ಡೆಹ್ರಾಡೂನ್(ಉತ್ತರಾಖಂಡ): ರೂರ್ಕಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಕ್ರಿಕೆಟಿಗ ರಿಷಬ್ ಪಂತ್ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರು ಮ್ಯಾಕ್ಸ್ ಆಸ್ಪತ್ರೆಗೆ ಭೇಟಿ ನೀಡಿ ರಿಷಬ್ ಪಂತ್ ಅವರ ಆರೋಗ್ಯ ಸ್ಥಿತಿ ವಿಚಾರಿಸಿದ್ದಾರೆ.
ಆಸ್ಪತ್ರೆಯ ವೈದ್ಯರ ಬಳಿ ಪಂತ್ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪಂತ್ ಅವರನ್ನೂ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ಈ ವೇಳೆ ಸಿಎಂಗೆ ರಸ್ತೆ ಪಕ್ಕದಲ್ಲಿದ್ದ ಗುಂಡಿಕಂಡಿದ್ದರಿಂದಾಗಿ ಅಪಘಾತವಾಗಿದೆ ಎಂದು ಪಂತ್ ಹೇಳಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ರಿಷಬ್ ಪಂತ್ ಉತ್ತಮ ಚಿಕಿತ್ಸೆ ನೀಡಲಾಗುವುದು: ಪಂತ್ ಅವರು ವೈದ್ಯಕೀಯ ಔಪಚಾರಕ್ಕೆ ಸ್ಪಂಧಿಸುತ್ತಿದ್ದು ಬೇಗ ಗುಣಮುಖರಾಗಲಿದ್ದಾರೆ. ರಿಷಬ್ ಪಂತ್ ಚಿಕಿತ್ಸೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಅವರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ರಿಷಬ್ ಪಂತ್ ಅವರನ್ನು ರಕ್ಷಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಬೇಕು. ಸದ್ಯಕ್ಕೆ ರಿಷಬ್ ಪಂತ್ ಅವರಿಗೆ ಮ್ಯಾಕ್ಸ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರೆಯುತ್ತದೆ ಎಂದು ಇದೇ ವೇಳೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.
ಇದೀಗ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಅವರು ಪ್ರತಿ ಹಂತದಲ್ಲೂ ಚೇತರಿಸಿಕೊಳ್ಳುತ್ತಿದ್ದಾರೆ. ಅಗತ್ಯವಿದ್ದರೆ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆಳಿಗೆ ಕಳಿಸಿಕೊಡಲಾಗುವುದು. ಡೆಹ್ರಾಡೂನ್ ಮ್ಯಾಕ್ಸ್ ಆಸ್ಪತ್ರೆಯ ಐವರು ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಿಷಬ್ ಪಂತ್ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದಾರೆ. ಉತ್ತಮ ಚಿಕಿತ್ಸೆಗಾಗಿ ಸೂಚನೆಗಳನ್ನು ನೀಡಿದ್ದಾರೆ. ಇದಲ್ಲದೇ ಬಿಸಿಸಿಐ ತಂಡ ರಿಷಬ್ ಪಂತ್ ಚಿಕಿತ್ಸೆ ಮೇಲೆ ನಿಗಾ ಇರಿಸಿದೆ ಎಂದು ತಿಳಿಸಿದ್ದಾರೆ.
ಅಪಘಾತ: ಕ್ರಿಕೆಟಿಗ ರಿಷಬ್ ಪಂತ್ ಅವರು ಡಿಸೆಂಬರ್ 30 ರಂದು ಮುಂಜಾನೆ ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ಮನೆಗೆ ತೆರಳಿದ್ದ ವೇಳೆ ಅಪಘಾತ ಸಂಭವಿಸಿದೆ. ಪಂತ್ ಕಾರು ರೂರ್ಕಿ ಬಳಿಯ ನರ್ಸನ್‌ನಲ್ಲಿ ನಿಯಂತ್ರಣ ಕಳೆದುಕೊಂಡು ಒಂದು ಬದಿಯ ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆಯ ಮತ್ತೊಂದು ಬದಿಗೆ ತಲುಪಿದೆ. ಅಪಘಾತದ ಆದ ಕೂಡಲೇ ಕಾರಿಗೆ ಬೆಂಕಿ ತಗುಲಿತ್ತು. ಕಿಟಕಿ ಒಡೆದು ಪಂತ್ ಕಾರಿನಿಂದ ಹೊರಬಂದಿದ್ದರು.
ಅಲ್ಲೇ ಹೋಗುತ್ತಿದ್ದ ಬಸ್ ಚಾಲಕ ಮತ್ತು ನಿರ್ವಾಹಕ ಪಂತ್ ಅವರನ್ನು ರಕ್ಷಿಸಿ ಆಂಬ್ಯುಲೆನ್ಸ್ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದರು. ನಾನು ಭಾರತ ತಂಡದ ಕ್ರಿಕೆಟ್ ಆಟಗಾರ ಎಂದು ಗುರುತು ಪಂತ್ ಬಸ್ ಚಾಲಕನಲ್ಲಿ ತನ್ನ ಗುರುತು ಹೇಳಿಕೊಂಡಿದ್ದಾರೆ. ಈ ಅಪಘಾತದ ಸಿಸಿಟಿವಿ ವಿಡಿಯೋ ಕೂಡ ಹೊರಬಂದಿದ್ದು, ಅದರಲ್ಲಿ ಕಾರು ತುಂಬಾ ವೇಗವಾಗಿತ್ತು ಎಂಬುದು ತಿಳಿದು ಬರುತ್ತದೆ.
ಕ್ರಿಕೆಟಿಗ ರಿಷಬ್ ಪಂತ್ ಒಂಟಿಯಾಗಿ ಕಾರು ಚಲಾಯಿಸಿಕೊಂಡು ರೂರ್ಕಿಗೆ ಹೋಗುತ್ತಿದ್ದಾಗ ನಿದ್ರೆಯ ಮಂಪರು ಬಂದಿದೆ. ಅತಿವೇಗವಾಗಿ ಕಾರು ಚಲಾಯಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಪಂತ್ ಅವರೇ ಅಪಘಾತಕ್ಕೆ ಕಾರಣವಾದ ಅಂಶವನ್ನು ಬಹಿರಂಗ ಪಡಿಸಿದ್ದಾರೆ. ಇನ್ನೂ ತಾಯಿಗೆ ಹೊಸವರ್ಷದ ಅಚ್ಚರಿ ನೀಡುವ ಉದ್ದೇಶದಿಂದ ಆತ ಕಾರಿನಲ್ಲಿ ಏಕಾಂಗಿಯಾಗಿ ಪಯಣಿಸಿದ್ದರು ಎಂದು ತಿಳಿದು ಬಂದಿದೆ.
ಭಾರತೀಯ ಕ್ರಿಕೆಟ್ ತಂಡದಲ್ಲಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಅವರ ಕುಟುಂಬವು ಮೂಲತಃ ಪಿಥೋರಗಢ ಜಿಲ್ಲೆಯ ಗಂಗೊಳ್ಳಿಹತ್ ತೆಹ್ಸಿಲ್‌ನವರು. ಪ್ರಸ್ತುತ, ರಿಷಬ್ ಪಂತ್ ಅವರ ಕುಟುಂಬವು ರೂರ್ಕಿಯ ಅಶೋಕ್ ನಗರ ಧಂಧೇರಾದಲ್ಲಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ: ನಿದ್ರೆಯ ಮಂಪರು, ಅತಿವೇಗದಿಂದ ಅಪಘಾತ: ರಿಷಭ್ ಪಂತ್ ದೆಹಲಿಗೆ ಏರ್ಲಿಫ್ಟ್ ಸಾಧ್ಯತೆ
ಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದ ಗಾಯಾಳು ರಿಷಬ್ ಪಂತ್ ಔಟ್?: ರೇಸ್ನಲ್ಲಿ ಉಪೇಂದ್ರ, ಭರತ್