯದ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಸಿಎಂ ಯೋಗಿ ಈ ಹಿಂದೆ ಮಾರ್ಚ್ 18 ರಂದು ಗೋರಖ್‌ಪುರ ಮೃಗಾಲಯಕ್ಕೆ ಭೇಟಿ ನೀಡಿದ್ದ ವೇಳೆ ಹರ್ ಮತ್ತು ಗೌರಿ ಎಂಬ ಎರಡು ಘೇಂಡಾಮೃಗಗಳಿಗೆ ಬಾಳೆ ಹಣ್ಣುಗಳನ್ನು ತಿನ್ನಿಸಿದ್ದ ವಿಡಿಯೋ​ ವೈರಲ್​ ಆಗಿತ್ತು. ಇದೀಗ ಚಿರತೆ ಮರಿಗೆ ಹಾಲು ಕುಡಿಸಿರುವ ವಿಡಿಯೋ ಸಖತ್​ ವೈರಲ್​ ಆಗಿದೆ.

  • #WATCH | Uttar Pradesh CM Yogi Adityanath visits Saheed Ashfakulah Khan Zoological Park & veterinary hospital in Gorakhpur, feeds milk to leopard cubs pic.twitter.com/O2wljxg3we

    — ANI UP/Uttarakhand (@ANINewsUP) October 5, 2022 " class="align-text-top noRightClick twitterSection" data=" ">

ಮಾರ್ಚ್ 2021 ರಂದು ಗೋರಖ್‌ಪುರ ಮೃಗಾಲಯವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉದ್ಘಾಟಿಸಿದ್ದರು. ಬಳಿಕ ಜೂನ್ 20 ರಂದು ಲಕ್ನೋ ಮೃಗಾಲಯದಿಂದ ಗೀತಾ ಎಂಬ ಬಿಳಿ ಹುಲಿ ಮರಿಯನ್ನ ಗೋರಖ್‌ಪುರ ಮೃಗಾಲಯಕ್ಕೆ ಕರೆತರಲಾಗಿತ್ತು. ಗೋರಖ್​ಪುರ ವಾತಾವರಣಕ್ಕೆ ಹೊಂದಾಣಿಕೆಯಾಗಲು ಅದನ್ನು ಕ್ರಾಲ್‌ನಲ್ಲಿ ಇರಿಸಲಾಗಿತ್ತು.

  • अथाह शक्ति, अपार गति और अद्वितीय सौंदर्य का अद्भुत संयोजन...

    सफेद बाघिन 'गीता' के आने से गोरखपुर के प्राणि उद्यान की शोभा बढ़ गई है... pic.twitter.com/YkEQgpn885

    — Yogi Adityanath (@myogiadityanath) October 5, 2022 " class="align-text-top noRightClick twitterSection" data=" ">

ಇದೀಗ ಗೀತಾ ವಾತವರಣಕ್ಕೆ ಸಂಪೂರ್ಣವಾಗಿ ಹೊಂದಿಕೊಂಡಿದ್ದರಿಂದ ಇಂದು ಯೋಗಿ ಅದನ್ನ ಮೃಗಾಲಯ ಆವರಣಕ್ಕೆ ಬಿಟ್ಟರು. ಈ ಸಮಯದಲ್ಲಿ, ವೈದ್ಯರು ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ನಾಳೆಯಿಂದ ಪ್ರವಾಸಿಗರು ಗೋರಖ್‌ಪುರ ಮೃಗಾಲಯದಲ್ಲಿ ಬಿಳಿ ಹುಲಿಯನ್ನ ಕಾಣಬಹುದಾಗಿದೆ.

ಇದನ್ನೂ ಓದಿ: ಜಾನುವಾರು ಚರ್ಮಗಂಟು ರೋಗ: ಪರಿಹಾರ ಧನಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆ

Last Updated : Oct 5, 2022, 10:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.